September 19, 2024

ಮೈಸೂರು ಮಹಾಸಂಸ್ಥಾನದಿಂದ ದೇವಿರಮ್ಮ ದೇವಿಗೆ ಮಡಿಲಕ್ಕಿ ಸಮರ್ಪಣೆ

0
ಬಿಂಡಿಗ ದೇವಿರಮ್ಮ ದೇವಿಗೆ ಮಡಿಲಕ್ಕಿ ಕೊಡಬೇಕೆಂಬ ದೃಷ್ಠಿಯಿಂದ ಮಹಾರಾಜರ ಪ್ರತಿನಿಧಿಯಾಗಿ ಅಖಿಲ ಕರ್ನಾಟಕ ರಾಜು ಕ್ಷತ್ರಿಯ ಮಹಾಸಭದ ಅಧ್ಯಕ್ಷರಾದ ದಿನೇಶ್ ರಾಜ್ ಅರಸು ಭಾಗವಹಿಸಿದ್ದರು

ಬಿಂಡಿಗ ದೇವಿರಮ್ಮ ದೇವಿಗೆ ಮಡಿಲಕ್ಕಿ ಕೊಡಬೇಕೆಂಬ ದೃಷ್ಠಿಯಿಂದ ಮಹಾರಾಜರ ಪ್ರತಿನಿಧಿಯಾಗಿ ಅಖಿಲ ಕರ್ನಾಟಕ ರಾಜು ಕ್ಷತ್ರಿಯ ಮಹಾಸಭದ ಅಧ್ಯಕ್ಷರಾದ ದಿನೇಶ್ ರಾಜ್ ಅರಸು ಭಾಗವಹಿಸಿದ್ದರು

ಚಿಕ್ಕಮಗಳೂರು: ಬಿಂಡಿಗ ದೇವಿರಮ್ಮ ದೇವಿಯ ಭ್ರಹ್ಮ ಕಳಶೋತ್ಸವ ಸ್ಥಾಪನೆ ಕಾರ್ಯ ೨೦೨೪ ನೇ ಫೆಬ್ರವರಿ ಮಾಹೆಯಲ್ಲಿ ನಡೆಯಲಿದ್ದು ಈ ಕಾರ್ಯದಲ್ಲಿ ಮೈಸೂರು ಮಹಾ ಸಂಸ್ಥಾನದ ಯಧುವೀರ್ ಒಡೆಯರ್ ಆಗಮಿಸಲಿದ್ದಾರೆ ಎಂದು ಅವರ ರಾಜು ಅರಸು ಚೆಟ್ಟಿಯಾರ್ ಸಂಘದ ಅಧ್ಯಕ್ಷ ದಿನೇಶ್ ಅರಸ್ ತಿಳಿಸಿದರು.

ಅವರು ಇಂದು ದೇವಿರಮ್ಮ ದೇವಾಲಯದಲ್ಲಿ ಮೈಸೂರು ಮಹಾ ಸಂಸ್ಥಾನದ ವತಿಯಿಂದ ಸಂಪ್ರದಾಯದಂತೆ ಬಿಂಡಿಗ ದೇವಿರಮ್ಮ ದೇವಿಗೆ ಮಡಿಲಕ್ಕಿ ಕೊಡಬೇಕೆಂಬ ದೃಷ್ಠಿಯಿಂದ ಮಹಾರಾಜರ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದೇನೆ ಎಂದರು.

ಸಂಪ್ರದಾಯದಂತೆ ಮಡಿಲಕ್ಕಿ ಕೊಡಬೇಕೆಂಬ ಬಗ್ಗೆ ಸಮಿತಿ ಸದಸ್ಯರು ಹಾಗೂ ಅರಸು ಸಂಘದ ಪದಾಧಿಕಾರಿಗಳು ಮನವಿ ಮಾಡಿದ ಮೇರೆಗೆ ಮಡಿಲಕ್ಕೆ ಕೊಡಲು ಕಳಿಸಿದ್ದಾರೆ. ೫೦ನೇ ವ? ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ತ ಹೊರದೇಶಕ್ಕೆ ಮಹಾರಾಜರು ತೆರಳುವುದರಿಂದ ಇಲ್ಲಿಗೆ ಆಗಮಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಅರಸು ಸಂಘದ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್ ಮಾತನಾಡಿ ಸಂಪ್ರದಾಯದಂತೆ ದೇವಿರಮ್ಮ ದೇವಿಗೆ ಮೈಸೂರು ಮಹಾಸಂಸ್ಥಾನದಿಂದ ಮಡಿಲಕ್ಕೆ ಕೊಡುವ ಕಾರ್ಯ ಕಾರಣಾಂತರದಿಂದ ನಿಂತುಹೋಗಿತ್ತು ಎಂದು ಹೇಳಿದರು.

