September 16, 2024

ಡಿ.ಬಿ.ಚಂದ್ರೇಗೌಡರು ಒಬ್ಬ ಅತ್ಯುತ್ತಮ ಸಂಸದೀಯ ಪಟು

0
ಡಿ.ಬಿ. ಚಂದ್ರೇಗೌಡರ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

ಡಿ.ಬಿ. ಚಂದ್ರೇಗೌಡರ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

ಚಿಕ್ಕಮಗಳೂರು: ಡಿ.ಬಿ.ಚಂದ್ರೇಗೌಡರು ಒಬ್ಬ ಅತ್ಯುತ್ತಮ ಸಂಸದೀಯ ಪಟು ಮತ್ತು ಕಾನೂನು ತಜ್ಞರಾಗಿದ್ದರು. ಚಂದ್ರೇಗೌಡರು ಸದನದಲ್ಲಿ ಮಾತನಾಡಲು ಎದ್ದು ನಿಂತರೆ ಇಡೀ ಸದನವೇ ಗಂಭೀರವಾಗಿ ಕೇಳುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು

ಅವರು ಶನಿವಾರ ಚಿಕ್ಕಮಗಳೂರು ತಾಲೂಕಿನ ಹಾಂದಿ ಶಾಲಿಮಾರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಡಿ.ಬಿ. ಚಂದ್ರೇಗೌಡರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ ಅವರು ರಾಜ್ಯಕ್ಕೆ ಒಬ್ಬ ಉತ್ತಮ ಮಾರ್ಗದರ್ಶಕರಾಗಿದ್ದರು. ಐದು ದಶಕಗಳ ಕಾಲ ಅವರು ಕರ್ನಾಟಕದ ರಾಜಕೀಯದಲ್ಲಿ ವಿಭಿನ್ನ ಪಾತ್ರ ವಹಿಸಿದ್ದರು. ಕಾವೇರಿ ವಿವಾದ ಸೇರಿದಂತೆ ಕ್ಲಿಷ್ಟ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಅವರು ಸಂಪರ್ಕ ಸೇತುವೆಯಾಗಿದ್ದರು. ಅವರ ಅಗಲಿಕೆ ರಾಜ್ಯಕ್ಕೆ ದೇಶಕ್ಕೆ ಅತೀವ ನಷ್ಟವನ್ನುಂಟುಮಾಡಿದೆ ಎಂದರು

ಚಂದ್ರೇಗೌಡರು ಮತ್ತು ತನ್ನ ಬಾಂಧವ್ಯ ಅದು ಪಕ್ಷ ರಾಜಕಾರಣವನ್ನು ಮೀರಿತ್ತು ಅವರೊಬ್ಬ ಉತ್ತಮ ಸ್ನೇಹಜೀವಿಯಾಗಿದ್ದರು. ಅವರ ಅಪಾರವಾದ ಜ್ಞಾನಭಂಡಾರ ರಾಜ್ಯಕ್ಕೆ ಅನೇಕ ಬಾರಿ ಇಕ್ಕಟ್ಟಿನ ಪರಿಸ್ಥಿತಿಯಿಂದ ಪಾರಾಗಲೂ ಸಹಾಯಕವಾಗುತ್ತಿತ್ತು. ಅವರೊಬ್ಬ ದೇಶದ ಅಪರೂಪದ ರಾಜಕೀಯ ಮುತ್ಸದ್ದಿಯಾಗಿದ್ದರು ಎಂದು ಬಣ್ಣಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಮಾತನಾಡಿ ಚಂದ್ರೇಗೌಡರು ರಾಜ್ಯದ ಕ್ಲಿಷ್ಟ ರಾಜಕೀಯ ಸನ್ನಿವೇಶದಲ್ಲಿ ಇದ್ದಾಗ ಉತ್ತಮ ಮಾರ್ಗದರ್ಶನ ಮಾಡಿದ್ದರು. ಅವರು ವಿಧಾನಸಭಾ ಸಭಾಪತಿಗಳಾಗಿದ್ದ ಅವಧಿಯು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಸಂಕೀರ್ಣ ರಾಜಕೀಯ ಸ್ಥಿತಿಯನ್ನು ಕಂಡಿತ್ತು. ಅಂತಹ ಸಂದರ್ಭದಲ್ಲಿ ಚಂದ್ರೇಗೌಡರ ಸಂಸದೀಯ ನಡಾವಳಿಕೆಗಳು ರಾಜ್ಯಕ್ಕೆ ಮಾರ್ಗದರ್ಶನ ಮಾಡಿದವು ಎಂದರು.

