September 19, 2024

ಶ್ರೀಗಂಧದ ಮರದ ರಂಬೆ ಚೇಗುರು ಬರುವಂತೆ ಬೆಳೆಸುವುದರಿಂದ ಗುಣಮಟ್ಟದ ಶ್ರೀಗಂಧ ಬೆಳೆಯಲಿದೆ

0
ಬೆಂಗಳೂರಿನ ಭಾರತೀಯ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ವಿಜ್ಞಾನಿ ಡಾ|| ಆರ್.ಸುಂದರ್‌ರಾಜ್ ಪತ್ರಿಕಾಗೋಷ್ಠಿ

ಬೆಂಗಳೂರಿನ ಭಾರತೀಯ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ವಿಜ್ಞಾನಿ ಡಾ|| ಆರ್.ಸುಂದರ್‌ರಾಜ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಶ್ರೀಗಂಧದ ಮರ ಬೆಳೆಸುವಾಗ ಮರದ ರಂಬೆಗಳನ್ನು ಸವರದೇ ಚೇಗು ಬರುವಂತೆ ಬೆಳೆಸುವುದರಿಂದ ಉತ್ತಮ ಗುಣಮಟ್ಟದ ಸುಗಂಧ ಭರಿತ ಶ್ರೀಗಂಧ ಬೆಳೆಯಬಹುದಾಗಿದೆ ಎಂದು ಬೆಂಗಳೂರಿನ ಭಾರತೀಯ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ವಿಜ್ಞಾನಿ ಡಾ|| ಆರ್.ಸುಂದರ್‌ರಾಜ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ, ಭಾರತದ ಶ್ರೀಗಂಧವು ಒಂದು ಅತ್ಯಮೂಲ್ಯವಾದ ಜೈವಿಕ ಸಂಪತ್ತು. ಅದರ ಚೇಗವು ಸುಗಂಧದ್ರವ್ಯಕ್ಕೆ ಹಾಗೂ ಪರಿಮಳಯುಕ್ತ ತೈಲಕ್ಕೆ ಪ್ರಸಿದ್ಧವಾಗಿದ್ದು ಶ್ರೀಗಂಧವು ನೈಸರ್ಗಿಕವಾಗಿಯೇ ಭಾರತದ ಕಾಡುಗಳಲ್ಲಿ ಬೆಳೆಯುತ್ತದೆ. ಶ್ರೀಗಂಧವು ವಿಶಿಷ್ಟತೆಯನ್ನು ಹೊಂದಿದ್ದು ತೈಲ. ಪರಿಮಳ, ಸಾಬೂನು ಇತ್ಯಾದಿ ತಯಾರಿಕೆಯಲ್ಲ್ಲಿ ಬಳಕೆಯಾಗುತ್ತದೆ ಎಂದರು.

ಶ್ರೀಗಂಧವು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆದಿದ್ದು, ಧಾರ್ಮಿಕ ಗುಣಗಳನ್ನು ಸಹ ಹೊಂದಿದೆ. ಕಲಾ ಕೆತ್ತನೆಯಲ್ಲಿಯೂ ಸಹ ಶ್ರೀಗಂಧವು ತನ್ನದೇ ಛಾಪು ಮೂಡಿಸಿದೆ. ಶ್ರೀಗಂಧದ ಮರವು ನಮ್ಮ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇದು ಸ್ಯಾಂಟಾಲಮ್ ಎಂಬ ಪ್ರಭೇದಕ್ಕೆ ಸೇರಿದೆ ಇದರ ವಿಶಿ?ತೆಯಿಂದ ವಿಶೇ? ಸ್ಥಾನ ಪಡೆದು ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

