September 16, 2024

ಕಾಡಾನೆ ದಾಳಿಗೆ ಜಿಲ್ಲೆಯಲ್ಲಿ ಮತ್ತೊಂದು ಬಲಿ, 2 ತಿಂಗಳಲ್ಲಿ 3ನೇ ಸಾವು

0
ಗೌಡಹಳ್ಳಿ ನಿವಾಸಿ 26 ವರ್ಷದ ಕಾರ್ತಿಕ್ ಗೌಡ

ಗೌಡಹಳ್ಳಿ ನಿವಾಸಿ 26 ವರ್ಷದ ಕಾರ್ತಿಕ್ ಗೌಡ

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಸರ್ಕಾರ ರಚಿತ ಆನೆ ನಿಗ್ರಹ ಪಡೆಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈರಾಪುರ ಸಮೀಪದ ಹೊಸಕೆರೆ ಗ್ರಾಮದಲ್ಲಿ ನಡೆದಿದೆ.

ಮೃತನನ್ನ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ನಿವಾಸಿ 26 ವರ್ಷದ ಕಾರ್ತಿಕ್ ಗೌಡ ಎಂದು ಗುರುತಿಸಲಾಗಿದೆ.‌ ಕಳೆದ ಎರಡು ತಿಂಗಳಲ್ಲಿ ಕಾಡಾನೆ ದಾಳಿಗೆ ಇದು ಮೂರನೇ ಸಾವು. ಕಳೆದ ಒಂದೂವರೆ ತಿಂಗಳ ಹಿಂದೆ ಆಲ್ದೂರು ಸಮೀಪದ ಅರೆನೂರು ಬಳಿ ಆಸ್ಪತ್ರೆಗೆ ಹೋಗುತ್ತಿದ್ದ ಚಿನ್ನಿ ಎಂಬ ವ್ಯಕ್ತಿ ಆನೆ ದಾಳಿಗೆ ಬಲಿಯಾಗಿದ್ದರು.

ಕಳೆದ 20 ದಿನಗಳ ಹಿಂದಷ್ಟೆ ಆನೆ ದಾಳಿಗೆ ಆಲ್ದೂರು ಸಮೀಪದ ಕೂಲಿ ಕಾರ್ಮಿಕ ಮಹಿಳೆ ವೀಣಾ ಎಂಬುವರು ಸಾವನ್ನಪ್ಪಿದ್ದರು.

ಇಂದು ಕೂಡ ಆನೆ ದಾಳಿಗೆ 26 ವರ್ಷದ ಯುವಕ ಸಾವನ್ನಪ್ಪಿರೋದು ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಕಳೆದೊಂದು ದಶಕದಿಂದಲೂ ಕೂಡ ಆನೆ ಹಾವಳಿ ಯಥೇಚ್ಛವಾಗಿದೆ. ಅದರಲ್ಲೂ ಕಳೆದ ನಾಲ್ಕೈದು ವರ್ಷಗಳಿಂದಂತೂ ಮಲೆನಾಡಿಗರು ಆನೆ ಭಯದಲ್ಲೇ ಬದುಕುತ್ತಿದ್ದಾರೆ.‌

ಮಲೆನಾಡ ಕಾಡಂಚಿನ ಕುಗ್ರಾಮಗಳ ಜನ ಹೊಲ-ಗದ್ದೆ, ತೋಟಗಳಿಗೆ ಹೋಗೋದಕ್ಕೂ ಹಿಂದೇಟು ಹಾಕ್ತಿದ್ದಾರೆ.

ಕಳೆದ ಎರಡು ವರ್ಷದಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಹತ್ತಕ್ಕೂ ಹೆಚ್ಚು ಜನ ಆನೆ ದಾಳಿಗೆ ಉಸಿರು ಚೆಲ್ಲಿದ್ದಾರೆ. ಪ್ರತಿ ಬಾರಿ ಆನೆ ದಾಳಿಗೆ ಸಾವು ಸಂಭವಿಸಿದ ಬಳಿಕ ಸ್ಥಳಕ್ಕೆ ಆಗಮಿಸೋ ಅಧಿಕಾರಿಗಳು ಆನೆ ಹಾವಾಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇವೆ ಎಂದು ಹೇಳಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದರಿಂದ ಆನೆ ಹಾವಾಳಿಗೆ ಕಡಿವಾಣ ಇಲ್ಲದಂತಾಗಿದೆ.

ಸರ್ಕಾರ ಕೂಡ ನರಹಂತಕ ಕಾಡಾನೆಯನ್ನ ಸೆರೆ ಹಿಡಿಯಲು ಅನುಮತಿ ನೀಡುತ್ತೆ. ಆದ್ರೆ, ಮಲೆನಾಡಿಗರು ನಮಗೆ ನರಹಂತಕ ಆನೆಯ ಸ್ಥಳಾಂತರ ಬೇಡ. ಆನೆ ದಾಳಿಗೆ ಶಾಶ್ವತ ಪರಿಹಾರ ಬೇಕು. ಇಲ್ಲವಾದರೆ, ಆನೆ ದಾಳಿಯಿಂದ ಮುಂದಿನ ದಿನಗಳಲ್ಲೂ ಪ್ರಾಣ ಕಳೆದುಕೊಳ್ಳುವ ಸಂಖ್ಯೆ ಕಡಿಮೆ ಆಗುವುದಿಲ್ಲ‌.

ಹಾಗಾಗಿ, ನಮಗೆ ನಿಮ್ಮ ಹಣಕಾಸಿನ ಪರಿಹಾರ, ಸ್ಥಳಾಂತರದ ನಾಟಕ ಬೇಡ. ಆನೆ ಹಾವಾಳಿಗೆ ಶಾಶ್ವತ ಪರಿಹಾರ ನೀಡಿ ಎಂದು ಮಲೆನಾಡಿಗರು ಆಗ್ರಹಿಸಿದ್ದಾರೆ.

Another victim of forest attack in the district

About Author

Leave a Reply

Your email address will not be published. Required fields are marked *