September 19, 2024

ದೀಪಾವಳಿಗೆ ಸ್ಥಳೀಯರು ತಯಾರು ಮಾಡಿದ ವಸ್ತು ಖರೀದಿ ಮಾಡಬೇಕು

0
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ನಗರದ ಕುಂಬಾರ ಬೀದಿಗೆ ಭೇಟಿ ನೀಡಿ ಮಣ್ಣಿನ ಹಣತೆಗಳನ್ನು ಖರೀದಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ನಗರದ ಕುಂಬಾರ ಬೀದಿಗೆ ಭೇಟಿ ನೀಡಿ ಮಣ್ಣಿನ ಹಣತೆಗಳನ್ನು ಖರೀದಿಸಿದರು.

ಚಿಕ್ಕಮಗಳೂರು: ಓಕಲ್ ಫಾರ್ ಲೋಕಲ್ ಹೆಸರಿನಲ್ಲಿ ಸ್ಥಳೀಯ ಜನರು ತಯಾರಿಸುವ ವಸ್ತುಗಳನ್ನು ಖರೀದಿಸಿ ಹಬ್ಬವನ್ನಾಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ನಗರದ ಕುಂಬಾರ ಬೀದಿಗೆ ಭೇಟಿ ನೀಡಿ ಮಣ್ಣಿನ ಹಣತೆಗಳನ್ನು ಖರೀದಿಸಿದರು.

ಈ ವೇಳೆ ಮಾತನಾಡಿದ ಅವರು, ದೀಪಾವಳಿಯಲ್ಲಿ ನಮ್ಮೂರಿನಲ್ಲಿ ನಮ್ಮ ಜನರೇ ತಯಾರು ಮಾಡಿದ ವಸ್ತುಗಳನ್ನು ಖರೀದಿ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದಾರೆ. ಓಕಲ್ ಫಾರ್ ಲೋಕಲ್ ಎನ್ನುವ ಹೆಸರನ್ನು ಅದಕ್ಕೆ ಇಟ್ಟಿದ್ದಾರೆ ಎಂದರು.

ದೀಪಾವಳಿಯಲ್ಲಿ ಹೊರದೇಶಗಳಿಂದ ಬರುವಂತಹ ದೀಪಗಳು ಇನ್ನಿತರೆ ವಸ್ತುಗಳನ್ನ ಖರೀದಿಸುವ ಕೆಟ್ಟ ಪದ್ಧತಿ ನಮ್ಮ ದೇಶದಲ್ಲಿ ಬೆಳೆದಿತ್ತು. ನಮ್ಮ ಹಿರಿಯರು ನಮ್ಮ ಊರುಗಳಲ್ಲೇ ತಯಾರಾದ ವಸ್ತುಗಳನ್ನು ಖರೀದಿಸಿ ಹಬ್ಬ ಆಚರಿಸುತ್ತಿದ್ದರು. ಅವರಿಗೆ ವ್ಯಾಪಾರದ ಜೊತೆಗೆ ಹಬ್ಬವೂ ಚೆನ್ನಾಗಿ ಆಗುತ್ತಿತ್ತು. ಕಾಲಾಂತರದಲ್ಲಿ ಇದನ್ನು ನಾವು ಬಿಟ್ಟಿದ್ದೆವು ಎಂದರು.

ಇದಕ್ಕಾಗಿ ಮತ್ತೆ ಓಕಲ್ ಫಾರ್ ಲೋಕಲ್ ಎನ್ನುವ ಹೆಸರಲ್ಲಿ ನಾವೇಲ್ಲರೂ ನಮ್ಮೂರಿನಲ್ಲಿ ತಯಾರಾಗುವ ದೀಪಗಳನ್ನು ಖರೀದಿಸೋಣ ಇಷ್ಟು ದಿನಗಳ ಕಾಲ ನಾನೂ ಸಹ ಬೆಳ್ಳಿ ಅಥವಾ ಕಂಚಿನ ದೀಪಗಳನ್ನು ಉಪಯೋಗಿಸುತ್ತಿದ್ದೆ. ಈ ಬಾರಿ ಮಣ್ಣಿನ ದೀಪಗಳನ್ನೇ ಹಚ್ಚಿ ಹಬ್ಬ ಆಚರಿಸಬೇಕು ಎಂದು ತೀರ್ಮಾನಿಸಿದ್ದೇನೆ. ಅದಕ್ಕಾಗಿ ನಾನೂ ಸಹ ಮಣ್ಣಿನ ದೀಪಗಳನ್ನು ಖರೀದಿ ಮಾಡಿದ್ದೇನೆ. ಇದಕ್ಕಾಗಿ ಕುಂಬಾರರ ಬೀದಿಗೆ ಭೇಟಿ ಕೊಟ್ಟಿದ್ದೇನೆ. ಇಲ್ಲಿನ ಜನರೇ ತಯಾರಿಸಿರುವ ದೀಪಗಳನ್ನು ಖರೀದಿಸಿದಿದ್ದೇನೆ ಎಂದರು.

ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರವಿವೆ. ಹಿಂದೂಗಳ ಹಬ್ಬಗಳಿಗೆ ತೊಂದರೆ ಕೊಡುವುದು, ಪೊಲೀಸರನ್ನು ಕಳಿಸಿ ಜಪ್ತಿ ಮಾಡಿಸುವುದು ನಿರಂತರವಾಗಿ ನಡೆದಿದೆ. ಅವರಿಗೆ ಟಿಪ್ಪು ಜಯಂತಿ ಮಾಡುವುದು ಖುಷಿ ಕೊಡುತ್ತದೆ. ಹಿಂದೂ ಹಬ್ಬ ಆಚರಣೆ ಮಾಡುವುದು ದುಃಖ ಕೊಡುತ್ತದೆ. ಆದರೆ ಜನರು ತುಂಬಾ ಖುಷಿಯಿಂದ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ಎಂದು ಹೇಳಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಮುಖಂಡರುಗಳಾದ ನರೇಂದ್ರ, ನಾರಾಯನ ಸ್ವಾಮಿ, ಶ್ರೀನಿವಾಸ್ ಇತರರು ಇದ್ದರು.

Union Minister Shobha Karandlaje

About Author

Leave a Reply

Your email address will not be published. Required fields are marked *

You may have missed