ಶ್ರೀಗಂಧ ಮರಕ್ಕೆ ಪುನರುತ್ಪಾದನೆ ಸಾಮರ್ಥ್ಯ ಇರುವುದರಿಂದ, ಇತರ ಮರಗಳೊಂದಿಗೆ ಸ್ಪರ್ಧಾತ್ಮಕ ವಾತಾವರಣದಲ್ಲಿ ನೇರವಾಗಿ ಬೆಳೆಯುತ್ತದೆ. ಆದಾಗ್ಯೂ ಶ್ರೀಗಂಧದ ಮರವು ಸದ್ಯಕ್ಕೆ ಅಪಾಯವನ್ನು ಎದುರಿಸುತ್ತಿದೆ. ಇದಕ್ಕೆ ಪ್ರಕೃತಿಯಿಂದ ಆಗುವ ಒತ್ತಡ. ಕಳ್ಳತನ ಹಾಗೂ ಮುಖ್ಯವಾಗಿ ’ಸ್ಯಾಂಡಲ್ ಸ್ಪೈಕ್ ಎಂಬ ರೋಗವೇ ಕಾರಣ. ಈಗ ಈ ಮರವನ್ನು ಅಳಿವಿನಂಚಿನಲ್ಲಿರುವ ಪ್ರಭೇದಕ್ಕೆ (ಐ.ಯು.ಸಿ.ಎನ್- ಪರಿಸರ ಮತ್ತು ಸಂಪನ್ಮೂಲಗಳ ಸಂರಕ್ಷಣಾ ಒಕ್ಕೂಟ) ಸೇರಿಸಲಾಗಿದೆ. ಈ ಸಂದರ್ಭದಲ್ಲಿ ಶ್ರೀಗಂಧ ಬೆಳೆಯಲು ಕಾನೂನು ನಿಯಮಗಳಲ್ಲಿ ರಿಯಾಯಿತಿ ಇದ್ದು, ಶ್ರೀಗಂಧದ ಮರವನ್ನು ಬೆಳೆಯುವುದು ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು ಹ? ವ್ಯಕ್ತಪಡಿಸಿದ್ದರು.

ಶ್ರೀಗಂಧ ಸಸಿ ತಯಾರಿಕೆ
ಶ್ರೀಗಂಧ ಬೆಳೆಯಲು ಅದರ ಬೀಜಗಳನ್ನು ಸಂಗ್ರಹಿಸಿ, ಬಿತ್ತನೆ ಮಾಡಿ ಸಸಿಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತದೆ. ಇದನ್ನು ಸಾಂಪ್ರದಾಯಿಕವಾಗಿ ಗೋಣಿ ಚೀಲದಲ್ಲಿ ಹಾಕಿ ಅದಕ್ಕೆ ಹಸುವಿನ ಗಂಜಲ ಹಾಗೂ ಸಗಣಿಯನ್ನು ಉಪಯೋಗಿಸಿ ಬೀಜೋಪಚಾರ ಮಾಡಲಾಗುತ್ತದೆ. ನಂತರ ಮೊಳಕೆ ಬಂದ ಬೀಜಗಳನ್ನು ಪ್ಯಾಕೆಟ್‌ಗಳಲ್ಲಿ ಹಾಕಿ ಸಸಿಗಳನ್ನು ಬೆಳೆಸಲಾಗುತ್ತದೆ. ಆರು ತಿಂಗಳಿಂದ ವ?ದೊಳಗೆ ನಾ ಸಸಿಗಳನ್ನು ಜಮೀನಿನಲ್ಲಿ ನಾಟಿ ಮಾಡುವ ಮೂಲಕ ಶ್ರೀಗಂಧವನ್ನು ಬೆಳೆಯಬಹುದಾಗಿದೆ ಎಂದು ಹೇಳಿದರು.

ಶ್ರೀಗಂಧದ ಮರಕ್ಕೆ ಸವರುವಿಕೆ ಮಾಡಬಾರದು
ಶ್ರೀಗಂಧವು ಸೆಮಿ-ಪ್ಯಾರಾಸೈಟಿಕ್ ಆಗಿದೆ. ಆದುದರಿಂದ ಶ್ರೀಗಂಧವನ್ನು ಇಂದು ರೈತರು ಆಯ್ಕೆ ಮಾಡುವ ಕೃಷಿ/ತೋಟಗಾರಿಕೆ ಮತ್ತು ಅರಣ್ಯ ಪ್ರಭೇದದ ಸಸಿಗಳೊಂದಿಗೆ ಬೆಳೆಯುತ್ತಿದ್ದಾರೆ. ಇಲ್ಲಿ ನುಗ್ಗೆ ರೇ? ಯಂತಹ ಬೆಳೆಗಳಿಗೆ ಸವರುವಿಕೆ ಮಾಡುವ ಹಾಗೆಯೇ ಶ್ರೀಗಂಧದ ಮರವನ್ನು ಸಹ ಸವರುವಿಕೆ ಮಾಡುತ್ತಿದ್ದಾರೆ ಎಂದು ವಿ?ದಿಸಿದರು.