ಮಾಜಿ ಸಭಾಪತಿ ಬಿ ಎಲ್ ಶಂಕರ್ ಮಾತನಾಡಿ ಚಂದ್ರೇಗೌಡರು ಕುವೆಂಪು ಅವರ ಸಾಹಿತ್ಯದಿಂದ ಪ್ರಭಾವಿತರಾಗಿದ್ದರು. ಅವರು ಓರ್ವ ನಿಸ್ವಾರ್ಥ ರಾಜಕಾರಣಿಯಾಗಿದ್ದರು. ಸಾಂಸ್ಕೃತಿಕ ವ್ಯಕ್ತಿತ್ವವನ್ನು ಹೊಂದಿದ್ದರು. ಅವರು ರಾಜಕೀಯವನ್ನು ಒಂದು ಹವ್ಯಾಸವಾಗಿ ತೆಗೆದುಕೊಂಡಿದ್ದರು. ರಾಜಕೀಯದಿಂದ ಲಾಭ ಪಡೆಯಬೇಕೆಂಬ ಅಭಿಲಾಷೆ ಅವರಿಗೆ ಇರಲಿಲ್ಲ. ಅವರು ತಮ್ಮ ನಡವಳಿಕೆಯಿಂದ ಮಲೆನಾಡಿನ ರಾಜಕೀಯಕ್ಕೆ ಒಂದು ಘನತೆ, ಗಾಂಭೀರ್ಯ ಮತ್ತು ಗೌರವವನ್ನು ತಂದುಕೊಟ್ಟಿದ್ದರು. ಅವರ ಸೇವೆ ಚಿಕ್ಕಮಗಳೂರು ಜಿಲ್ಲೆ ರಾಜ್ಯ ಮತ್ತು ರಾಷ್ಟ್ರಕ್ಕೆ ಅಮೂಲ್ಯವಾಗಿತ್ತು ಎಂದರು

ಸಭೆಯಲ್ಲಿ ಮಾಜಿ ಸಚಿವೆ ಮೊಟ್ಟಮ್ಮ, ಮಾಜಿ ಕೇಂದ್ರ ಸಚಿವೆ ಡಿ.ಬಿ.ಸಿ.ಯವರ ಬಂಧುವಾದ ಡಿ.ಕೆ. ತಾರದೇವಿ ಮಾತನಾಡಿದರು. ಸಭೆಯಲ್ಲಿ ಮಾಜಿ ಸಚಿವೆ ಶ್ರೀಮತಿ ಮೊಟ್ಟಮ್ಮ, ಮಾಜಿ ಕೇಂದ್ರ ಸಚಿವೆ ಡಿ.ಬಿ.ಸಿ.ಯವರ ಬಂಧುವಾದ ಡಿ.ಕೆ ತಾರದೇವಿ ಮಾತನಾಡಿದರು.

ಕುಟುಂಬದ ಪರವಾಗಿ ಡಿ. ಬಿ. ಜಯಪ್ರಕಾಶ್ ಮತ್ತು ಚಂದ್ರೇಗೌಡರ ಪುತ್ರಿ ವೀಣಾಗೌಡ ಮಾತನಾಡಿದರು ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರೇಗೌಡರ ನಿಧನಕ್ಕೆ ಕಳುಹಿಸಿದ್ದ ಸಂತಾಪ ಸಂದೇಶವನ್ನು ಅವರ ಹಿರಿಯ ಪುತ್ರಿ ಪಲ್ಲವಿ ಓದಿದರು

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ. ಕೆ. ಪ್ರಾಣೇಶ್, ಶಾಸಕರಾದಂತ ಟಿ.ಡಿ. ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಮಾಜಿ ಶಾಸಕರಾದ ಬಿ.ಬಿ.ನಿಂಗಯ್ಯ, ಹೆಚ್.ಎಂ.ವಿಶ್ವನಾಥ್, ಕಾಫಿ ಮಂಡಳಿ ಅಧ್ಯಕ್ಷ ದೇವರುಂದ ದಿನೇಶ್, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ವಿವಿಧ ಸಂಘಸಂಸ್ಥೆಗಳ ಮುಖಂಡರು, ಚಂದ್ರೇಗೌಡರ ಕುಟುಂಬ ವರ್ಗದವರು ಇದ್ದರು ಸಾಹಿತಿ ಹಳೆಕೋಟೆ ರಮೇಶ್ ಕಾರ್ಯಕ್ರಮ ನಿರೂಪಿಸಿದರು.

D.B. Chandra Gowda Tribute Meeting

About Author

Leave a Reply

Your email address will not be published. Required fields are marked *