September 19, 2024

ಹೊಸ ರೂಪ ವಿನ್ಯಾಸದೊಂದಿಗೆ ಮಲ್ನಾಡ್ ಟಿವಿ ರಿಲಾಂ‌ಚ್

0
ಮಲ್ನಾಡ್ ಟಿವಿಯ ರಿಲಾಂಚಿಂಗ್

ಮಲ್ನಾಡ್ ಟಿವಿಯ ರಿಲಾಂಚಿಂಗ್

ಮಲ್ನಾಡ್ ಟಿವಿಯು 8 ವರ್ಷಗಳನ್ನು ಪೂರೈಸಿ 9 ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಸುಸಂದಭದಲ್ಲಿ ಮಲ್ನಾಡ್ ಟಿವಿಯ ರಿಲಾಂಚಿಂಗ್ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಸವ ತತ್ವ ಪೀಠದ ಡಾ|| ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿಗಳು ಹಾಗೂ ಸಿರಗಾಪುರದ ಶ್ರೀ ಗುರುದತ್ತ ಶ್ರೀ ಚೈತನ್ಯ ಷೋಡಶೀ ಸೇವಾ ಆಶ್ರಮದ ಶ್ರೀ ದತ್ತ ಚೈತನ್ಯ ಸ್ವರೂಪಿ ಅಶೋಕ್ ಗಣಪತಿ ಶರ್ಮಾರವರು ಸೇರಿದಂತೆ ಇತರರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು.

ನಗರದ ಆದ್ರಿಕಾ ಹೋಟೆಲ್‌ನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಂತಹ ಪೂಜ್ಯರು ವಾಹಿನಿಯ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ರೂಪ ಮತ್ತು ವಿನ್ಯಾಸದೊಂದಿಗೆ ಆರಂಭವಾಗುತ್ತಿರುವುದು ನಿಜಕ್ಕೂ ಮೆಚ್ಚುವ ಸಂಗತಿ. ಒಂದು ಗಿಡಕ್ಕೆ ಕಸಿ ಕಟ್ಟುವ ರೀತಿಯಲ್ಲಿ ಇಂದು ಎರಡು ಮಾಧ್ಯಮಗಳು ಸೇರಿಕೊಂಡು ಹೊಸ ವಿಚಾರಗಳನ್ನು ಜನರಿಗೆ ವಿಸ್ತರಿಸುವ ನಿಟ್ಟಿನಲ್ಲಿ ಒಂದು ಹೊಸ ಪ್ರಯತ್ನವನ್ನು ಮಾಡುತ್ತಿದ್ದು, ಇದರಿಂದ ಉತ್ತಮವಾದ ಫಲಿತಾಂಶ ಹೊರಬರಲು ಸಾಧ್ಯ ಎಂದು ತಿಳಿಸಿದರು.

ಬಹು ಮಾಧ್ಯಮಗಳು ಇಂದು ಸ್ಥಳೀಯ ಸುದ್ದಿಗಳಿಗೆ ಸೂಕ್ತ ಮಾನ್ಯತೆಯನ್ನು ನೀಡಬೇಕು ಇಂದು ಈ ಸಂಸ್ಥೆಯ ಮಾಲೀಕರು ದೊಡ್ಡ ತಂಡವನ್ನ ನಿರ್ಮಾಣ ಮಾಡಿಕೊಂಡು ಬಂಡವಾಳ ಹಾಕಿರುವ ಇವರಿಗೆ ಹಲವಾರು ಸವಾಲುಗಳು ಎದುರಾಗಿದ್ದು, ಈ ಸವಾಲುಗಳನ್ನು ಎದುರಿಸಬೇಕಾದರೆ ಹೊಸತನವನ್ನು ಅಳವಡಿಸಿಕೊಂಡು ಸಮಾಜದ ಕಟ್ಟಡ ವ್ಯಕ್ತಿಯ ಧ್ವನಿಯಾಗಿ ಕರ್ತವ್ಯ ನಿರ್ವಹಿಸುವಂತಹ ಕೆಲಸವಾಗಬೇಕು ಎಂದು ಹೇಳಿದರು.

