September 16, 2024

ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧಾ ವಿಜೇತರು

0
ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧಾ ವಿಜೇತರು

ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧಾ ವಿಜೇತರು

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ೨೦೨೩-೨೪ ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರನ್ನು ಬಹುಮಾನ ನೀಡಿ ಅಭಿನಂದಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಮಂಜುಳಾ ಹುಲ್ಲಳ್ಳಿ ತಿಳಿಸಿದರು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ಈ ವಿ?ಯ ತಿಳಿಸಿರುವ ಅವರು ಜಾನಪದ ತೃತ್ಯ (ಗುಂಪು) ಸ್ಪರ್ಧೆಯಲ್ಲಿ ಚಿಕ್ಕಮಗಳೂರು ದುರ್ಗಾದೇವಿ ಕಲಾತಂಡ ಪ್ರಥಮ, ಜೈ ಭೀಮ್ ಕಲಾತಂಡ ದ್ವಿತೀಯ ಹಾಗೂ ಸಿಂಚನ ಮತ್ತು ತಂಡ ತೃತೀಯ ಸ್ಥಾನ ಪಡೆದುಕೊಂಡರೆಂದು ಹೇಳಿದ್ದಾರೆ.

ಜಾನಪದ ಗೀತೆ (ಗುಂಪು) ಸ್ಪರ್ಧೆಯಲ್ಲಿ ಮೂಡಿಗೆರೆಯ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾತಂಡ ಪ್ರಥಮ, ಮಿತ್ರ ಜಾನಪದ ಕಲಾತಂಡ ದ್ವಿತೀಯ ಹಾಗೂ ಚಿಕ್ಕಮಗಳೂರು ನಗರದ ಆಶಾಕಿರಣ ಅಂಧಮಕ್ಕಳ ಪಾಠಶಾಲೆ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದಿದ್ದಾರೆ.

ಜಾನಪದ ನೃತ್ಯ ವಯಕ್ತಿಕ ವಿಭಾಗದಲ್ಲಿ ದರ್ಶನ್ ಪ್ರಥಮ, ಬೃಂದಾ ಎಂ.ಡಿ ದ್ವಿತೀಯ, ಹಸೀನಾ ತೃತೀಯ ಸ್ಥಾನ ಪಡೆದುಕೊಂಡಿದ್ದು ಜನಪದ ಗೀತೆ (ವೈಯಕ್ತಿಕ) ವಿಭಾಗದಲ್ಲಿ ಸಂಜಯ್.ಆರ್ ಪ್ರಥಮ ಸಂದೇಶ್ ಎಂ.ಎಂ ದ್ವಿತೀಯ, ಸುನಿಧಿ ಎಚ್.ಮಂಜುನಾಥ್ ತೃತೀಯ ಸ್ಥಾನ ಪಡೆದುಕೊಂಡರು.

ಕಥೆ ಬರೆಯುವ ಸ್ಪರ್ಧೆಯಲ್ಲಿ ಚಿಕ್ಕಮಗಳೂರಿನ ಗಗನ್.ಎಸ್ ಪ್ರಥಮ, ದೀಪಿಕಾ ದ್ವಿತೀಯ, ಮೂಡಿಗೆರೆ ವಿಜಯಲಕ್ಷ್ಮಿ ತೃತೀಯ ಸ್ಥಾನ ಪಡೆದುಕೊಂಡಿದ್ದು ಭಿತ್ತಿಪತ್ರ ತಯಾರಿಕೆ ಸ್ಪರ್ಧೆಯಲ್ಲಿ ಚಿಕ್ಕಮಗಳೂರಿನ ಸಿಂಚನ .ಎಸ್, ಪ್ರಥಮ ಕಳಸದ ಅಜಿತ್.ಸಿ ದ್ವಿತೀಯ ಸ್ವಾಮಿ.ಟಿ ತೃತೀಯ ಸ್ಥಾನ ಪಡೆದರು.

ಭಾ?ಣ ಸ್ಪರ್ಧೆಯಲ್ಲಿ ವರುಣ್.ಡಿ ಆರ್ಯ ಪ್ರಥಮ, ತನುಶ್ರೀ ಎಂ.ಎಸ್ ದ್ವಿತೀಯ, ಆಕಾಶ್.ಸಿ.ಎಸ್ ತೃತೀಯ ಹಾಗೂ ಮೊಬೈಲ್ ಛಾಯಾಚಿತ್ರಣ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಪ್ರೇಕ್ಷಿತ್ ಟಿ.ಆರ್ ಪ್ರಥಮ, ಗಗನ್ .ಎಸ್ ದ್ವಿತೀಯ, ಕಾವ್ಯ ಎಚ್.ಎಸ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಬಹುಮಾನ ವಿತರಣಾ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ಡಾ|| ಸಿ. ರಮೇಶ್ ಹಾಗು ಹಿರಿಯ ಕಲಾವಿದರು ನಡೆಸಿಕೊಟ್ಟರೆಂದು ಹೇಳಿದ್ದಾರೆ.

District level Yuva Janotsava competition winners

 

About Author

Leave a Reply

Your email address will not be published. Required fields are marked *