September 19, 2024

ಕಾಫಿ ಸೇರಿದಂತೆ ತೋಟಗಳ ಹಿತರಕ್ಷಣೆಗೆ ಕೆಪಿಎ ಬದ್ಧ

0
ದಿ ಕರ್ನಾಟಕ ಪ್ಲಾಂಟರ್ ಅಸೋಸಿಯೇಷನ್ ೬೫ನೆಯ ವಾರ್ಷಿಕ ಮಹಾಸಭೆ ವಿಧಾನಪರಿಷತ್ ಮಾಜಿಸಭಾಪತಿ ಬಿ.ಎಲ್.ಶಂಕರ್ ಕಾರ್‍ಯಕ್ರಮ ಉದ್ಘಾಟಿಸಿದರು

ದಿ ಕರ್ನಾಟಕ ಪ್ಲಾಂಟರ್ ಅಸೋಸಿಯೇಷನ್ ೬೫ನೆಯ ವಾರ್ಷಿಕ ಮಹಾಸಭೆ ವಿಧಾನಪರಿಷತ್ ಮಾಜಿಸಭಾಪತಿ ಬಿ.ಎಲ್.ಶಂಕರ್ ಕಾರ್‍ಯಕ್ರಮ ಉದ್ಘಾಟಿಸಿದರು

ಚಿಕ್ಕಮಗಳೂರು: ಕಾಫಿ ಕಾಫಿ ಸೇರಿದಂತೆ ತೋಟಗಳ ಹಿತರಕ್ಷಣೆಗೆ ಕೆಪಿಎ ಬದ್ಧಸೇರಿದಂತೆ ತೋಟಗಳ ಹಿತರಕ್ಷಣೆಗೆ ಶ್ರಮಿಸುತ್ತಿರುವ ಕೆಪಿಎ ಬೆಳೆಗಾರರು ಹಾಗೂ ಸರ್ಕಾರದ ನಡುವಿನ ಕೊಂಡಿಯಂತೆ ಕಾರ್‍ಯನಿರ್ವಹಿಸುತ್ತಿವೆ ಎಂದು ಅಧ್ಯಕ್ಷ ಮಹೇಶಶಶಿಧರ್ ನುಡಿದರು.

ದಿ ಕರ್ನಾಟಕ ಪ್ಲಾಂಟರ್ ಅಸೋಸಿಯೇಷನ್ ನಗರದ ಸೆರಾಯ್ ಸಭಾಂಗಣದಲ್ಲಿ ನಡೆದ  ೬೫ನೆಯ ವಾರ್ಷಿಕ ಮಹಾಸಭೆಯನ್ನು ಯಶಸ್ವಿಯಾಗಿ ನಡೆಸಿತು.

ಕಾಫಿ, ಟೀ, ಕಾಳುಮೆಣಸು, ಏಲಕ್ಕಿ ಮತ್ತು ರಬ್ಬರ್ ತೋಟಗಳನ್ನು ನಿರ್ವಹಿಸುತ್ತಿರುವ ಬೆಳೆಗಾರರ ಸಂಘಟನೆಯಾಗಿ ಪ್ರಾರಂಭಗೊಂಡಿರುವ ಕೆಪಿಎ ಕಳೆದ ೬೫ವರ್ಷಗಳಿಂದ ಸದಸ್ಯರ ಹಿತಸಂರಕ್ಷಣೆಗೆ ಆದ್ಯತೆ ನೀಡಿದೆ. ಕಾರ್ಮಿಕರೊಂದಿಗೆ ವೇತನ ಮತ್ತಿತರ ಸೌಲಭ್ಯಗಳ ಮಾತುಕತೆ, ಕೇಂದ್ರ ಮತ್ತು ರಾಜ್ಯಸರ್ಕಾರಗಳ ವಿವಿಧ ಇಲಾಖೆಗಳೊಂದಿಗೆ ನಿರಂತರ ಸಂಪರ್ಕಹೊಂದಿ ನೀತಿ ನಿರೂಪಣೆ ಜೊತೆಗೆ ಸದಸ್ಯರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶ್ರಮಿಸಲಾಗಿದೆ ಎಂದವರು ನುಡಿದರು.

