September 16, 2024

ಡಿ.9ರಂದು ಜಿಲ್ಲಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್

0
ಜಿಲ್ಲಾ ನ್ಯಾಯಾಧೀಶ ಶುಭಗೌಡರ್ ಪತ್ರಿಕಾಗೋಷ್ಠಿ

ಜಿಲ್ಲಾ ನ್ಯಾಯಾಧೀಶ ಶುಭಗೌಡರ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಮುಂಬರುವ ಡಿ.೯ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು ರಾಜೀ ಸಂದಾನದ ಮೂಲಕ ಬಗೆ ಹರಿಯುವ ವ್ಯಾಜ್ಯಗಳಿಗೆ ಮೇಲ್ಮನವಿಗೆ ಅವಕಾಶವಿಲ್ಲದಂತೆ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದ್ದು ಕಕ್ಷಿದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ನ್ಯಾಯಾಧೀಶ ಶುಭಗೌಡರ್ ತಿಳಿಸಿದರು.

ಇಂದು ನ್ಯಾಯಾಲಯದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಅವರು ಡಿಸೆಂಬರ್ ೯ ರಂದು ರಾ?ದ್ಯಂತ ಬೃಹತ್ ಲೋಕಅದಾಲತ್ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಜಿಲ್ಲಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿ ಆಗಬಹುದಾದಂತ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗುವುದು ಅದೇ ರೀತಿ ರಾಜಿಯಾಗಬಹುದಾದ ವ್ಯಾಜ್ಯಪೂರ್ವ ಪ್ರಕರಣಗಳನ್ನು ಸಹ ಇತ್ಯರ್ಥ ಪಡಿಸಲಾಗುವುದೆಂದು ಹೇಳಿದರು.

ಲೋಕಅದಾಲತ್‌ನಲ್ಲಿ ಭಾಗವಹಿಸುವುದರಿಂದ ಇಲ್ಲಿ ಮಾಡಿದಂತಹ ಅವಾರ್ಡ್ ಐ ತೀರ್ಪು ಅಂತಿಮವಾಗಿದ್ದು ಮೇಲ್ಮನವಿಗೆ ಅವಕಾಶವಿರುವುದಿಲ್ಲ ಇದರಿಂದ ಕಕ್ಷಿದಾರರಿಗೆ ಸಮಯ ಹಾಗೂ ಖರ್ಚಿನ ಉಳಿತಾಯವಾಗುವುದಲ್ಲದೆ ಪದೇ ಪದೇ ನ್ಯಾಯಾಲಯಕ್ಕೆ ಅಲೆಯುವುದು ತಪ್ಪಿ ಹೋಗಿ ಸ್ನೇಹ ಮತ್ತು ಸಂಬಂಧಗಳು ಉತ್ತಮವಾಗುವುದರಿಂದ ಕಕ್ಷಿದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ಮಾಡಿದರು.

ಪ್ರಸ್ತುತ ನ.೧ ರವರೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ೩೩೭೯೦ ಪ್ರಕರಣಗಳು ಬಾಕಿ ಇದ್ದು ಅದರಲ್ಲಿ ರಾಜೀ ಮೂಲಕ ಬಗೆಹರಿಯಬಹುದಾದ ೧೨೩೨೦ ಪ್ರಕರಣಗಳನ್ನು ಗುರುತಿಸಿದ್ದು ಅವುಗಳ ಪೈಕಿ ೪೫೭೩ ಪ್ರಕರಣಗಳನ್ನು ಲೋಕಅದಾಲತ್ ಮೂಲಕ ಇತ್ಯರ್ಥ ಪಡಿಸಲು ತೀರ್ಮಾನಿಸಲಾಗಿದೆ ಎಂದರು.

ಹಿಂದೆ ನಡೆದ ಲೋಕಅದಾಲತ್‌ನಲ್ಲಿ ೧೦೧೧೨ ಪ್ರಕರಣಗಳು ಇತ್ಯರ್ಥವಾಗಿದ್ದು ಎಲ್ಲಾ ನ್ಯಾಯಾಲಯಗಳಲ್ಲಿ ನಿರಂತರವಾಗಿ ಈ ಪ್ರಕ್ರಿಯೆ ನಡೆಯುತ್ತಿರುತ್ತದೆ ಅದೇ ರೀತಿ ಡಿ.೯ರಂದು ರಾ?ದ್ಯಂತ ನಡೆಯುತ್ತಿರುವ ಲೋಕಅದಾಲತ್‌ನಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ನ್ಯಾಯಾಲಯಗಳಲ್ಲೂ ಏಕಕಾಲದಲ್ಲಿ ಪ್ರಕರಣಗಳನ್ನು ಸಂತಾನದ ಮೂಲಕ ಇತ್ಯರ್ಥ ಪಡಿಸಲಾಗುವುದೆಂದು ಹೇಳಿದರು.

ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬಹುದಾಗಿದ್ದು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದೊಂದಿಗೆ ಈ ಅದಾಲತ್ ನಡೆಯುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿವಿಲ್ ನ್ಯಾಯಾಧೀಶ ನ್ಯಾಯ ಎ.ಎಸ್ ಸೋಮ ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಸುಧಾಕರ್ ಉಪಸ್ಥಿತರಿದ್ದರು.

Rashtriya Lok Adalat in all courts across the district

About Author

Leave a Reply

Your email address will not be published. Required fields are marked *