September 16, 2024

ನಮ್ಮ ನಾಡು-ನಮ್ಮ ಹಾಡು ಎಂಬ ನಾಡಿನ ಹೆಮ್ಮೆಯ ಕವಿಗಳ ಕಾವ್ಯ ಗಾಯನ

0
ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್ ಸುಧೀರ್ ಪತ್ರಿಕಾಗೋಷ್ಠಿ

ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್ ಸುಧೀರ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಕರ್ನಾಟಕದ ಅಂಗವಾಗಿ ಪೂರ್ವಿ ಗಾನಯಾನ ೯೨ರ ಸಂಚಿಕೆಯಡಿ ನಮ್ಮ ನಾಡು-ನಮ್ಮ ಹಾಡು ಎಂಬ ನಾಡಿನ ಹೆಮ್ಮೆಯ ಕವಿಗಳ ಕಾವ್ಯ ಗಾಯನ ಕಾರ್ಯಕ್ರಮವನ್ನು ನ.೨೬ರಂದು ಭಾನುವಾರ ಸಂಜೆ ೬ ಗಂಟೆಗೆ ನಗರದ ಎಂ.ಇ.ಎಸ್ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್ ಸುಧೀರ್ ಅವರು ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ, ಕರ್ನಾಟಕ ಸುಗಮಸಂಗೀತ ಪರಿ?ತ್ತು ಚಿಕ್ಕಮಗಳೂರು ಘಟಕ, ಲಯನ್ಸ್ ಸಂಸ್ಥೆ, ಮಲೆನಾಡು ವಿದ್ಯಾಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಕ್ಕಮಗಳೂರಿನ ಎಲ್ಲಾ ಸಂಗೀತ ಶಾಲೆಗಳ ಸಹಯೋಗದಲ್ಲಿ ನಡೆಯಲಿದೆ ಎಂದರು.

ಪೂರ್ವಿಯ ಗಾಯಕರಾದ ರಾಯನಾಯಕ್, ದರ್ಶನ್, ಸುರೇಂದ್ರನಾಯ್ಕ್, ಅನುಷ, ರುಕ್ಸಾನಾ ಕಾಚೂರ್, ಸುಂದರಲಕ್ಷ್ಮೀ, ಪೃಥ್ವಿಶ್ರೀ, ಲಾಲಿತ್ಯಅಣ್ವೇಕರ್, ಹಾಸನದ ಚೇತನ್ ರಾಮ್, ಬೆಂಗಳೂರಿನ ಶ್ವೇತಾ ಭಾರದ್ವಾಜ್ ಹಾಗೂ ತರಬೇತಿಗೊಂಡ ಸಂಗೀತ ಶಾಲೆಗಳ ವಿದ್ಯಾರ್ಥಿಗಳು ಎಂ.ಎಸ್.ಸುಧೀರ್‌ರವರ ಸಂಗೀತ ನಿರ್ದೇಶನದಲ್ಲಿ ಹಾಡಲಿದ್ದು ಕಾವ್ಯಗಳ ವಿಶೇ?ತೆಯೊಂದಿಗೆ ಸುಮಪ್ರಸಾದ್ ಹಾಗೂ ರೂಪನಾಯ್ಕ್ ನಿರೂಪಿಸಲಿದ್ದಾರೆ ಎಂದು ಹೇಳಿದರು.

ನ.೨೬ರ-ಸಂಜೆ ೬ಕ್ಕೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ಪೊಲೀಸ್ ಅಧೀಕ್ಷಕರಾದ ಡಾ|| ವಿಕ್ರಮ ಅಮಟೆ ಅವರು ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಯುರೇಕಾ ಅಕಾಡೆಮಿಯ ಸಂಸ್ಥಾಪಕ ದೀಪಕ್ ದೊಡ್ಡಯ್ಯ ವಹಿಸಲಿದ್ದಾರೆ. ಭಾರತೀಯ ಕಾಫಿಮಂಡಳಿಯ ನೂತನ ಅಧ್ಯಕ್ಷ ದಿನೇಶ್ ದೇವವೃಂದ ಮಲೆನಾಡು ವಿದ್ಯಾಸಂಸ್ಥೆಯ ಗೌರವಕಾರ್ಯದರ್ಶಿ ಡಾ. ಡಿ.ಎಲ್.ವಿಜಯಕುಮಾರ್, ಕರ್ನಾಟಕ ಸುಗಮ ಸಂಗೀತ ಪರಿ?ತ್ತಿನ ಜಿಲ್ಲಾಧ್ಯಕ್ಷ ಎಸ್.ಎಸ್ ವೆಂಕಟೇಶ್ ಹಾಗೂ ಲಯನ್ಸ್ ಸಂಸ್ಥೆಯ ವೈ.ಸಿ ಸುನೀಲ್‌ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಇಡೀ ಕಾರ್ಯಕ್ರಮದಲ್ಲಿ ಮಾತುಗಳಿಗೆ ಹೆಚ್ಚು ಅವಕಾಶವಿಲ್ಲದೆ ಕೇವಲ ಗೀತೆಗಳಿಗೆ ಪ್ರಧಾನ್ಯತೆ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗಾಯಕ ರಾಯನಾಯಕ್, ಸುಮಪ್ರಸಾದ್ ಇದ್ದರು.

Poetry sung by the proud poets of our country-Numma Song

About Author

Leave a Reply

Your email address will not be published. Required fields are marked *