September 16, 2024

ದೇಶದ ಕಾನೂನಿನ ಬಗ್ಗೆ ಪ್ರತಿಯೊಬ್ಬ ನಾಗರೀಕರು ತಿಳಿಯುವುದು ಅತಿ ಮುಖ್ಯ

0
ಜೆ.ವಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮ

ಜೆ.ವಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮ

ಚಿಕ್ಕಮಗಳೂರು: ನಮ್ಮ ಜೀವನದಲ್ಲಿ ನಾವು ಜೀವಿಸಲು ಗಾಳಿ, ನೀರು, ಬೆಳಕು ಎಷ್ಟು ಅವಶ್ಯಕವೋ, ದೇಶದ ಕಾನೂನಿನ ಬಗ್ಗೆ ಪ್ರತಿಯೊಬ್ಬ ನಾಗರೀಕರು ತಿಳಿಯುವುದು ಅಷ್ಟೇ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಸದಸ್ಯರಾದ ಎ.ಎಸ್.ಸೋಮ ತಿಳಿಸಿದರು.

ನಗರದ ಜೆ.ವಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಜೀವನದಲ್ಲಿ ನಾವು ಜೀವಿಸಲು ಗಾಳಿ, ನೀರು, ಬೆಳಕು ಎಷ್ಟು ಅವಶ್ಯಕವೋ, ದೇಶದ ಕಾನೂನಿನ ಬಗ್ಗೆ ಪ್ರತಿಯೊಬ್ಬ ನಾಗರೀಕರು ತಿಳಿಯುವುದು ಅಷ್ಟೇ ಅವಶ್ಯಕ, ಎಲ್ಲಾ ಕ್ಷೇತ್ರಗಳು ಕಾನೂನಿನ ಅಡಿಯಲ್ಲಿ ನಡೆಯುತ್ತದೆ, ಜೀವನ ನಡೆಸಲು ಬೇಕಾದಷ್ಟು ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಮುಖ್ಯ ಎಂದರು.

ದೇಶದ ಭವಿಷ್ಯವಾದ ಯುವ ಜನರಲ್ಲಿ ಕಾನೂನಿನ ಅರಿವು ಮೂಡಿಸುವ ಸಲುವಾಗಿ, ಶಾಲಾ-ಕಾಲೇಜುಗಳಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ಯಾವುದೇ ರೀತಿಯ ತಪ್ಪುಗಳು ನಡೆಯುವ ಮೊದಲೆ ಮುನ್ನೆಚ್ಚರಿಕೆ ವಹಿಸುವುದು ಇದರ ಉದ್ದೇಶವಾಗಿದೆ, ಕಾನೂನಿನ ಯೋಜನೆಗಳು ಅನುಷ್ಠಾನಕ್ಕೆ ಬರಲು ಇಲಾಖೆಗಳ ಜೊತೆಗೆ ಸಾರ್ವಜನಿಕರ ಜವಾಬ್ದಾರಿ ಎಂದು ತಿಳಿದಾಗ ಮಾತ್ರ ದೇಶದಲ್ಲಿ ಸುಭದ್ರ ಬುನಾದಿಯನ್ನು ಹಾಕಲು ಸಾಧ್ಯ ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ಕಾನೂನು ರಚನೆ ಎಷ್ಟು ಮುಖ್ಯವೋ, ಅದರ ಅರಿವನ್ನು ಮೂಡಿಸಿಕೊಳ್ಳುವುದು ಅಷ್ಟೇ ಮುಖ್ಯ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಕಾನೂನಿನ ಬಗ್ಗೆ ತಿಳಿಯಬೇಕು, ನಮ್ಮ ದೇಶದಲ್ಲಿ ಮನುಷ್ಯನ ಹುಟ್ಟಿನಿಂದ ಸಾವಿನ ವರೆಗೂ ಸಾವಿರಾರು ಕಾನೂನುಗಳಿವೆ, ಇಂತಹ ಕಾನೂನುಗಳಿಂದ ಶಾಂತಿ ನೆಮ್ಮದಿಯಿಂದ ದೇಶದಲ್ಲಿ ಬದುಕುವ ಅವಕಾಶವನ್ನು ಮಾಡಿಕೊಡಲಾಗಿದೆ ಎಂದರು.