ರೇ? ಹಾಗೂ ನುಗ್ಗೆ ಮರಗಳನ್ನು ಸವರುವಿಕೆ ಮಾಡುವುದರಿಂದ ಕಡಿಮೆ ಎತ್ತರದಲ್ಲಿ ಎಲೆಗಳು ಹೆಚ್ಚಾಗಿ ಬರುತ್ತವೆ ಹಾಗೂ ಮಾವಿನ ಮರದಲ್ಲಿ ಸವರುವಿಕೆ ಮಾಡುವುದರಿಂದ ಕಡಿಮೆ ಎತ್ತರದಲ್ಲಿ ಹಣ್ಣುಗಳು ಕೈಗೆ ಎಟ ಕುವಂತಿದ್ದು ಕಟಾವು ಮಾಡುವುದಕ್ಕೆ ಸಹಾಯ ಮಾಡಿಕೊಡುತ್ತದೆ. ಆದರೆ ನಾವು ಶ್ರೀಗಂಧದ ಮರವನ್ನು ಬೆಳೆಯುತ್ತಿರುವುದು ಅದರ ಚೆಗಿಗಾಗಿ ಹಾಗೂ ತೈಲಕ್ಕಾಗಿ. ಇದನ್ನು ಅರ್ಥ ಮಾಡಿಕೊಳ್ಳದೇ, ನಾವು ಶ್ರೀಗಂಧವನ್ನು ಸಹ ನಿರಂತರವಾಗಿ ಸವರುವಿಕೆ ಮಾಡುತ್ತಿದ್ದೇವೆ. ಈ ಸವರುವಿಕೆ ಅನಗತ್ಯವಾದದ್ದು ಹಾಗೂ ಅದರ ದು?ರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ಸವರುವಿಕೆಯಿಂದ ಆಗುವ ದು?ರಿಣಾಮಗಳು
ಶ್ರೀಗಂಧದ ಮರವನ್ನು ಸವರುವಿಕೆ ಮಾಡಿದಾಗ ಸವರುವಿಕೆಯ ಪ್ರಮಾಣದ ಮೇಲೆ ಅದರ ದು?ರಿಣಾಮಗಳನ್ನು ನೋಡಬಹುದು. ಈ ಸವರುವಿಕೆಯಿಂದ ಗಂಧದ ಮರದ ಬೆಳವಣಿಗೆಯು ಕುಂಠಿತವಾಗುತ್ತದೆ. ಅದು ತನ್ನ ಸಮತೋಲನವನ್ನು ಕಳೆದುಕೊಂಡು ಗಾಳಿಯಿಂದ ಸುಲಭವಾಗಿ ಕೊಂಬೆಗಳು ಮುರಿಯುವುದು. ನಂತರ ಆ ಶ್ರೀಗಂಧ ಮರವು ಬೀಳಬಾರದು ಎಂದು ಅದಕ್ಕೆ ಆಸರೆ ಕೋಲನ್ನು ಕೊಟ್ಟರೆ ಆ ಕಟ್ಟಿಗೆಯು ಒಣಗಿ ಗೆದ್ದಲುಗಳನ್ನು ಆಕರ್ಷಿಸುತ್ತದೆ. ಹಾಗೆಯೇ ಶ್ರೀಗಂಧದ ಮರವನ್ನು ಸವರುವಿಕೆ ಮಾಡಿದ ಜಾಗದಲ್ಲಿಯೂ ಆವರಿಸುತ್ತದೆ. ಇದರಿಂದ ಶ್ರೀಗಂಧದ ಮರ ಸಾವನ್ನಪ್ಪುವುದಲ್ಲದೆ, ಚೇಗದ ಬೆಳವಣಿಗೆ ಆಗದೆ ರೈತರಿಗೆ ನ?ವಾಗುತ್ತದೆ ಎಂದರು.

ಸವರುವಿಕೆಗೆ ಒಳಗಾದ ಶ್ರೀಗಂಧ ಮರವು ಬಲಹೀನವಾಗಿ ಎಲೆಯು ಹೆಮ್ಮೊಳೆಯ ಆಕಾರವಾಗಿ, ಹಣ್ಣುಗಳು ಅಕಾಲಿಕವಾಗಿ ಒಣಗಿ, ಉದುರುತ್ತವೆ. ಸಸ್ಯಗಳು ತುದಿಯಿಂದ ಒಣಗಿ ನಿಧಾನವಾಗಿ ಸಾಯುತ್ತವೆ. ಆದರೆ ಕೆಲವೊಮ್ಮೆ ಕಾಂಡದ ತಳದ ಭಾಗದಲ್ಲಿ ಶಾಖೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸಸ್ಯಗಳು ಚೇತರಿಸಿಕೊಳ್ಳುತ್ತವೆ ಎಂದು ಹೇಳಿದರು.