ಕಳೆದ ನೂರಾರು ವ?ಗಳಿಂದ ನಡೆದುಕೊಂಡು ಬರುತ್ತಿದ್ದ ಈ ಸಂಪ್ರದಾಯದ ಬಗ್ಗೆ ಅರಸು ಸಮುದಾಯಭವನ ಉದ್ಘಾಟನೆಗೆ ಮಹಾರಾಜರನ್ನು ಆಹ್ವಾನಿಸಲು ಹೋಗಿದ್ದಾಗ ಚರ್ಚಿಸಿದ್ದು ಉದ್ಘಾಟನೆಗೆ ಬಂದಾಗ ಸಂಪ್ರದಾಯಗಳು ಏನಿದೆ ಅ?ನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದರು ಎಂದರು.

ಅದರಂತೆ ಇಂದು ಸಂಸ್ಥಾನದ ಪರವಾಗಿ ನಾಗರೀಕರ ಪರವಾಗಿ ಭಕ್ತಿ ಪೂರ್ವಕವಾಗಿ ಮಡಿಲಕ್ಕಿ ಸಮರ್ಪಿಸಿ ಪೂಜೆ ಸಲ್ಲಿಸಿದ್ದು, ಎಲ್ಲಾ ಭಕ್ತರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು.

ಬಿಂಡಿಗಾ ದೇವಿರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಕುಲಶೇಖರ್ ಮಾತನಾಡಿ ಸಂಪ್ರದಾಯದಂತೆ ಮಡಿಲಕ್ಕಿ ಕೊಡುವಂತೆ ಮನವಿ ಮಾಡಿದ್ದರಿಂದ ಕಳೆದ ವ?ದಿಂದ ಸೀರೆ ಮಡಿಲಕ್ಕೆ ಕಳಿಸಿಕೊಟ್ಟಿದ್ದರೂ ಇದನ್ನು ನಿರಂತರವಾಗಿ ಮುಂದುವರಿಸುವುದಾಗಿ ಮಹಾರಾಜರು ವಿಶ್ವಾಸ ವ್ಯಕ್ತಪಡಿಸಿದ್ದು ನಮಗೆಲ್ಲ ಸಂತೋ?ವಾಗಿದೆ ಎಂದರು.

ನರಕ ಚತುರ್ದಶಿ ಅಂಗವಾಗಿ ನಿನ್ನೆ ಸುಮಾರು ೭೦ ಸಾವಿರ ಭಕ್ತಾದಿಗಳು ಬೆಟ್ಟ ಹತ್ತಿ ದೇವಿರಮ್ಮ ದೇವಿ ದರ್ಶನ ಪಡೆದಿದ್ದಾರೆ. ಇಂದು ಸಂಜೆ ಎಣ್ಣೆ ಬಟ್ಟೆ ಸುಡುವ ಕಾರ್ಯ ಇದ್ದು, ನಾಳೆ ಜಾತ್ರಾಮಹೋತ್ಸವ ಮತ್ತು ಬುಧವಾರ ಮುಂಜಾನೆ ಕೆಂಡ ಹಾಯುವ ಕಾರ್ಯ ಮುಗಿದ ಬಳಿಕ ದೇವಿರಮ್ಮ ದೀಪೋತ್ಸವ ಅಂತ್ಯಗೊಳ್ಳಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅರಸು ಸಂಘದ ಉಪಾಧ್ಯಕ್ಷ ಸತ್ಯನಾರಾಯಣ್ ರಾಜ್ ಅರಸ್, ಪ್ರಧಾನ ಕಾರ್ಯದರ್ಶಿ ದಶರಥ ರಾಜ್ ಅರಸ್, ನಿರ್ದೇಶಕರಾದ ಗಜೇಂದ್ರ ರಾಜ್ ಅರಸ್, ಸಹಕಾರ್ಯದರ್ಶಿ ನಾಗೇಶ್ ರಾಜ್ ಅರಸ್, ಪ್ರಜ್ವಲ್ ರಾಜ್ ಅರಸ್ ಮತ್ತಿತರರು ಉಪಸ್ಥಿತರಿದ್ದರು.

As per tradition Madilakki is dedicated to Goddess Deviramma from Mysore Mahasanthana

About Author

Leave a Reply

Your email address will not be published. Required fields are marked *

You may have missed