ಶಾಲಾ ಸಲಹಾ ಸಮಿತಿ ಸದಸ್ಯ ಎಸ್.ಎಸ್.ವೆಂಕಟೇಶ್ ಮಾತನಾಡಿ ಕಾನೂನಿನ ಬಗ್ಗೆ ಮಾಹಿತಿಯನ್ನು ನೀಡಲು ನ್ಯಾಯಾಧೀಶರು ಹಾಗೂ ವಕೀಲರು ಇರುತ್ತಾರೆ, ಕಾನೂನು ಅಡಿಯಲ್ಲಿ ತಪ್ಪನ್ನು ಮಾಡಿದವರಿಗೆ ಕಾನೂನಿನಲ್ಲಿ ಕ್ಷಮೆ ಇರುವುದಿಲ್ಲ, ಆದ್ದರಿಂದ ದೇಶದ ಪ್ರತಿಯೋಬ್ಬ ನಾಗರೀಕರು ಕಾನೂನಿನ ಬಗ್ಗೆ ತಿಳಿಯುವುದು ಅಗತ್ಯ ಎಂದರು.

ಜೀವನದಲ್ಲಿ ತಮಗೆ ಅರಿವಿಲ್ಲದೆ ಮಾಡುವಂತಹ ತಪ್ಪುಗಳು ಮುಂದೊಂದು ದಿನ ಶಿಕ್ಷಾರ್ಹ ಅಪರಾದವಾಗುತ್ತದೆ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಹುದ್ದೆಗೆ ತೆರಳುವಾಗ ಅವರ ಹಿನ್ನಲೆ ಪರಿಶೀಲಿಸಲಾಗುವುದು ಅಂತಹ ಸಂದರ್ಭದಲ್ಲಿ ಅವರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ವಿದ್ಯಾರ್ಥಿಗಳು ಯಾವುದೇ ರೀತಿಯ ತಪ್ಪುಗಳನ್ನು ಮಾಡದೆ ಕಾನೂನು ಅಡಿಯಲ್ಲಿ ಕೆಲಸವನ್ನು ಮಾಡಬೇಕೆಂದು ತಿಳಿಸಿದರು.

ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್ ಮಾತನಾಡಿ ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ನನಗೆ ಹೆಮ್ಮೆ ಇದ್ದು, ಕಾನೂನು ಎಂದರೆ ಭಯಪಡುವ ವಿಷಯವಲ್ಲ, ಭಾರತ ದೇಶದ ಸಂವಿಧಾನ ವಿಶಾಲವಾಗಿದೆ ಮತ್ತು ತಪ್ಪು ಮಾಡದೆ ಅಪರಾಧಿಗಳು ಎಂದು ಗುರುತಿಸಿಕೊಂಡಾಗ ಕಾನೂನು ರೀತಿಯಲ್ಲಿ ಹಲವು ಅವಕಾಶಗಳು ಇವೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದ ಸಂವಿಧಾನದ ಮೂಲಕ ನಮ್ಮ ಹಕ್ಕುಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಇಂತಹ ಅವಕಾಶವನ್ನು ನೀಡಿದ ಅವರಿಗೆ ನಾವೆಲ್ಲರೂ ಋಣಿಗಳು ಎಂದರು.

ಉಪಪ್ರಧಾನ ಕಾನೂನು ನೆರವು ಅಭಿರಕ್ಷಕರಾದ ಡಿ.ನಟರಾಜ್ ವಿದ್ಯಾರ್ಥಿಗಳಿಗೆ ಕಾನೂನು ಅರಿವಿನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು, ಈ ಸಂದರ್ಭದಲ್ಲಿ ಸಿಇಓ ಕುಳ್ಳೇಗೌಡ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ತೇಜಸ್ವಿನಿ ಸ್ವಾಗತಿಸಿ, ಪವಿತ್ರ ನಿರೂಪಿಸಿ, ಸುಷ್ಮಿತಾ ವಂದಿಸಿದರು.

Legal awareness program for students

About Author

Leave a Reply

Your email address will not be published. Required fields are marked *