September 19, 2024
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಸುದ್ದಿಗೋಷ್ಠಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಸುದ್ದಿಗೋಷ್ಠಿ

ಚಿಕ್ಕಮಗಳೂರು : ಸಂಪ್ರದಾಯ, ಆಚಾರ, ವಿಚಾರಗಳು ಎಲ್ಲರಿಗೂ ಒಂದೇ ಆಗಿದ್ದು, ದೇವೀರಮ್ಮನವರ ಜಾತ್ರೆಗೆ ಬೆಟ್ಟಕ್ಕೆ ಬರುವ ಭಕ್ತರೆಲ್ಲರೂ ಕೂಡಾ ಅವುಗಳನ್ನು ಪಾಲಿಸಬೇಕು, ಬೆಟ್ಟ ಹತ್ತುವ ಮಾರ್ಗ ಮಧ್ಯದಲ್ಲಿ ಯಾರೂ ಪಟಾಕಿ ಸಿಡಿಸಬಾರದು. ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ತಿಳಿಸಿದರು.

ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ೧೨ ರಿಂದ ೧೮ರವರೆಗೆ ತಾಲೂಕಿನ ಬಿಂಡಿಗ ಮಲ್ಲೇನಹಳ್ಳಿಯ ಆದಿಶಕ್ತ್ಯಾತ್ಮಕ ಶ್ರೀದೇವಿರಮ್ಮನವರ ಜಾತ್ರೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಆಚರಣೆ ಮಾಡಲಾಗುತ್ತಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆಯನ್ನು ಕೈಗೊಳ್ಳಲಾಗಿದೆ. ದೇವಸ್ಥಾನದ ಸಮಿತಿಯ ವತಿಯಿಂದಲೂ ಕೂಡ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

ಭದ್ರತೆಯ ದೃಷ್ಟಿಯಿಂದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿಗಳು, ೧೦ ಇನ್ಸ್ಪೆಕ್ಟರ್‌ಗಳು, ೫ ಡಿಎಆರ್, ೩ ಕೆಎಸ್‌ಆರ್‌ಪಿ ಸೇರಿದಂತೆ ಒಟ್ಟು ಸಾವಿರ ಮಂದಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಜನಸಂದಣಿ ಹೆಚ್ಚಾಗಿರುವ ಕಾರಣ ಪೊಲೀಸರ ಸಂವಹನಕ್ಕಾಗಿ ೩೦ ಮೆಘಾ ಫೋನ್, ಟಾರ್ಚ್ ಲೈಟ್‌ಳನ್ನು ಬಳಸಿಕೊಳ್ಳಲಾಗುತ್ತಿದೆ. ದೇವೀರಮ್ಮ ಬೆಟ್ಟ ನೈಸರ್ಗಿಕ ಪ್ರದೇಶವಾಗಿರುವುದರಿಂದ ಸಾಮಾನ್ಯವಾಗಿ ಆಚೀಚೆಗೆ ಹೋಗುವವರು ಕೂಡ ಹೆಚ್ಚಾಗಿರುತ್ತದೆ. ಆದ್ದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅಗ್ನಿ ಶಾಮಕ ದಳದ ಒಂದು ತಂಡದಲ್ಲಿ ಐದು ಮಂದಿ ಒಳಗೊಂಡಂತೆ ಈಗಾಗಲೇ ಐದು ತಂಡಗಳನ್ನು ನಿಯೋಜನೆ ಮಾಡಲು ತಿಳಿಸಿದ್ದು, ಇನ್ನೂ ಎರಡು ಹೆಚ್ಚುವರಿ ತಂಡಗಳನ್ನ ನಿಯೋಜಿಸುವಂತೆ ಮನವಿ ಮಾಡಲಾಗಿದೆ. ಒಟ್ಟು ೭ ತಂಡಲ್ಲಿ ೩೫ ಮಂದಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಭಕ್ತಾಧಿಗಳ ರಕ್ಷಣೆಯ ದೃಷ್ಟಿಯಿಂದ ಚಿಕ್ಕಮಗಳೂರು ವಿಷನ್ ಮತ್ತು ಚಿಕ್ಕಮಗಳೂರು ರಕ್ಷಣಾ ಪಡೆಯ ತಂಡ, ಎಸ್.ಡಿ.ಆರ್‌ಎಫ್‌ನಿಂದ ತರಬೇತಿ ಪಡೆದವರೂ ಕೂಡಾ ರಕ್ಷಣಾ ತಂಡದಲ್ಲಿ ಭಾಗವಹಿಸುವಂತೆ ಕೇಳಿಕೊಳ್ಳಲಾಗುವುದು. ಬೆಟ್ಟಕ್ಕೆ ಬರುವ ಭಕ್ತಾಧಿಗಳು, ಸಾರ್ವಜನಿಕರು ಜಿಲ್ಲಾಡಳಿತ, ಪೊಲೀಸ್ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸಬೇಕು. ಬೆಟ್ಟ ಹತ್ತುವ ಮಾರ್ಗದಲ್ಲಿ ಆರೋಗ್ಯ, ರಕ್ಷಣಾ ತಂಡಗಳು ಕಾರ್ಯ ನಿರ್ವಹಿಸಲಿದ್ದು, ಶನಿವಾರ ಮಧ್ಯಾಹ್ನದಿಂದಲೇ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಬೆಟ್ಟದಲ್ಲಿ ಭಾನುವಾರ ಸಂಜೆಯವರೆಗೂ ಪೊಲೀಸರು ಕಾರ್ಯ ನಿರ್ವಹಿಸಲಿದ್ದಾರೆ. ಆರೋಗ್ಯ ಇಲಾಖೆಯಿಂದ ೪ ಆಂಬುಲೆನ್ಸ್, ಹೆಲ್ತ್ ಟೀಮ್ ಬೆಟ್ಟದ ಭಾಗದಲ್ಲಿ ಕಾರ್ಯನಿರ್ವಹಿಸಿದರೆ ತಜ್ಞ ವೈದ್ಯರನ್ನೊಳಗೊಂಡ ಒಂದು ತಂಡ ಮಲ್ಲೇನಹಳ್ಳಿಯಲ್ಲಿ ಕಾರ್ಯ ನಿರ್ವಹಿಸಲಿದೆ .

ಬೆಟ್ಟಕ್ಕೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಸಾರಿಗೆ ಬಳಸುವ ಮೂಲಕ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಹಕರಿಸಬೇಕು. ವಾಹನ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ತರೀಕೆರೆ ಭಾಗದಿಂದ ಬರುವ ವಾಹನಗಳ ನಿಲುಗಡೆಗೆ ಕುಮಾರಗಿರಿ ಬಳಿ ವ್ಯವಸ್ಥೆ ಮಾಡಲಾಗಿದ್ದು, ಚಿಕ್ಕಮಗಳೂರು ಕಡೆಯಿಂದ ಬರುವ ವಾಹನಗಳ ನಿಲುಗಡೆಗಾಗಿ ಮಲ್ಲೇನಹಳ್ಳಿ ಗ್ರಾಮದ ಪ್ರೌಢಶಾಲೆಯ ಆವರಣದಲ್ಲಿ ವ್ಯವಸ್ಥೆಮಾಡಲಾಗಿದೆ.

District Superintendent of Police Dr. Vikram Amate press conference

 

About Author

Leave a Reply

Your email address will not be published. Required fields are marked *

You may have missed