September 19, 2024

ಪ್ರತಿನಿತ್ಯ ಕನ್ನಡದಲ್ಲೇ ವ್ಯವಹರಿಸಿದರೆ ರಾಜ್ಯೋತ್ಸವ ಆಚರಿಸಿದಂತೆ

0
ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಹಾಗೂ ನಗರ ಆಟೋಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಅನ್ನಸಂತರ್ಪಣೆ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಹಾಗೂ ನಗರ ಆಟೋಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಅನ್ನಸಂತರ್ಪಣೆ

ಚಿಕ್ಕಮಗಳೂರು:  ಪ್ರತಿದಿನ ಕನ್ನಡ ಭಾಷೆ ಬಳಕೆ ಮಾಡುವ ಜತೆಗೆ ಕನ್ನಡದಲ್ಲಿಯೇ ವ್ಯವ ಹರಿಸಿದರೆ ವಷ್ಪೂರ್ತಿ ರಾಜ್ಯೋತ್ಸವ ಆಚರಿಸಿದಂತೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.

ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಹಾಗೂ ನಗರ ಆಟೋಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಬಂದು ಅಭ್ಯಾಸ ಮಾಡು ತ್ತಿದ್ದಾರೆ. ದಿವ್ಯಾಂಗ ಮಕ್ಕಳು ದೇವರ ಮಕ್ಕಳು. ಈ ಶಾಲೆಯ ಮಕ್ಕಳು ಏ?ದ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶವೇ ಮೆಚ್ಚುವಂತಹ ಸಾಧನೆ ಮಾಡುವ ಮೂಲಕ ನಮಗೆಲ್ಲಾ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅವರು, ಆಟೋ ಚಾಲಕರ ಮತ್ತು ಮಾಲೀಕರ ಸಂಘ ರಾಜ್ಯೋತ್ಸವದ ಸಂದರ್ಭದಲ್ಲಿ ಈ ರೀತಿಯ ಪುಣ್ಯದ ಕೆಲಸ ಮಾಡುತ್ತಿರುವುದು ಶ್ಲಾಘನೀಯಎಂದರು.

ನಗರ ಆಟೋ ಸಂಘದ ಅಧ್ಯಕ್ಷ ರಾಮೇಗೌಡ ಮಾತನಾಡಿ, ಆಟೋ ಚಾಲಕರು ಮತ್ತು ಮಾಲೀಕರು ನಮ್ಮ ಕ?, ಕಾರ್ಪಣ್ಯಗಳ ನಡುವೆಯೂ ಹಲವು ಸಮಾಜಿಕ ಸೇವೆಗಳನ್ನು ಮಾಡಿಕೊಂಡು ಬಂದಿದ್ದೇವೆ ಎಂದರು.

ಪ್ರಧಾನ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಕಾರ್ಯಕ್ರಮ ವನ್ನು ವಿವಿಧ ಕ್ರೀಡಾಚಟುವಟಿಕೆ, ಅನ್ನದಾನದ ಮಹತ್ತರ ಕಾರ್ಯದಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದು ಕೊನೆಯ ದಿನವಾದ ನ.೨೬ ರಂದು ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದರು.

ಇದೇ ವೇಳೆ ಅಂಧಮಕ್ಕಳ ಶಾಲೆ ಸೇರಿದಂತೆ ಜೀವನಸಂಧ್ಯಾ ಹಾಗೂ ಅನ್ನಪೂರ್ಣ ವೃದ್ದಾಶ್ರಮಗಳಿಗೆ ಮಧ್ಯಾಹ್ನದ ಬೋಜನದ ವ್ಯವಸ್ಥೇ ಕಲ್ಪಿಸಲಾಗಿತ್ತು.

ಈ ವೇಳೆ ಸಂಘದ ನಗರಸಭೆ ಸದಸ್ಯ ಲಕ್ಷ್ಮಣ್, ದಾನಿಗಳಾದ ಬಜಾಜ್ ಶೂರೂಂ ಮಾಲೀಕ ಶ್ರೀಮತಿ ಶ್ವೇತ ಅರುಣ್‌ಕುಮಾರ್, ಜಿಲ್ಲಾ ಆಟೋ ಸಂಘದ ಅಧ್ಯಕ್ಷ ಉದಯಕುಮಾರ್, ಚಾಲಕರಾದ ಮಂಜುನಾಥ್, ಫೈರೋ ಜ್, ಉಮೇಶ್, ಬಸವರಾಜ್, ಯಶ್ವಂತ್, ವೆಂಕಟೇಶ್ ಮತ್ತಿತರರು ಹಾಜರಿದ್ದರು.‌

As a part of Kannada Rajyotsava food distribution by District and City Auto Drivers and Owners Association

About Author

Leave a Reply

Your email address will not be published. Required fields are marked *

You may have missed