September 16, 2024

ಕಳವಾಗಿದ್ದ ಮೊಬೈಲ್ ಫೋನ್ ಮಾಲೀಕರಿಗೆ ಹಸ್ತಾಂತರ 

0
ಕಳೆದುಕೊಂಡಿದ್ದ ವಾರಸುದಾರರಿಗೆ ಸುಮಾರು ೬ ಲಕ್ಷ ರೂ ಬೆಲೆಯ ೬೦ ಮೊಬೈಲ್‌ಗಳನ್ನು ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಿತರಿಸಲಾಯಿತು.

ಕಳೆದುಕೊಂಡಿದ್ದ ವಾರಸುದಾರರಿಗೆ ಸುಮಾರು ೬ ಲಕ್ಷ ರೂ ಬೆಲೆಯ ೬೦ ಮೊಬೈಲ್‌ಗಳನ್ನು ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಿತರಿಸಲಾಯಿತು.

ಚಿಕ್ಕಮಗಳೂರು:  ಹದಿನಾರು ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಿದ್ದ ವಾರಸುದಾರರಿಗೆ ಸುಮಾರು ೬ ಲಕ್ಷ ರೂ ಬೆಲೆಯ ೬೦ ಮೊಬೈಲ್‌ಗಳನ್ನು ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ವಿತರಿಸಲಾಯಿತು.

ಪೋರ್ಟಲ್ ಬಳಸಿ ಪತ್ತೆ ಮಾಡಲಾದ ಈ ಮೊಬೈಲ್ ಫೋನ್‌ಗಳನ್ನು ಇಂದು ಪೊಲೀಸ್ ವರಿಷ್ಠಾಧಿಕಾರಿ ಡಾ|| ವಿಕ್ರಮ್ ಅಮಟೆ ವಿತರಿಸಿದರು.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ೮೩೭ ಫೋನ್‌ಗಳು ಕಳವು ಪ್ರಕರಣದಲ್ಲಿ, ಈಗಾಗಲೇ ೨೨೦ ಫೋನ್‌ಗಳ ಬಗ್ಗೆ ತನಿಖೆ ನಡೆಸಿ ಈವರೆಗೆ ೧೯೦ ಮೊಬೈಲ್‌ಗಳನ್ನು ಸಂಬಂಧಪಟ್ಟವರಿಗೆ ವಿತರಿಸಲಾಗಿದೆ ಎಂದರು.

ಸಾರ್ವಜನಿಕರು ನಿಮ್ಮ ಮೊಬೈಲ್‌ಗಳನ್ನು ಕಳೆದುಕೊಂಡಲ್ಲಿ ಮೊಬೈಲ್‌ಫೋನ್‌ಗೆ ಸಂಬಂಧಿಸಿದ ದಾಖಲಾತಿಗಳು, ನಿಮ್ಮ ಗುರುತಿನ ಪುರಾವೆ ಹಾಗೂ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರತಿಯೊಂದಿಗೆ ಸಿಇಐಆರ್ ವೆಬ್ ಪೋರ್ಟಲ್  ರಲ್ಲಿ ವರದಿ ದಾಖಲಿಸಲು ಸೂಚಿಸಲಾಗಿದೆ.

ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗವಿರಾಜ್, ಪಿಎಸ್‌ಐ ರಘುನಾಥ್ ಎಸ್.ವಿ, ವಿಶ್ವನಾಥ್ ಎನ್.ಸಿ ಹಾಗೂ ಸಿಬ್ಬಂದಿಗಳಾದ ಅನ್ವರ್ ಪಾ?, ಹರಿಪ್ರಸಾದ್ ತಂಡ ಮೊಬೈಲ್‌ಗಳನ್ನು ಪತ್ತೆ ಮಾಡಿದೆ ಎಂದು ತಿಳಿಸಿದ್ದಾರೆ.

೨೦೨೨ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ರಾಜ್ಯದಲ್ಲಿ ಸಿಇಐಆರ್ ಪೋರ್ಟಲ್‌ಅನ್ನು ಪ್ರಾರಂಭ ಮಾಡಲಾಗಿದ್ದು ದಿನಾಂಕ ೧೭/೫/೨೦೨೨ ರಂದು ರಾ?ವ್ಯಾಪಿಯಾಗಿ ಜಾರಿಗೆ ತರಲಾಗಿದ್ದು, ಪ್ರಾಯೋಗಿಕವಾಗಿ ತೆಲಂಗಾಣ ರಾಜ್ಯದಲ್ಲಿ ಸಿಇಐಆರ್ ಪೋರ್ಟಲ್‌ಅನ್ನು ಅಳವಡಿಸಲಾಗಿತ್ತು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎ.ಎಸ್‌ಪಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Handover of lost mobiles to heirs

About Author

Leave a Reply

Your email address will not be published. Required fields are marked *