September 19, 2024

ಜನರಲ್ಲಿ ಅರಿವು ಮೂಡಿಸಿದಾಗ ಮಾತ್ರ ಅತಿಸಾರದಂತ ಕಾರ್ಯಕ್ರಮ ಯಶಸ್ವಿ

0
ಸಾಮಾಜಿಕ ಜಾಗೃತಿ ಹಾಗೂ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ

ಸಾಮಾಜಿಕ ಜಾಗೃತಿ ಹಾಗೂ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ

ಚಿಕ್ಕಮಗಳೂರು: : ಸರ್ಕಾರ ಉಚಿತವಾಗಿ ನೀಡುತ್ತಿರುವ ಓ.ಆರ್.ಎಸ್ ಚಿಕಿತ್ಸೆ ತೀವ್ರತರವಾದ ಅತಿಸಾರ ಬೇದಿಯನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಬಿ.ಗೋಪಾಲಕೃ? ತಿಳಿಸಿದರು.

ಅವರು ಇಂದು ಹೆರಿಗೆ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸಾಮಾಜಿಕ ಜಾಗೃತಿ ಹಾಗೂ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಶಾ ಕಾರ್ಯಕರ್ತರು ಮತ್ತು ದಾದಿಯರು ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಅತಿಸಾರದಂತ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಜೀವರಕ್ಷಕಗಳಾದ ಓ.ಆರ್.ಎಸ್, ಜಿಂಕ್ ಚಿಕಿತ್ಸೆಯ ಪಾತ್ರಗಳ ಬಗ್ಗೆಯೂ ಮಕ್ಕಳ ತಾಯಂದಿರಿಗೆ ಮನವರಿಕೆ ಮಾಡಬೇಕಿದೆ ಎಂದು ಹೇಳಿದರು.

ಅತಿಸಾರ ಉಂಟಾದಾಗ ಓ.ಆರ್.ಎಸ್ ಸೇವಿಸುವ ಮೂಲಕ ಶೇ.೭೦ ರೋಗಿಗಳು ಗುಣಮುಖರಾಗಿದ್ದಾರೆ. ಇದರ ಮಹತ್ವವನ್ನು ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಮುಟ್ಟಿಸುತ್ತಿರುವುದು ಶ್ಲಾಘನೀಯ ಎಂದರು.

ಮಕ್ಕಳಲ್ಲಿ ಅತಿಸಾರ ಉಂಟಾದಾಗ ನೀರಿನ ಕೊರತೆ ಆಗದಂತೆ ಓ.ಆರ್.ಎಸ್ ತಡೆಯುತ್ತದೆ ಆದ್ದರಿಂದ ಮಕ್ಕಳ ವೈದ್ಯರು ತಾಯಂದಿರಿಗೆ ಇದರ ಮಹತ್ವ ಮತ್ತು ಸೇವಿಸುವ ವಿಧಾನಗಳನ್ನು ಹೇಳಿಕೊಟ್ಟಾಗ ಸಾವಿನ ಸಂಖ್ಯೆ ತಡೆಗಟ್ಟಲು ಸಾಧ್ಯ ಎಂದು ತಿಳಿಸಿದರು.

ಅತಿಸಾರ ಬೇದಿ ಪ್ರಾರಂಭವಾದಾಗಲೇ ಪ್ರಾಥಮಿಕ ಹಂತದಿಂದ ಔ?ಧ ನೀಡುವುದರಿಂದ ಸಾಕ? ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಜೊತೆಗೆ ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ|| ಮಂಜುನಾಥ್ ಅವರು ತೀವ್ರತರ ಅತಿಸಾರ ನಿಯಂತ್ರಣ ಕಾರ್ಯಕ್ರಮ ಜಿಲ್ಲೆಯಾದ್ಯಂತ ನ.೧೫ ರಿಂದ ೨೮ ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ|| ಅಶ್ವಥ್‌ಬಾಬು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ|| ಕಲ್ಪನ, ಡಾ|| ಚಂದ್ರೇಗೌಡ, ಡಾ|| ಸೀಮಾ ಭಾಗವಹಿಸಿದ್ದರು. ಡಾ. ರವೀಂದ್ರ, ಡಾ. ಶಶಿಕಲಾ, ಡಾ|| ಹರೀಶ್‌ಬಾಬು ಉಪನ್ಯಾಸ ನೀಡಿದರು.

Social Awareness and Severe Diarrhea Control Fortnightly Programme

 

About Author

Leave a Reply

Your email address will not be published. Required fields are marked *

You may have missed