ಕಾಫಿ, ಟೀ ಸೇರಿದಂತೆ ತೋಟಗಳ ನಿರ್ವಹಣೆ ಸವಾಲಾಗಿದೆ. ನಿರಂತರವಾಗಿ ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಸೌಹಾರ್ದಯುತವಾಗಿ ಪರಿಹರಿಸಲು ಶ್ರಮಿಸುತ್ತಿದೆ ಎಂದ ಮಹೇಶ್‌ಶಶಿಧರ್, ಕೆಪಿಎ ಸುಗಮ ಕಾರ್‍ಯನಿರ್ವಹಣೆಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಸಾಮಾಜಿಕ ಬದ್ಧತೆಯ ಹಿನ್ನಲೆಯಲ್ಲಿ ೫೪ ವಿದ್ಯಾರ್ಥಿಗಳಿಗೆ ೪.೦೬ಲಕ್ಷರೂ.ಗಳ ವಿದ್ಯಾರ್ಥಿವೇತನವನ್ನು ಇಂದು ವಿತರಿಸಲಾಗಿದೆ ಎಂದ ಮಹೇಶ್, ತೋಟಕಾರ್ಮಿಕರು ಮಕ್ಕಳ ಜೊತೆಗೆ ಕೆಪಿಎ ಸಿಬ್ಬಂದಿಗಳ ಮಕ್ಕಳಾದ ರಿದಿದೇವಾನಂದ ಮತ್ತು ಸಂಜನಾಚಂದ್ರಶೇಖರ್ ಅವರಿಗೂ ನೆರವು ನೀಡಲಾಗಿದೆ ಎಂದರು.

ವಿಧಾನಪರಿಷತ್ ಮಾಜಿಸಭಾಪತಿ ಬಿ.ಎಲ್.ಶಂಕರ್ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ ಬೆಳೆಗಾರರು ಸಂಘಟಿತರಾಗಿ ಪ್ರಯತ್ನಿಸಿದರೆ ಒಂದಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಾಧ್ಯವಿದೆ ಎಂದರು.

ಕೆಪಿಎ ಕಾರ್‍ಯದರ್ಶಿಯಾಗಿ ಕಾರ್‍ಯನಿರ್ವಹಿಸಿ ಸೇವಾ ನಿವೃತ್ತಿಕೊಂಡ ಅನಿಲ್‌ಸವೂರ್ ಅವರನ್ನು ಸನ್ಮಾನಿಸಲಾಯಿತು.

ಕೆಪಿಎ ಉಪಾಧ್ಯಕ್ಷ ಕೆ.ಜಿ.ರಾಜೀವ್ ವಂದಿಸಿದರು. ನಿಕಟಪೂರ್ವ ಅಧ್ಯಕ್ಷ ರಾಮನಾಥನ್, ಉಪಾಸಿ ಅಧ್ಯಕ್ಷ ಶ್ರೀಧರನ್, ನಿಕಟಪೂರ್ವ ಜಾಫ್ರೀ ರೆಬೆಲೋ, ಉಪಾಸಿ ಕಾಫಿಸಮಿತಿ ಅಧ್ಯಕ್ಷ ಅಜಯ್‌ತಿಪ್ಪಯ್ಯ ಮತ್ತಿತರರು ವೇದಿಕೆಯಲ್ಲಿದ್ದರು. ಇತ್ತೀಚಿಗೆ ನಿಧನಹೊಂದಿದ ಯು.ಎಂ.ಉಮಾಶಂಕರ್, ಸಿ.ಎನ್.ಗಿರಿಜೇಶ್ ಸೇರಿದಂತೆ ಒಂಭತ್ತು ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾಫಿಮಂಡಳಿ ನೂತನ ಅಧ್ಯಕ್ಷರಾಗಿ ನೇಮಕಗೊಂಡ ದೀಪಕ್ ಅವರಿಗೆ ಶುಭಹಾರೈಸಲಾಯಿತು.

ಕೆಪಿಎ ಉಪಾಸಿ ತಾಂತ್ರಿಕ ಅಧಿವೇಶನದಲ್ಲಿ ಮೂರು ಗೋಷ್ಠಿಗಳನ್ನು ಏರ್ಪಡಿಸಿದ್ದು, ಕಾಫಿಮಂಡಳಿ ಕಾರ್‍ಯದರ್ಶಿ ಹಾಗೂ ಸಿಇಓ ಡಾ.ಕೆ.ಎಸ್.ಜಗದೀಶ್ ಉದ್ಘಾಟಿಸಿ ಶುಭ ಹಾರೈಸಿದರು.

