September 16, 2024

ಜಿ+2 ಮಾದರಿ ಗುಂಪು ಮನೆಗಳ ಫಲಾನುಭವಿಗಳಿಗೆ ಬ್ಯಾಂಕುಗಳು ನಿಗದಿತ ಸಮಯದಲ್ಲಿ ಸಾಲ ನೀಡಲು ಸೂಚನೆ

0
ನಗರಸಭೆಯಲ್ಲಿ ಏರ್ಪಡಿಸಿದ್ದ ಜಿ+೨ ಮಾದರಿಯ ಗುಂಪು ಮನೆಗಳಿಗೆ ಆಯ್ಕೆಗೊಂಡಿರುವ ಫಲಾನುಭವಿಗಳ ಸಾಲಮೇಳ

ನಗರಸಭೆಯಲ್ಲಿ ಏರ್ಪಡಿಸಿದ್ದ ಜಿ+೨ ಮಾದರಿಯ ಗುಂಪು ಮನೆಗಳಿಗೆ ಆಯ್ಕೆಗೊಂಡಿರುವ ಫಲಾನುಭವಿಗಳ ಸಾಲಮೇಳ

ಚಿಕ್ಕಮಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜಿ+೨ ಮಾದರಿಯ ಗುಂಪು ಮನೆಗಳಿಗೆ ಆಯ್ಕೆಗೊಂಡಿರುವ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ಬ್ಯಾಂಕುಗಳು ಸಾಲ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚಿಸಿದರು.

ಅವರು ಇಂದು ನಗರಸಭೆಯಲ್ಲಿ ಏರ್ಪಡಿಸಿದ್ದ ಜಿ+೨ ಮಾದರಿಯ ಗುಂಪು ಮನೆಗಳಿಗೆ ಆಯ್ಕೆಗೊಂಡಿರುವ ಫಲಾನುಭವಿಗಳ ಸಾಲಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಆಯ್ಕೆಯಾಗಿರುವ ಫಲಾನುಭವಿಗಳು ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಅವಕಾಶವಿದ್ದು, ಸಾಲಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಸಲ್ಲಿಸಿ ನಿಗದಿತ ಸಮಯದಲ್ಲಿ ಸಾಲ ಪಡೆಯಿರಿ ಎಂದು ಹೇಳಿದ ಅವರು ದಾಖಲೆ ಸರಿ ಇದ್ದರೂ ಸಾಲ ಕೊಡುವುದು ವಿಳಂಭ ಮಾಡುವ ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಪೌರಾಯುಕ್ತ ಬಿ.ಸಿ ಬಸವರಾಜು ಮಾತನಾಡಿ ಸಮರ್ಪಕವಾಗಿ ಗುಂಪು ಮನೆಗಳ ಕಾನುಭವಿಗಳಿಗೆ ನಿಗದಿತ ಸಮಯದಲ್ಲಿ ಬ್ಯಾಂಕ್‌ಗಳಿಂದ ಸಾಲ ದೊರೆಯುತ್ತಿಲ್ಲ ಎಂದು ವ್ಯಾಪಕವಾಗಿ ಬಂದ ದೂರಿನ ಹಿನ್ನೆಲೆಯಲ್ಲಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಸೂಕ್ತ ಸಮಯದಲ್ಲಿ ಸಾಲ ಮಂಜೂರು ಮಾಡುವಂತೆ ಸೂಚಿಸಲಾಗಿದೆ ಎಂದರು.

ಈಗಾಗಲೇ ಕೆನರಾ ಬ್ಯಾಂಕ್ ಶಾಖೆಗೆ ೩೦೦ ಅರ್ಜಿಗಳು ಬಂದಿದ್ದು ೧೩೦ ಅರ್ಜಿಗಳ ವಾರಸುದಾರರಿಗೆ ಸಾಲ ಬಿಡುಗಡೆ ಮಾಡಲಾಗಿದೆ. ಜಿ+೨ ಮಾದರಿಯ ಫಲಾನುಭವಿಗಳು ಬಹುತೇಕ ಕೂಲಿ ಕಾರ್ಮಿಕರಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಬ್ಯಾಂಕನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ದಾಖಲೆ ಪಡೆಯುವ ಸಂದರ್ಭದಲ್ಲಿಯೇ ಪರಿಶೀಲಿಸಿ, ಸರಿಯಾಗಿ ಇದೆ ಎಂಬುದನ್ನು ಖಚಿತಪಡಿಸಿಕೊಂಡು ತಕ್ಷಣ ಸಾಲ ಮಂಜೂರು ಮಾಡಬೇಕೆಂದು ಹೇಳಿದರು.

