September 16, 2024

50 ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ಅಯ್ಯಪ್ಪಸ್ವಾಮಿ ವಿಗ್ರಹ ಪ್ರತಿಷ್ಠಾಪನೆ

0
ಶ್ರೀ ಅಯ್ಯಪ್ಪಸ್ವಾಮಿ ವಿಗ್ರಹವದ ಮೆರವಣಿಗೆ

ಶ್ರೀ ಅಯ್ಯಪ್ಪಸ್ವಾಮಿ ವಿಗ್ರಹವದ ಮೆರವಣಿಗೆ

ಚಿಕ್ಕಮಗಳೂರು-೫೦ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಸಮಿತಿ ವತಿಯಿಂದ ಬೋಳ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಭವ್ಯ ಮಂಟಪದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.

ಶ್ರೀ ಅಯ್ಯಪ್ಪಸ್ವಾಮಿ ವಿಗ್ರಹವನ್ನು ಬಸವನಹಳ್ಳಿಯ ಓಂಕಾರೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಎಂ.ಜಿ ರಸ್ತೆ ಮೂಲಕ ನಾದಸ್ವರ ಹಾಗೂ ಅಯ್ಯಪ್ಪ ಭಕ್ತರ ಭಜನೆಯೊಂದಿಗೆ ಸ್ವಾಮಿಯ ವಿಗ್ರಹವನ್ನು ಕೊಂಡೋಯ್ದು, ಬೋಳರಾಮೇಶ್ವರ ಆವರಣದಲ್ಲಿ ನಿರ್ಮಿಸಿರುವ ಭವ್ಯ ಮಂಟಪದಲ್ಲಿ ಗಣಪತಿ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯ ನಡೆಸಿ ನಂತರ ಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತೆಂದು ತಿಳಿಸಿದರು.

ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಸಚ್ಚಿದೇವ್ ಮಾತನಾಡಿ ೫೦ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ಇಂದಿನಿಂದ ಮಕರ ಜ್ಯೋತಿ ವರೆಗೂ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತಿದ್ದು, ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪೂಜಾ ಸಮಿತಿ ಅಧ್ಯಕ್ಷ ನಾರಾಯಣಗೌಡ್ರು ಗೌರವಾಧ್ಯಕ್ಷ ಸಿ.ಪಿ.ರವಿಶಂಕರ್, ಖಜಾಂಚಿ ಜೀವನ್.ಕೆ.ಶೆಟ್ಟಿ, ಉಪಾಧ್ಯಕ್ಷರುಗಳಾದ ಸಾರಥಿಮಂಜುನಾಥ್, ಟಿ.ವೆಂಕಟೇಶ್, ಅಣ್ಣಯ್ಯ, ಮಹಾದೇವ್, ಕಾರ್ಯದರ್ಶಿಗಳಾದ ಬಿ.ಉಮೇಶ್, ಲಕ್ಷ್ಮೀಕಾಂತ್, ನಟರಾಜ್‌ಕೋಟೆ, ದಿಲೀಪ್‌ರಾಜ್, ಹೆಚ್.ಎಸ್.ಸತೀಶ್, ಸಹ ಕಾರ್ಯದರ್ಶಿಗಳಾದ ಡಿ.ಚನ್ನಕೇಶವ, ಮನೋಹರ್, ಜವರಪ್ಪ, ಆರ್.ಯಶ್ವಂತ್ ರಾವ್, ಮುಕೇಶ್‌ಸಿಂಗ್, ಎಸ್.ಡಿ.ಎಂ ಮಂಜು, ರಾಜುಶೆಟ್ಟಿ, ಚೇತನ್‌ಬಳೆ, ರಂಗನಾಥ್, ಮಹಾದೇವ, ಕಿರಣ್‌ಬಂಡೇಗಾರ್ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಅಯ್ಯಪ್ಪಸ್ವಾಮಿ ಪೂಜಾ ಸಮಿತಿ ಅಧ್ಯಕ್ಷ ನಾರಾಯಣ ಗೌಡ್ರು ಇದ್ದರು

Sri Ayyappaswamy idol procession

About Author

Leave a Reply

Your email address will not be published. Required fields are marked *