September 19, 2024

ಸಾವಿರಾರು ಭಕ್ತರ ಸಮ್ಮುಖದಲ್ಲಿ ದೀಪೋತ್ಸವಕ್ಕೆ ಚಾಲನೆ

0
Dipotsava started in the presence of thousands of devotees

Dipotsava started in the presence of thousands of devotees

ಚಿಕ್ಕಮಗಳೂರು: ಸಾವಿರಾರು ಭಕ್ತರು ದೇವಿರಮ್ಮನ ಬೆಟ್ಟದ ತುದಿಯಲ್ಲಿ ನೆಲೆಸಿರುವ ದೇವೀರಮ್ಮನವರ ದರ್ಶನಪಡೆದುಕೊಂಡರು, ಚಿಕ್ಕಮಗಳೂರು ತಾಲೂಕು ಬಿಂಡಿಗ ಮಲ್ಲೇನಹಳ್ಳಿಯಲ್ಲಿರುವ ದೇವೀರಮ್ಮ ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನದ ನೀಡುತ್ತಿದ್ದು, ದೇವೀಯನ್ನು ನೋಡಿ ಕಣ್ತುಂಬಿಕೊಳ್ಳಲು ಭಕ್ತರು ಬರಿಗಾಲಲ್ಲೇ ಬೆಟ್ಟವನ್ನೇರುವ ಮೂಲಕ ದೀವಿಯ ದರ್ಶನ ಪಡೆದು ಪಾವನರಾದರು.

ದೀಪಾವಳಿಯ ನರಕಚರ್ತುದಶಿಯಂದು ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ದೇವಿಯ ಅದ್ಧೂರಿ ಜಾತ್ರೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜನ ಜನ ಬರಿಗಾಲಿನಲ್ಲಿಯೇ ಬೆಟ್ಟವನ್ನು ಹತ್ತಿ ಬೆಳಗಿನ ಜಾವದಿಂದಲೇ ದೇವಿಯ ದರ್ಶನ ಪಡೆದು ಪುನೀತರಾದರು.

ಸುಮಾರು ೬೦ ಸಾವಿರಕ್ಕೂ ಅಧಿಕ ಭಕ್ತಾರಿಂದ ದೇವರ ದರ್ಶನವಾಯಿತು.ಮೂರು ಸಾವಿರ ಅಡಿಗಳ ಎತ್ತರವಿರುವ ಬೆಟ್ಟದ ಮೇಲೆ ನೆಲೆಸಿರುವ ದೇವಿರಮ್ಮನವರ ದರ್ಶನ ಪಡೆಯಲುರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಸಾಗರೋಪಾದಿಯಲ್ಲಿ ಬೆಟ್ಟಕ್ಕೆ ಹರಿದುಬಂದರು.

ದೀಪಾವಳಿ ಅಂಗವಾಗಿ ದೇವರಿಗೆ ಮೂರು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.ಹಾಗಾಗಿ ಭಾನುವಾರ ಬೆಳಿಗ್ಗಿಝಾವದಿಂದಲೇ ಬೆಟ್ಟವನ್ನೇರುವುದಕ್ಕೆ ಭಕ್ತರು ಮುಂದಾದರು. ಮಳೆಬಾರದಿರುವುದರಿಂದ ಬೆಟ್ಟವನ್ನೇರಲು ಯಾವುದೇ ತೊಂದರೆಯಾಗಲಿಲ್ಲ. ರಾತ್ರಿ ೧ ಗಂಟೆಯಿಂದಲೇ ಭಕ್ತರು ದೇವೀರಮ್ಮನ ಬೆಟ್ಟವನ್ನು ಹತ್ತಲು ಆರಂಭಿಸಿದರು. ಮಧ್ಯಾಹ್ನ ೩ಗಂಟೆಯವರೆಗೆ ಸುಮಾರು ೭೦ ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದರು. ಬರಿಗಾಲಲ್ಲಿ ಬೆಟ್ಟ ಹತ್ತುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕಣ್ಣುಹಾಯಿಸಿದರೆ ಬೆಟ್ಟದ ತುಂಬೆಲ್ಲಾ ಜನವೋ ಜನ ಕಾಣಿಸುತಿತ್ತು.

ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಗೆ ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಬಸ್‌ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಜಿಲ್ಲೆಯ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಸರ್ಕಾರಿಬಸ್‌ಗಳಲ್ಲಿ ಮಲ್ಲೇನಹಳ್ಳಿಗೆ ತೆರಳಿ ಅಲ್ಲಿಂದ ಬೆಟ್ಟವನ್ನೇರಿ ದೇವಿಯನ್ನು ಕಣ್ತುಂಬಿಕೊಂಡರು.

ಚಿಕ್ಕಮಗಳೂರು ನಗರ ಸೇರಿದಂತೆ ಸುತ್ತಮುತ್ತಲಿನ ಪಟ್ಟಣ ಹಾಗೂ ಊರಿನ ಜನರು ಬಿಂಡಿಗ ದೇವೀರಮ್ಮ ದೇವಾಲಯದಲ್ಲಿ ದೀಪೋತ್ಸವ ಆಗುವವರೆಗೆ ದೀಪಾವಳಿ ಹಬ್ಬವನ್ನು ಆರಂಭಿಸುವುದಿಲ್ಲ. ನರಕನ ಚರ್ತದಶಿಯ ದಿನ ಸಂಜೆ ಬಿಂಡಿಗ ದೇವಿರಮಮ್ಮ ದೇವಾಲಯದಲ್ಲಿ ದೀಪೋತ್ಸವವಾಗುತ್ತದೆ.

ಇಲ್ಲಿನ ದೀಪೋತ್ಸವ ಚಿಕ್ಕಮಗಳೂರು ಸೇರಿದಂತೆ ಅಕ್ಕಪಕ್ಕದ ಎಲ್ಲ ಗ್ರಾಮಗಳಿಗೂ ಕಾಣಿಸುತ್ತದೆ. ಈ ದೀಪವನ್ನು ನೋಡಿದ ಭಕ್ತರು ತಮ್ಮ ಮನೆಯಲ್ಲಿಯೂ ದೇವಿಗೆ ದೀಪ ಬೆಳಗಿ ತಮ್ಮ ಮನೆಯಲ್ಲಿ ಹಬ್ಬವನ್ನು ಆರಂಭಿಸುತ್ತಾರೆ. ದೇವೀರಮ್ಮನ ದೀಪೋತ್ಸವ ನೋಡುವವರೆಗೆ ಈ ದೇವಿಗೆ ನಡೆದುಕೊಳ್ಳುವವರು ಪಟಾಕಿಯನ್ನೂ ಸಿಡಿಸದಿರುವುದು ಇನ್ನೊಂದು ವಿಶೇಷ.

ಜಿಲ್ಲಾಡಳಿತ ಭಕ್ತರಿಗೆ ಅನುಕೂಲವಾಗುವಂತೆಎ ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡಿದ್ದು, ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದೇ ಮೊದಲ ಬಾರಿಗೆ ಮಹಿಳೆಯರಿಗೆ ವಸ್ತ್ರಸಂಹಿತೆ ಜಾರಿಗೊಳಿಸಲಾಗಿತ್ತು. ಯುವತಿ ಮತ್ತು ಮಹಿಳೆಯರು ಪ್ಯಾಂಟ್‌ಧರಿಸಿಬರುವಂತಿರಲಿಲ್ಲ, ಚೂಡಿದಾರ ಮತ್ತು ಸೀರೆಯನ್ನು ಉಟ್ಟು ಬೆಟ್ಟವನ್ನು ಹತ್ತಿದರು. ದೇವೀರಮ್ಮ ದರ್ಶನವನ್ನು ಪಡೆದುಕೊಂಡರು.

ಮಾಜಿ ಸಚಿವ ಸಿ.ಟಿ.ರವಿ, ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಸೇರಿದಂತೆ ಹಲವು ಮುಖಂಡರು ಬರಿಗಾಲಿನಲ್ಲಿಯೇ ಬೆಟ್ಟವನ್ನು ಹತ್ತಿ ದೇವೀರಮ್ಮ ದರ್ಶನ ಪಡೆದುಕೊಂಡರು. ಬೆಟ್ಟವನ್ನು ಹತ್ತಿಬಂದ ಭಕ್ತರಿಗೆ ಕುಡಿಯುವ ನೀರು ಮತ್ತು ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

Dipotsava started in the presence of thousands of devotees

About Author

Leave a Reply

Your email address will not be published. Required fields are marked *

You may have missed