September 16, 2024

ಡಿ.3ಕ್ಕೆ ಸಿರವಾಸೆಯಲ್ಲಿ ತಾಲೂಕು ಮಟ್ಟದ ಸಾಹಿತ್ಯ ಉತ್ಸವ ಕನ್ನಡ ನುಡಿ ನಿತ್ಯೋತ್ಸವ

0
ಸಿರವಾಸೆಯ ಹೋಬಳಿ ಘಟಕದ ಅಧ್ಯಕ್ಷ ವಾಸು ಪೂಜಾರಿ ಪತ್ರಿಕಾಗೋಷ್ಠಿ

ಸಿರವಾಸೆಯ ಹೋಬಳಿ ಘಟಕದ ಅಧ್ಯಕ್ಷ ವಾಸು ಪೂಜಾರಿ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಮುಂದಿನ ಡಿಸೆಂಬರ್ ೩ರಂದು ಜಾಗರ ಹೋಬಳಿ ಕನ್ನಡ ಸಾಹಿತ್ಯ ಪರಿ?ತ್ ಘಟಕದಿಂದ ತಾಲೂಕು ಮಟ್ಟದ ಸಾಹಿತ್ಯ ಉತ್ಸವ ಕನ್ನಡ ನುಡಿ ನಿತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೋಬಳಿ ಘಟಕದ ಅಧ್ಯಕ್ಷ ವಾಸು ಪೂಜಾರಿ ತಿಳಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಅವರು ಡಿ.೩ರ ಭಾನುವಾರ ಬೆಳಗ್ಗೆ ೧೦ ಗಂಟೆಗೆ ಸಿರವಾಸೆಯಲ್ಲಿ ಪಡೆಯುವ ಈ ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ತಾಲ್ಲೂಕು ಮಟ್ಟದ ಕವಿಗೋಷ್ಠಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಜಾನಪದ ಗೀತ ಗಾಯನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ಜಾನಪದ, ಭಾವಗೀತೆ ಸ್ಪರ್ಧೆ ಏರ್ಪಡಿಸಲಾಗಿದೆ ಸಿರವಾಸೆ ಮುಳ್ಳೇಗೌಡ ಧ್ವಜಸ್ತಂಭ ಆವರಣದಲ್ಲಿ ರಾ?ಧ್ವಜ ಕನ್ನಡ ಧ್ವಜಾರೋಹಣ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯೊಂದಿಗೆ ವಿಜೃಂಭಣೆಯ ಮೆರವಣಿಗೆ ಜೊತೆಗೆ ಆದಿ ಧೂಮಾವತಿ ದೇಶಿ ಬಹಿದಶಿ ಕೃಪಾ ಪೋಷಿತ ಯಕ್ಷಗಾನ ಮಂಡಳಿಯಿಂದ ರಾತ್ರಿ ೯:೦೦ ಗಂಟೆಗೆ ಮಹಿ? ಮರ್ದಿನಿ ಎಂಬ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.

ಶಾಸಕ ಎಚ್.ಡಿ ತಮ್ಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು ಮಾಜಿ ಸಚಿವ ಸಿ.ಟಿ ರವಿ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ಕ.ಸಾ.ಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾ. ಅಧ್ಯಕ್ಷ ಜಿಗಣಿಹಳ್ಳಿ ಸೋಮಶೇಖರ್ , ಚಟ್ನಳ್ಳಿ ಮಹೇಶ್ ಸೇರಿದಂತೆ ಅನೇಕ ಸಾಹಿತಿಗಳು ಹಾಗೂ ಮಾಜಿ ಹಾಲಿ ಜನಪ್ರತಿನಿಧಿಗಳು ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಸಿ.ಎಂ ಜಾರ್ಜ್ ಅವರು ಕನ್ನಡ ಭಾ? ಸಂಸ್ಕೃತಿ ಉಳುವಿಗಾಗಿ ಪ್ರಯತ್ನಿಸುವುದು ಎಲ್ಲರ ಜವಾಬ್ದಾರಿ ಆಗಿದೆ ಈ ನಿಟ್ಟಿನಲ್ಲಿ ಕಾರ್ಯಕ್ರಮ ಏರ್ಪಡಿಸಿರುವುದು ಸಂತೋ?ದ ವಿ?ಯ ಎಂದು ಹೇಳಿದರು.
ಕಾರ್ಯಕ್ರಮದ ಮುಖಂಡರುಗಳಾದ ನೀಲಯ್ಯ, ಶಂಕರಶೆಟ್ಟಿ ಉಪಸ್ಥಿತರಿದ್ದರು.

Kannada Nudi Nityotsav is a taluk level literature festival in Siravase

About Author

Leave a Reply

Your email address will not be published. Required fields are marked *