September 19, 2024

ಕಾಂಗ್ರೆಸ್ ಪಕ್ಷ ಟೀಕಿಸುವ ನೈತಿಕ ಹಕ್ಕು ಬಿಜೆಪಿಗೆ ಇಲ್ಲ

0
ಎಐಸಿಸಿ ಕಾರ್ಯದರ್ಶಿ ಬಿ.ಎಂ ಸಂದೀಪ್ ಪತ್ರಿಕಾಗೋಷ್ಠಿ

ಎಐಸಿಸಿ ಕಾರ್ಯದರ್ಶಿ ಬಿ.ಎಂ ಸಂದೀಪ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ.ವಿಜಯೇಂದ್ರ ಅವರ ಆಯ್ಕೆಯಿಂದ ಬಿಜೆಪಿ ರಾಜ್ಯದಲ್ಲಿ ಎಲ್ಲಾ ನೈತಿಕತೆಯನ್ನು ಕಳೆದುಕೊಂಡಂತಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ ಸಂದೀಪ್ ವ್ಯಂಗ್ಯವಾಡಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಅವರು ಮಾಜಿ ಶಾಸಕ ಸಿ.ಟಿ.ರವಿ ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರೆ ನಾಯಕರುಗಳು ಬಿಜೆಪಿ ಒಂದು ಕೇಡರ್ ಬೇಸ್ ಪಾರ್ಟಿ, ಜೊತೆಗೆ ಶಿಸ್ತಿನ ಪಾರ್ಟಿ ಹಾಗೂ ತಳ ಅಂತರದಲ್ಲಿ ದುಡಿದವರಿಗೆ ಮಾತ್ರ ಅವಕಾಶ ಮತ್ತು ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಪದೇಪದೇ ಭಾ?ಣದಲ್ಲಿ ಹೇಳುವುದರೊಂದಿಗೆ ಕಾಂಗ್ರೆಸ್ ಪಕ್ಷವನ್ನು ದೂರುತ್ತಲೇ ಬಂದಿದ್ದಾರೆ ಎಂದು ಹೇಳಿದರು.

ವಿಜಯೇಂದ್ರ ಬಜರಂಗದಳದಲ್ಲಿ. ವಿಶ್ವ ಹಿಂದು ಪರಿ?ತ್ ಅಥವಾ ಯಾವ ಆರ್.ಎಸ್.ಎಸ್ ಸಂಘಟನೆಯ ಕೆಳ ಹಂತದ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದ್ದಾರೆ ಎಂಬುದನ್ನು ಬಿಜೆಪಿ ಸ್ಪ?ಪಡಿಸಬೇಕು. ಬಜರಂಗದಳದಲ್ಲಿ ಮಧ್ಯಮ ಹಾಗೂ ಬಡಕುಟುಂಬದ ಯುವಕರನ್ನು ಪ್ರಚೋದನೆ ಮಾಡಿ ಅವರ ಮನಸ್ಸನ್ನು ಕಲುಷಿತಗೊಳಿಸಿ ಹೊಡೆದಾಡಲು ಬಡಿದಾಡಲು ಬಿಟ್ಟು ನಾಯಕರ ಮಕ್ಕಳನ್ನು ಉನ್ನತ ಹುದ್ದೆಗೆ ನೇಮಕ ಮಾಡಿರುವುದು ಬಿಜೆಪಿ ದ್ವಂದ್ವ ನೀತಿ ಬಹಿರಂಗವಾಗಿದೆ ಎಂದು ಆರೋಪಿಸಿದರು.

ಕೆಲಸವಿಲ್ಲದೆ ಪದವಿಯಿಲ್ಲದೆ ಮಾಜಿ ಸಚಿವರುಗಳಾದ ಕೆ.ಎಸ್.ಈಶ್ವರಪ್ಪ ಮತ್ತು ಸಿ.ಟಿ.ರವಿ ಇನ್ನಾದರೂ ಕಾಂಗ್ರೆಸ್ಸನ್ನು ಟೀಕಿಸಲು ನಿಲ್ಲಿಸಬೇಕು. ಕಿಚನ್ ಕ್ಯಾಬಿನೆಟ್ ಬಗ್ಗೆ ಮಾತನಾಡುವ ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಬಿಜೆಪಿ ಕಿಚನ್‌ನಿಂದ ಹೊರದಬ್ಬಿರುವುದು ಈಗಲಾದರೂ ಅವರಿಗೆ ಮನವರಿಕೆ ಆಗಿದೆ ಎಂದು ಭಾವಿಸುತ್ತೇವೆ ಎಂದರು.

ಬಿಜೆಪಿ ಸ್ಥಾಪನೆಯಾಗಿ ೪೩ ವ?ವಾಗಿದ್ದು, ಈಗಾಗಲೇ ಕುಟುಂಬ ರಾಜಕಾರಣದಲ್ಲಿ ಮುಳುಗಿದೆ. ರಾ?ಮಟ್ಟದಲ್ಲಿ ಅಮಿತ್ ಶಾ ಪುತ್ರ ಜಯ್ ಷಾ, ರಾಜನಾಥ್ ಸಿಂಗ್ ಪುತ್ರ್ರ ಪಂಕಜ್ ಸಿಂಗ್, ಗೋಪಿನಾಥ್ ಮುಂಡೆ ಮಗಳು ಪಂಕಜ ಮುಂಡೆ, ನಾರಾಯಣ್ ರಾಣೇ ಮಗ ನಿತೀಶ್ ರಾಣೇ, ಗಂಗಾಧರ್ ಪಡ್ನಾವಿಸ್ ಮಗ ದೇವೇಂದ್ರ ಪಡ್ನಾವಿಸ್, ಪ್ರೇಮ್‌ಕುಮಾರ್ ಮಗ ಅನುರಾಗ್ ಠಾಕೂರ್ ಈ ರೀತಿ ಪ್ರತಿ ರಾಜ್ಯದಲ್ಲಿ ನೂರಾರು ಉದಾಹರಣೆಗಳು ಇವೆ. ೪೩ ವ?ದ ಈ ಸಣ್ಣ ಸಮಯದಲ್ಲಿ ಇಂತಹ ಅನಾಹುತಗಳು ನಡೆಯುತ್ತಲೇ ಇರುವಾಗ ೧೩೭ ವ? ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಟೀಕಿಸಲು ಬಿಜೆಪಿಯವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಲೇವಡಿ ಮಾಡಿದರು.

