September 19, 2024

ಹಮಾಲಿ ಕಾರ್ಮಿಕರ ಸಂಘದಿಂದ ಅಂತರಾಜ್ಯ ಅಧ್ಯಯನ ಪ್ರವಾಸ

0
International Study Tour by Porters Association

International Study Tour by Porters Association

ಚಿಕ್ಕಮಗಳೂರು: ಹಮಾಲಿ ಕಾರ್ಮಿಕರಿಗೆ ಬೇರೆ-ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಿರುವ ಬಗ್ಗೆ ತಿಳಿದುಕೊಳ್ಳಲು ನ. ೨೫ ರಿಂದ ಡಿ. ೫ರ ವರೆಗೆ ಅಧ್ಯಯನ ಪ್ರವಾಸ ಕೈಗೊಂಡಿರುವುದಾಗಿ ಜಿಲ್ಲಾ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ರಹೀಮ್ ಕಾಕ ತಿಳಿಸಿದರು.

ಅವರು ಇಂದು ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ ಜಿಲ್ಲಾ ಹಮಾಲಿ ಕಾರ್ಮಿಕರ ಸಂಘದಿಂದ ಹೊರ ರಾಜ್ಯಗಳಾದ ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ, ಸಿಮ್ಲಾ, ಅರುಣಾಚಲ ಪ್ರದೇಶ್ ಈ ರಾಜ್ಯಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿರುವುದಾಗಿ ಹೇಳಿದರು.

ಕಾರ್ಮಿಕ ವೃತ್ತಿ ಮಾಡುತ್ತಿರುವವರಿಗೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಂಘದ ಪದಾಧಿಕಾರಿಗಳನ್ನೋಳಗೊಂಡ ತಂಡ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಸರ್ಕಾರಗಳು ಹಮಾಲಿ ವೃತ್ತಿ ಮಾಡುವವರಿಗೆ ಯಾವ ರೀತಿ ಸೌಲಭ್ಯ ಕಲ್ಪಿಸಿದ್ದಾರೆ ಅದರ ಅನುಕೂಲದ ಬಗ್ಗೆ ತಿಳಿದುಕೊಳ್ಳಲಾಗುವುದು ಎಂದು ಹೇಳಿದರು.

ಬೇರೆ ರಾಜ್ಯಗಳಲ್ಲಿ ಹಮಾಲಿ ಕಾರ್ಮಿಕರು ಯಾವ ರೀತಿ ಬದುಕು ನಡೆಸುತ್ತಿದ್ದಾರೆ ಹಾಗೂ ಶಿಸ್ತು ಬದ್ಧ ಜೀವನ ನಡೆಸುತ್ತಿರುವ ಕುರಿತು ನಮ್ಮ ಅಧ್ಯಯನ ಪ್ರವಾಸ ಸಂದರ್ಭದಲ್ಲಿ ತಿಳಿಸುಕೊಳ್ಳಲು ಸಹಕಾರಿಯಾಗಿದೆ, ನಂತರ ಅದೇ ಮಾದರಿಯಲ್ಲಿ ಇಲ್ಲಿನ ಸರ್ಕಾರ ಅನುಕೂಲ ಮಾಡುವಂತೆ ಮನವಿ ಸಲ್ಲಿಸಲಾಗುವುದು, ಇದರಿಂದ ಸಂಘಟನೆಗೆ ಪ್ರಯೋಜನವಾಗಲಿದೆ ಎಂದರು.

ನಮ್ಮ ಈ ಅಧ್ಯಯನ ಪ್ರವಾಸದ ಸಂದರ್ಭದಲ್ಲಿ ಹಮಾಲಿ ಕಾರ್ಮಿಕರ ಕೊರತೆಯಾದಾಗ ಲಾರಿ ಮಾಲಿಕರ ಸಂಘ, ಚಾಲಕರು, ವರ್ತಕರು ಸಹಕರಿಸುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಮಂಜು, ಸಹ ಕಾರ್ಯದರ್ಶಿಗಳಾದ ಶಿವಣ್ಣ, ನಾಗಣ್ಣ, ಸಂಘಟನಾ ಕಾರ್ಯದರ್ಶಿ ಸುವರ್ಣ, ಖಜಾಂಚಿ ಗುರುಮೂರ್ತಿ, ಉಪಾಧ್ಯಕ್ಷ ಹಾಲಪ್ಪ, ನಿರ್ದೇಶಕರಾದ ರಫೀಕ್, ಗುಂಡಮಂಜು ಉಪಸ್ಥಿತರಿದ್ದರು.

International Study Tour by Porters Association

About Author

Leave a Reply

Your email address will not be published. Required fields are marked *

You may have missed