ಈ ಸಂಬಂಧ ಬ್ಯಾಂಕಿನ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ನಗರಸಭೆ ಇಂಜಿನಿಯರ್ ಸಿಬ್ಬಂದಿ ಅಗತ್ಯ ದಾಖಲೆಗಳನ್ನು ಸ್ಥಳದಲ್ಲಿ ವಿತರಿಸಿ ಸಾಲ ದೊರೆಯಲು ಅನುಕೂಲವಾಗುವಂತೆ ಸೂಚಿಸಿದ್ದಾರೆ. ವಾಜಪೇಯಿ ಬಡಾವಣೆಯ ಬಳಿ ಜಿ+೨ ಹೈಟೆಕ್ ಮನೆಗಳು ನಿರ್ಮಾಣವಾಗುತ್ತಿದ್ದು ಈಗಾಗಲೇ ೮೦೦ ರಿಂದ ೯೦೦ ಮನೆಗಳು ನಿರ್ಮಾಣದ ಕೊನೆ ಹಂತದಲ್ಲಿವೆ ಎಂದರು.

ಮನೆಗಳಿಗೆ ವಿದ್ಯುತ್ ಸಂಪರ್ಕ, ಪೇಂಟಿಂಗ್ ಮುಂತಾದ ಕೆಲಸ ಬಾಕಿ ಇದು, ಬ್ಯಾಂಕಿಗೆ ಯಾರು ಮೊದಲು ದಾಖಲೆ ಸಲ್ಲಿಸಿ ಸಾಲ ಮಂಜೂರು ಮಾಡಿಸುವ ಫಲಾನುಭವಿಗಳಿಗೆ ಮನೆಯನ್ನು ವಿತರಿಸಲು ಕ್ರಮ ವಹಿಸಲಾಗುವುದು. ಜಿಲ್ಲಾಧಿಕಾರಿಗಳು, ಶಾಸಕರು, ತಾವೂ ಸೇರಿದಂತೆ ನಿಮ್ಮ ಪರವಾಗಿ ಕೆಲಸ ಮಾಡುತಿದ್ದೇವೆ ಎಂದು ಹೇಳಿದರು.

ಸರ್ಕಾರಗಳ ಮಹತ್ವಕಾಂಕ್ಷೆ ಯೋಜನೆಯಾದ ಇದು ೨೦೨೩ರ ಒಳಗೆ ಸರ್ವರಿಗೂ ಸೂರು ಇರಬೇಕೆಂಬುದು ಪ್ರಧಾನ ಮಂತ್ರಿಗಳ ಆಶಯವಾಗಿದೆ. ಬೆಂಗಳೂರಿನ ಅಪಾರ್ಟ್‌ಮೆಂಟ್ ರೀತಿ ಜಿ+೨ ಮಾದರಿಯ ನಿಮ್ಮ ಕನಸಿನ ಮನೆಯನ್ನು ಪಡೆಯಲು ಆಸಕ್ತಿ ವಹಿಸಿ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಅತಿ ಶೀಘ್ರದಲ್ಲಿ ಸಾಲ ಪಡೆಯಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್, ವಿವಿಧ ಬ್ಯಾಂಕುಗಳ ಅಧಿಕಾರಿಗಳು, ನಗರಸಭೆ ಸಿಬ್ಬಂದಿ ಹಾಗೂ ಫಲಾನುಭವಿಗಳು ಹಾಜರಿದ್ದರು.

Salamela of selected beneficiaries for G+2 type group houses

About Author

Leave a Reply

Your email address will not be published. Required fields are marked *