ಜಿಲ್ಲೆಯಲ್ಲಿ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಗೊಂದಲದ ಗೂಡಾಗಿರುವ ಬಿಜೆಪಿ ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಗೋ ಬ್ಯಾಕ್ ಶೋಭಾ ಅಭಿಯಾನವನ್ನು ಬಿಜೆಪಿಯವರೇ ಶುರುಮಾಡಿದ್ದರು. ಈ ಬಾರಿ ಜನರು ಬಿಜೆಪಿಗೆ ಗೋ ಬ್ಯಾಕ್ ಹೇಳುವ ಮೂಲಕ ಕರಾವಳಿ ಮೂಲದ ಮುಖಂಡರೊಬ್ಬರು ಹಳ್ಳಿ ಹಳ್ಳಿಗೂ ಫ್ಲೆಕ್ಸ್ ಹಾಕುವ ಮೂಲಕ ಮತ್ತೊಮ್ಮೆ ಗೋ ಬ್ಯಾಕ್ ಶೋಭಾ ಅಭಿಯಾನಕ್ಕೆ ಚಾಲನೆ ಕೊಟ್ಟಿರುವುದು ವಿಪರ್ಯಾಸ ಎಂದು ಟೀಕಿಸಿದರು.

ಇಂತಹ ದಯನೀಯ ಸ್ಥಿತಿಯಲ್ಲಿರುವ ಬಿಜೆಪಿ ತನ್ನನ್ನು ರಿಪೇರಿ ಮಾಡಿಕೊಳ್ಳುವ ಬದಲು ಸಂಸದೆ ಶೋಭಾ ಕರಂದ್ಲಾಜೆ ನಗರದ ಕುಂಬಾರ ಬೀದಿಯಲ್ಲಿ ನಡೆದ ಸಭೆಯೊಂದರಲ್ಲಿ ಚೀನಾ ಆಟಿಕೆಗಳನ್ನು ಉಪಯೋಗಿಸಬೇಡಿ ಎಂದಿರುವುದು ಹಾಸ್ಯಸ್ಪದ ಎಂದರು.

ಚೀನಾ ಭಾರತದ ಭೂ ಪ್ರದೇಶವನ್ನು ಆಕ್ರಮಿಸುತ್ತಿದೆ ಈ ಬಗ್ಗೆ ಚಕಾರವೆತ್ತದ ಕೇಂದ್ರ ಮಂತ್ರಿ, ಮಕ್ಕಳ ಆಟಿಕೆ ವಸ್ತುಗಳ ಬಗ್ಗೆ ಮಾತನಾಡಿ ರಾಜಕೀಯದಲ್ಲಿ ಆಟಿಕೆಯ ವಸ್ತು ಆಗಿದ್ದಾರೆ. ಭಾವನೆಗಳ ಬಗ್ಗೆ ಮಾತನಾಡಿ ಜನರ ಮನಸುಗಳನ್ನು ಹೊಡೆಯುವ ಬಿಜೆಪಿ ಒಂದು ಕಡೆಯಾಗಿದೆ ಎಂದು ದೂರಿದರು.

ಜನರ ಬದುಕನ್ನು ಕಟ್ಟಲು ಐದು ಗ್ಯಾರಂಟಿಗಳ ಜಾರಿಯೊಂದಿಗೆ ಕೃಷಿಕರಿಗೆ ೨೫ ಎಕ್ಕರೆವರೆಗೂ ಗುತ್ತಿಗೆ ನೀಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರ ಅರಣ್ಯ ಹಾಗೂ ಕಂದಾಯ ಭೂಮಿ ಸಮಸ್ಯೆ ಇರುವ ಕಡೆ ಜಂಟಿ ಸರ್ವೆ ಮಾಡುವ ಮೂಲಕ ಗೊಂದಲ ಸರಿಪಡಿಸುವುದರ ಜೊತೆಗೆ ನಿವೇಶನ ರಹಿತರಿಗೆ ನಿವೇಶನ ನೀಡಲು ಮುಂದಾಗಿದೆ ಎಂದು ಬಿ.ಎಂ. ಸಂದೀಪ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ ಮಂಜೇಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ ಶಿವಾನಂದಸ್ವಾಮಿ, ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ನಯಾಜ್ ಅಹಮದ್, ಜಿಲ್ಲಾ ವಕ್ತಾರ ರೂಬಿನ್ ಮೊಸಸ್, ಎಸ್.ಸಿ ಘಟಕದ ಅಧ್ಯಕ್ಷ ಮಲ್ಲೇಶಸ್ವಾಮಿ, ಸಾಮಾಜಿಕ ಜಾಲತಾಣ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಾಯಕ ಇದ್ದರು.

BJP has no moral right to criticize the Congress party

About Author

Leave a Reply

Your email address will not be published. Required fields are marked *

You may have missed