September 16, 2024

ಬೀದಿ ಬದಿ ವ್ಯಾಪಾರಿಗಳು ಸರ್ಕಾರದ ಸಾಲ ಸೌಲಭ್ಯ ಪಡೆದು ಆರ್ಥಿಕ ಸ್ವಾವಲಂಬಿಗಳಾಗಬೇಕು

0
Ashrya Nirvana Committee meeting organized in Municipal Council

Ashrya Nirvana Committee meeting organized in Municipal Council

ಚಿಕ್ಕಮಗಳೂರು: ಬೀದಿ ಬದಿ ವ್ಯಾಪಾರಿಗಳು ಖಾಸಗಿ ವ್ಯಕ್ತಿಗಳಿಂದ ಹಣ ಪಡೆದು ಬಡ್ಡಿ ಕಟ್ಟಲಾಗದೆ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡ ಕ್ರೇಂದ್ರ ಸರ್ಕಾರ ಸಣ್ಣ ವ್ಯಾಪಾರಿಗಳು ಆರ್ಥಿಕ ಸದೃಢರಾಗಬೇಕೇಂದು ಸಾಲ ಯೋಜನೆ ರೂಪಿಸಿ ನೆರವು ನೀಡುತ್ತಿದೆ ಎಂದು ನಗರ ಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.

ಅವರು ಇಂದು ನಗರಸಭೆಯಲ್ಲಿ ಆಯೋಜಿಸಲಾಗಿದ್ದ ಆಶ್ರಯ ನಿರ್ವಣ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಸರ್ಕಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಹತ್ತು ಸಾವಿರ ರೂ. ಸಾಲ ನೀಡುವ ಯೋಜನೆಯಿಂದ ೧೭೯೪ ಗುರಿಗೆ ೧೭೫೦ ಜನರಿಗೆ ಸಾಲವಿತರಣೆ ಮಾಡಲಾಗಿದ್ದು ೨೦ ಸಾವಿರ ಸಾಲ ನೀಡುವ ಯೋಜನೆಗೆ ೭೩೩ ಗುರಿಗೆ ೫೦೩ ಜನರಿಗೆ ನೀಡಲಾಗಿದೆ ಇದುವರೆಗೆ ೩.೩೧ ಕೋಟಿ ರೂ. ಸಾಲ ನೀಡಲಾಗಿದೆ ಎಂದು ಹೇಳಿದರು.

೧.೫೦ ಕೋಟಿ ರೂ. ವೆಚ್ಚದಲ್ಲಿ ನಿರಾಶ್ರಿತರಿಗೆ ನೂತನ ಕಟ್ಟಡ ನಿರ್ಮಾಣ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಿದ್ದ ಪಡಿಸಿ ಸಲ್ಲಿಸಲು ತಿರ್ಮಾನಿಸಲಾಗಿದೆ ಶೇ.೫೦ ರಷ್ಟು ಹಣ ಬರುವ ನಿರೀಕ್ಷೆ ಇದ್ದು ಉಳಿದ ಹಣವನ್ನು ನಗರಸಭೆಯಿಂದ ಹೊಂದಾಣಿಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

೧ ಕೋಟಿ ರೂ. ವೆಚ್ಚದಲ್ಲಿ ನಗರದ ೫ ಕಡೆ ಫುಡ್ ಕೋರ್ಟ್ ನಿರ್ಮಾಣ ಮಾಡಲು ನಿನ್ನೆ ತೀರ್ಮಾನ ಕೈಗೊಂಡಿದ್ದು ಒಂದು ವಾರದೊಳ್ಳಗೆ ಡಿ.ಪಿ.ಆರ್ ತಯಾರಿಸಲು ಇಂಜಿನಿಯರ್ ಗಳಿಗೆ ಸೂಚನೆ ನೀಡಿದ್ದು ಡಿಸಂಬರ್ ಅಂತ್ಯಕ್ಕೆ ಪ್ರಾರಂಭಿಸಲಾಗುವುದೆಂದರು.

ನಗರಸಭೆ ಆವರಣದಲ್ಲಿ ನಿರ್ಮಿಸಿರುವ ಫುಡ್ ಕೋರ್ಟ್ ರಾಜ್ಯದಲ್ಲೆ ಮಾದರಿಯಾಗಿದ್ದು ಶೇ.೯೫ ರಷ್ಟು ಕಾಮಗಾರಿ ಮುಕ್ತಾಯವಾಗಿದೆ ಮುಂದಿನ ವರ್ಷದ ಸಂಕ್ರಾಂತಿಯ ವೇಳೆಗೆ ಇದು ಉದ್ಘಾಟನೆಯಾಗಲಿದ್ದು ನಂತರ ಟೆಂಡರ್ ಪಡೆದ ಬೀದಿ ಬದಿ ವ್ಯಾಪಾರಿಗಳು ಗುಣಮಟ್ಟದ ಆಹಾರ ಪದಾರ್ಥಗಳನ್ನು ಬಳಸಿ ನಾಗರೀಕರಿಗೆ ಹಾಗೂ ಪ್ರವಾಸಿಗರಿಗೆ ಉತ್ತಮ ಆಹಾರ ಒದಗಿಸಲು ವ್ಯವಸ್ಥೆ ಮಾಡುವಂತೆ ಕ್ರಮವಹಿಸಲಾಗುವುದೆಂದು ಹೇಳಿದರು.