ತೋಟಗಳಲ್ಲಿ ಮಾನವ ವನ್ಯಪ್ರಾಣಿ ಸಂಘರ್ಷ ಕುರಿತಂತೆ ಚೆನ್ನೈ ಮೆಟ್ರೋ ಪ್ರಧಾನ ಸಲಹೆಗಾರರಾದ ವಿಶ್ರಾಂತ ಐಎಸ್‌ಎಫ್ ಅಧಿಕಾರಿ ಡಾ.ರಾಜೀವ್‌ಕೆ.ಶ್ರೀವಾತ್ಸವ ಪವರ್‌ಪಾಯಿಂಟ್‌ನೊಂದಿಗೆ ವಿಶ್ಲೇಷಿಸಿದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಒಂದಿಲ್ಲೊಂದು ವನ್ಯಪ್ರಾಣಿಗಳಿಂದ ಜನ ವಸತಿಗೆ-ಕೃಷಿ ತೋಟಗಾರಿಕೆಗೆ ತೊಂದರೆ ಆಗುತ್ತಲೇ ಇದೆ. ಅವುಗಳ ಜೀವನಪದ್ಧತಿಯನ್ನು ಅಧ್ಯಯನ ಮಾಡಿ ಅರಣ್ಯದೊಳಗೆ ಸೂಕ್ತ ವಾತಾವರಣವನ್ನು ಸೃಷ್ಟಿಸುವುದೇ ಇದಕ್ಕೆ ಪ್ರಮುಖ ಪರಿಹಾರ. ವೈಜ್ಞಾನಿಕವಾದ ವಾಸ್ತವಾಂಶದ ನಿರ್ವಹಣೆ ಅಗತ್ಯವೆಂದು ಪ್ರತಿಪಾದಿಸಿದರು.

’ಸ್ಪೆಷಲ್ ಕಾಫಿ’ ಕೃಷಿ ಹಾಗೂ ಉತ್ಪಾದಕತೆ ಕುರಿತಂತೆ ಸ್ಪೆಷಲ್‌ಕಾಫಿ ಅಕಾಡೆಮಿ ಆಫ್ ಇಂಡಿಯಾ ಅಧ್ಯಕ್ಷ ಡಾ.ಸುಹಾಸ್ ದ್ವಾರಕನಾಥ್ ಮಾಹಿತಿ ನೀಡಿದರು. ಸುಬ್ಕೋ ಸ್ಪೆಷಾಲಿಟಿ ಕಾಫಿ ರೋಸ್ಟರ್‍ಸ್ ಸ್ಥಾಪಕ ಮುಂಬೈನ ರಾಹುಲರೆಡ್ಡಿ ಮಾತನಾಡಿದರು.

ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಸೇನು ರೋಬಸ್ಟಾ ಕಾಫಿ ಪರಾಗಸ್ಪರ್ಶ ಕುರಿತಂತೆ ವಿಶೇಷ ಮಾಹಿತಿ ನೀಡಿದರು. ಕಾಫಿ ಉದ್ಯಮಕ್ಕೆ ಸಂಬಂಧಪಟ್ಟ ಪರಿಕರಗಳ ಪ್ರದರ್ಶಿನಿಯನ್ನು ಆಯೋಜಿಸಲಾಗಿತ್ತು. ಕೆಪಿಎ ಅಧ್ಯಕ್ಷ ಮಹೇಶ್‌ಶಶಿಧರ್ ಸ್ವಾಗತಿಸಿ, ಉಪಾಧ್ಯಕ್ಷ ಕೆ.ಜಿ.ರಾಜೀವ್ ವಂದಿಸಿದರು. ಅಜಯ್‌ತಿಪ್ಪಯ್ಯ ನಿರೂಪಿಸಿದರು.

The Karnataka Planters Association 65th Annual General Meeting

About Author

Leave a Reply

Your email address will not be published. Required fields are marked *

You may have missed