ಮಲೆನಾಡು ಮಾಧ್ಯಮದ ಪ್ರಾರಂಭೋತ್ಸವಕ್ಕೆ ಆಗಮಿಸಿದ್ದು ತುಂಬಾ ಸಂತೋಷದಾಯಕವಾಗಿದೆ ಹೇಗೆ ಭೂಮಿಗೆ ಬಿತ್ತಿದ ಬೀಜ ಮೊಳಕೆ ಒಡೆದು ಫಲವನ್ನು ಕೊಡುತ್ತದೆಯೋ ಆ ರೀತಿಯಲ್ಲಿ ಈ ಸಂಸ್ಥೆಯು ಬೆಳೆದು, ಇನ್ನು ಗಮನಕ್ಕೆ ಬರೆದಿರುವಂತಹ ವಿಷಯಗಳನ್ನ ಸಮಾಜದ ಮುನ್ನೆಲೆಗೆ ತರುವಂತಹ ಕೆಲಸದ ಜೊತೆಗೆ ಸಾರ್ವಜನಿಕರ ಧ್ವನಿಯಾಗಿ ಈ ಮಾಧ್ಯಮವು ಕರ್ತವ್ಯ ನಿರ್ವಹಿಸಬೇಕು ಎಂದರು.

ಜನಪರವಾಗಿ, ಜನಸ್ನೇಹಿಯಾಗಿ, ಜನರ ಧ್ವನಿಯಾಗಿ ಯಾವುದೇ ಸಣ್ಣಪುಟ್ಟ ಆರೋಪಗಳಿಲ್ಲದೆ ಈ ಮಾಧ್ಯಮ ಬೆಳೆದು ಬಂದಿರುವ ರೀತಿ ನಿಜಕ್ಕೂ ಹೆಮ್ಮೆತರುತ್ತದೆ  ಈ ವಾಹಿನಿಯು ಇನ್ನೂ ಉನ್ನತ ಮಟ್ಟಕ್ಕೆ ಏರಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಆಶೀರ್ವದಿಸಿದರು.

ವಾಹಿನಿಯ ವೆಬ್‌ಸೈಟ್ ಅನಾವರಣವನ್ನು ಶಾಸಕರಾದ ಎಚ್.ಡಿ. ತಮ್ಮಯ್ಯರುವರು,  ಫೇಸ್‌ಬುಕ್ ಖಾತೆ ಅನಾವರಣವನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮಲ್ನಾಡ್ ಟಿವಿ ಶೋ ರೀಲ್ ಅನಾವರಣನ್ನು ಲೈಫ್ ಲೈನ್ ಫೀಡ್ಸ್ (ಇಂಡಿಯಾ) ಪ್ರೈವೇಟ್  ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಕಿಶೋರ್ ಕುಮಾರ್ ಹೆಗಡೆಯವರು, ಇನ್ಸ್ಟಾಗ್ರಾಮ್ ಖಾತೆಯನ್ನು , ಎಕ್ಸ್ ಖಾತೆಯನ್ನು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಟಿ. ರಾಜಶೇಖರ್ ಸೇರಿದಂತೆ ಥ್ರೆಡ್ಸ್ ಖಾತೆಯನ್ನು, ಯುಟ್ಯೂಬ್ ಚಾನೆಲ್ ಖಾತೆಯನ್ನು ಸಹ ಅನಾವರಣ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹಿಂದೂ ಎಕನಾಮಿಕ್ ಫೋರಂನ ಜಿಲ್ಲಾಧ್ಯಕ್ಷರಾದ ಲಕ್ಷ್ಮೀಶ್ ಎಚ್.ಪಿ, ನೈರುತ್ಯ ಶಿಕ್ಷಕರ ವಿಧಾನಸಭಾ ಪರಿಷತ್ ಸ್ವತಂತ್ರ ಅಭ್ಯರ್ಥಿ ನಂಜೇಶ್ ಬೆನ್ನೂರು, ಎ.ಐ.ಟಿ. ಕಾಲೇಜ್ ಪ್ರಾಂಶುಪಾಲರಾದ ಡಾ|| ಜಯದೇವ್, ಸಾಯಿ ಏಂಜಲ್ಸ್ ಶಿಕ್ಷಣ ಸಂಸ್ಥೆಯ ಡಾ|| ಎಂ.ಜೆ. ಕಾರ್ತಿಕ್, ಸೇಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕರಾದ ಡಾ|| ಗ್ರಾಗರಿ ವಿನೋದ್ ಲೋಬೊ, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಪಿ. ರಾಜೇಶ್ ಸೇರಿದಂತೆ ಇತರರು  ಉಪಸ್ಥಿತರಿದ್ದರು.

Malnad TV Relaunch

About Author

Leave a Reply

Your email address will not be published. Required fields are marked *

You may have missed