ಆಶ್ರಯ ನಿರ್ವಹಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ ಪೌರಾಯುಕ್ತ ಬಿ.ಸಿ ಬಸವರಾಜು ಮಾತನಾಡಿ ಪತ್ರಿಕೆ, ಹಾಲು ವಿತರಣೆ ಮಾಡುವವರು, ಟೈಲರಿಂಗ್ ಸೇರಿದಂತೆ ಸಣ್ಣ ಉದ್ಯಮ ನಡೆಸುತ್ತಿರುವವರಿಗೆ ಸರ್ಕಾರ ಸಹಾಯ ಧನ ಘೋಷಣೆ ಮಾಡಿ ಬ್ಯಾಂಕ್ ಮೂಲಕ ಸಾಲ ನೀಡಲು ಸೂಚನೆ ನೀಡಿದೆ ಎಂದರು.

ಉದ್ಯೋಗ ಮಾಡುವವರು ನಗರಸಭೆಗೆ ಬಂದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಒಂದು ವಾರದಲ್ಲಿ ಸಾಲ ಮಂಜೂರು ಮಾಡುತ್ತೇವೆ ಮೊದಲಿಗೆ ೧೦ ಸಾವಿರ ಒಂದು ವರ್ಷದಲ್ಲಿ ತೀರಿಸಿದವರಿಗೆ ೨೦ ಸಾವಿರ ಮೂರನೇ ಬಾರಿಗೆ ೫೦ ಸಾವಿರ ೪ ನೇ ಬಾರಿಗೆ ೧ ಲಕ್ಷ ರೂ. ಸೇರಿದಂತೆ ವಿವಿಧ ಹಂತದಲ್ಲಿ ೫ ಲಕ್ಷ ರೂ. ಗಳ ವರೆಗೆ ಸಾಲ ಸೌಲಭ್ಯ ದೊರೆಯಲ್ಲಿದೆ ಎಂದರು.

ಸಣ್ಣ ಉದ್ಯಮ ನಡೆಸುವ ವ್ಯಾಪಾರಿಗಳು ಈ ಸಾಲ ಸೌಲಭ್ಯ ಪಡೆದುಕೊಳ್ಳುವಂತೆ ಮನವಿ ಮಾಡಿದ ಅವರು ವಿಜಯ ಪುರ ನಗರಸಭೆ ಜಾಗದಲ್ಲಿ, ತಾಲ್ಲೂಕು ಕಛೇರಿ ಬಸವನಹಳ್ಳಿ ಶಾಲೆ ಪಕ್ಕ, ಜಾಲಿ ಫ್ರೆಡ್ಸ್ ವೃತ್ತ, ಖಾಸಗಿ ಬಸ್ ನಿಲ್ದಾಣ ನಗರದಲ್ಲಿ ಈ ನಾಲ್ಕು ಕಡೆ ಹಾಗೂ ಬೈಪಾಸ್ ರಸ್ತೆಯ ಐ.ಡಿ.ಎಸ್.ಜಿ ಕಾಲೇಜು ಬಳಿ ಫುಡ್ ಕೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿದೆ ಸರ್ಕಾರದಿಂದ ಹಣ ಬಂದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗವುದೆಂದು ತಿಳಿಸಿದರು.

ಹಾಲಿ ರಾಮನಹಳ್ಳಿಯ ನಿರಾಶ್ರಿತರ ತಾಣ ಜಿಲ್ಲಾ ಕೇಂದ್ರದಲ್ಲಿದ್ದು ಅದನ್ನು ನಗರಸಭೆಯಿಂದ ನಿರ್ವಹಣೆ ಮಾಡುತ್ತಿದ್ದು ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲು ನಗರದ ಟೆಂಡರ್ ಚಿಕನ್ ಹಿಂಬಾಗ ಇರುವ ೧೦೦*೧೦೦ ಅಳತೆಯ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದೆಂದು ಹೇಳಿದರು.

ಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರು, ವಿವಿಧ ಇಲಾಖೆಯ ಸಿಬ್ಬಂದಿಗಳು, ನಗರಸಭೆ ಉಪಾಧ್ಯಕ್ಷ ಅಮೃತೇಶ್ ಉಪಸ್ಥಿತರಿದ್ದರು.

Ashrya Nirvana Committee meeting organized in Municipal Council

About Author

Leave a Reply

Your email address will not be published. Required fields are marked *