ಮಳೆಗಾಲದಲ್ಲಿ ಸವರುವಿಕೆ ಮಾಡಿದಾಗ ಅಲ್ಲಿ ನೀರು ಸಂಗ್ರಹವಾಗಿ ಕಾಂಡಗಳು ಕೊಳೆತು ಹೋಗಿ, ಕೊಳೆಯುವ ಶಿಲೀಂಧ್ರಗಳನ್ನು ಆಕರ್ಷಿಸುತ್ತದೆ. ಇಂತಹ ಶ್ರೀಗಂಧದ ಚೇಗಿಗೆ ಬೆಲೆ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.

ಸವರುವಿಕೆ ಅತಿಯಾದಾಗ ಮರವು ಸಾಯುತ್ತದೆ. ಕೆಲವೊಮ್ಮೆ ೨ ಇಂಚಿನ? ಪಾರ್ಶ್ವ ಕೊಂಬೆಗಳನ್ನು ಸವರುವಿಕೆ ಮಾಡುತ್ತಾರೆ. ಆದರೆ ಕೊಂಬೆಯಲ್ಲೂ ಸಹ ಚೇಗ ಉತ್ಪತ್ತಿಯಾಗುತ್ತದೆ. ಆದ್ದರಿಂದ ಸವರುವಿಕೆ ಮಾಡಬಾರದು ಎಂದು ತಿಳಿಸಿದರು.

ಇಲ್ಲಿ ತಿಳಿಯಬೇಕಾದ ನೈಜ ಸಂಗತಿ ಎಂದರೆ ಶ್ರೀಗಂಧ ಮರಕ್ಕೆ ರೈತರು ಮಾಡುವ ಸವರುವಿಕೆಯ ಅಗತ್ಯವಿಲ್ಲ. ಅದು ನೈಸರ್ಗಿಕವಾಗಿ ಸ್ವಯಂಸವರುವಿಕೆಯನ್ನು ಪೂರ್ಣಗೊಳಿಸಿಕೊಳ್ಳುತ್ತದೆ. ಸವರುವಿಕೆಗೆ ಒಳಗಾದ ಮರಗಳೇ ಚೆನ್ನಾಗಿ ಬೆಳೆಯುವುದು ಎಂಬುದು ನಮ್ಮ ತಪ್ಪು ತಿಳುವಳಿಕೆ. ಸತ್ಯದ ಸಂಗತಿ ಏನೆಂದರೆ ಸವರುವಿಕೆ ಮಾಡದೇ ಇರುವ ಮರಗಳೇ, ಮೂರರಿಂದ ನಾಲ್ಕು ಪಟ್ಟು ಯಥೇಚ್ಛವಾಗಿ ಉದ್ದವಾಗಿ ಅಗಲವಾಗಿ ಬೆಳೆಯುತ್ತವೆ. ಆದ್ದರಿಂದ ಶ್ರೀಗಂಧದ ಮರವನ್ನು ಬೆಳೆಯುವವರು ಆ ಮರವನ್ನು ಸವರುವಿಕೆ ಮಾಡಬಾರದು ಎಂದು ಹೇಳಿದರು.

ನಾವು ನೆನಪಿನಲ್ಲಿ ಇಡಬೇಕಾದ ಸಂಗತಿ ಎಂದರೆ, ನಾವು ಶ್ರೀಗಂಧವನ್ನು ಬೆಳೆಯುತ್ತಿರುವುದು ಅದರ ಚೇಗಿಗಾಗಿ ಮತ್ತು ತೈಲಕ್ಕಾಗಿಯೇ ಹೊರತು ಎಲೆ ಮತ್ತು ಹಣ್ಣುಗಳಿಗಾಗಿ ಅಲ್ಲ. ಆದ್ದರಿಂದ ಶ್ರೀಗಂಧ ಮರವನ್ನು ಸವರುವಿಕೆ ಮಾಡದಿರಿ. ಶ್ರೀಗಂಧವನ್ನು ಅದರ ಚೇಗಿಗಾಗಿಯೇ ಬೆಳೆಯೋಣ ಎಂದು ಸಲಹೆ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಡಾ|| ಕೆ. ಸುಂದರಗೌಡ, ಎಂ.ಪಿ ಈರೇಗೌಡ, ಪರಮೇಶ್ ಮತ್ತಿತರರಿದ್ದರು.

Quality sandalwood will grow by growing the branches of the sandalwood tree

About Author

Leave a Reply

Your email address will not be published. Required fields are marked *

You may have missed