September 19, 2024

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಅಂತರ ಶಾಲಾ ವಿವಿಧ ಪ್ರತಿಭಾ ಸ್ಪರ್ಧೆ

0
ಕುವೆಂಪು ವಿದ್ಯಾನಿಕೇತನ್ ಶಾಲೆಯ ಸಂಸ್ಥೆಯ ಸಂಸ್ಥಾಪಕ ಕೆ.ಸಿ ಶಂಕರ್ ಪತ್ರಿಕಾಗೋಷ್ಠಿ

ಕುವೆಂಪು ವಿದ್ಯಾನಿಕೇತನ್ ಶಾಲೆಯ ಸಂಸ್ಥೆಯ ಸಂಸ್ಥಾಪಕ ಕೆ.ಸಿ ಶಂಕರ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಅಂತರ ಶಾಲಾ ವಿವಿಧ ಪ್ರತಿಭಾ ಸ್ಪರ್ಧೆಗಳನ್ನು ಡಿ.೨ ರಂದು ಶನಿವಾರ ಬೆಳಗ್ಗೆ ೧೦ ಗಂಟೆಗೆ ಕುವೆಂಪು ವಿದ್ಯಾನಿಕೇತನ್ ಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕೆ.ಸಿ ಶಂಕರ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಖ್ಯಾತ ಆಹಾರ, ವಿಜ್ಞಾನಿ, ತಜ್ಞ ಕೆ.ಸಿ ರಘು ಸ್ಮರಣಾರ್ಥ ಈ ಅಂತರ ಪ್ರೌಢಶಾಲೆ ಸ್ಪರ್ಧೆಗಳನ್ನು ಅಂದು ಆಯೋಜಿಸಲಾಗಿದೆ. ಈಗಾಗಲೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ೧೦೦ ಶಾಲೆಗಳನ್ನು ಸಂಪರ್ಕಿಸಿದ್ದು ೨೦೦ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದರು.

ಮಕ್ಕಳಲ್ಲಿ ಸೂಕ್ತವಾಗಿರುವ ಪ್ರತಿಭೆಗಳನ್ನು ಹೊರ ತರುವುದೇ ಶಿಕ್ಷಕ ಮತ್ತು ಶಿಕ್ಷಣದ ಗುರಿ. ಈ ನಿಟ್ಟಿನಲ್ಲಿ ಶಾಲೆಗಳು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರೇರೇಪಿಸಿ ಮಕ್ಕಳಿಗೆ ವೇದಿಕೆಗಳನ್ನು ಕಲ್ಪಿಸುವುದು ಬಹು ಮುಖ್ಯ ಮಕ್ಕಳ ಭವಿ?ಕ್ಕೆ ಬಹು ಅವಶ್ಯವಾಗಿರುವ ವ್ಯಕ್ತಿತ್ವ ನಿರ್ಮಾಣ ಮತ್ತು ಸೂಕ್ಷ್ಮ ಕೌಶಲ್ಯಗಳ ಸಂಪಾದನೆಯಲ್ಲಿ ಇಂತಹ ಅವಕಾಶವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಾಹಿತಿ ನೀಡಿದರು.

ಈ ನಿಟ್ಟಿನಲ್ಲಿ ಕುವೆಂಪು ವಿದ್ಯಾನಿಕೇತನ ಶಾಲೆಯು ಕಳೆದ ಹತ್ತು ವ?ಗಳಿಂದಲೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಅಂತರ ಶಾಲಾ ವಿವಿಧ ಪ್ರತಿಭಾ ಸ್ಪರ್ಧೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಪುಸ್ತಕದ ರೂಪದಲ್ಲಿ ಬಹುಮಾನ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಬಂಧ ಸ್ಪರ್ಧೆ ಸಾಮಾನ್ಯ ಜ್ಞಾನ ಎಸ್ಸೆ ರೈಟಿಂಗ್ ಮುಂತಾದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಕುವೆಂಪು ವಿದ್ಯಾನಿಕೇತನ್ ಶಾಲೆ ದೂರವಾಣಿ ಸಂಖ್ಯೆ ೯೪೮೨೩೮೧೭೫೮ ಸಂಪರ್ಕಿಸಬಹುದಾಗಿದೆ ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಲೆಯ ಪ್ರಾಂಶುಪಾಲರಾದ ರಾಘವೇಂದ್ರ ಉಪಸ್ಥಿತರಿದ್ದರು.

Kuvempu Vidyaniketan School

About Author

Leave a Reply

Your email address will not be published. Required fields are marked *

You may have missed