September 16, 2024

ವಿಧತೆಯಲ್ಲಿ ಏಕತೆ ಕಂಡುಕೊಳ್ಳಲು ಸಂವಿಧಾನ ಪ್ರಮುಖ ಪಾತ್ರ

0
ಕಾರಾಗೃಹ ಮತ್ತು ಸ್ಮಧಾರಣಾ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ

ಚಿಕ್ಕಮಗಳೂರು: ಜಾತ್ಯಾತೀತ ರಾಷ್ಟ್ರವಾಗಿರುವ ಭಾರತದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಳ್ಳಲು ಸಂವಿಧಾನ ಪ್ರಮುಖ ಪಾತ್ರ ವಹಿಸಿದೆ ಎಂದು ಗೌರವ ಹಿರಿಯ ಸಿವಿಲ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಎ.ಎಸ್.ಸೋಮ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನುನು ಸೇವಾ ಪ್ರಾಧಿಕಾರಿ, ಕಾರಾಗೃಹ ಮತ್ತು ಸ್ಮಧಾರಣಾ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದ ಆಶಯಗಳನ್ನು ಗೌರವಿಸುವುದು ಮತ್ತು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತದ ಸಂವಿಧಾನವು ಪ್ರಪಂಚಕ್ಕೆ ಮಾದರಿಯಾಗಿದ್ದು ಪ್ರಜೆಗಳ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳಿಗೆ ಮಹತ್ವ ಕೊಟ್ಟಿದ್ದು ದೇಶದ ಸಂವಿಧಾನವು ಯಾವುದೇ ಬೇಧ-ಭಾವ ಮಾಡದೇ ಸಮಾನ ನಾಗರೀಕ ಹಕ್ಕುಗಳನ್ನು ನೀಡಿವೆ ಎಂದು ಹೇಳಿದರು.

ಇಂದು ಭಾರತದ ಸಂವಿಧಾನ ದಿನ. ಪ್ರತಿ ವ? ನವೆಂಬರ್ ೨೬ ರಂದು ಭಾರತದ ಸಂವಿಧಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಈ ದಿನವನ್ನು ಆಚರಣೆ ಮಾಡಲಾ ಗುತ್ತದೆ. ಅದರಲ್ಲು ಕಾರಾಗೃಹದಲ್ಲಿ ಆಚರಣೆ ಮಾಡುವುದರ ಮೂಲಕ ಈ ದಿನದ ಪ್ರಾಮುಖ್ಯತೆಯನ್ನು ಕಾರಾ ಬಂಧಿಗಳಿಗೆ ತಿಳಿಸಿಕೊಡಲಾಗುತ್ತಿದೆ ಎಂದರು.

ಸಂವಿಧಾನ ಪೀಠಿಕೆ ಬೋಧಿಸಿ ಮಾತನಾಡಿದ ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ಇಂದು ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನವಾಗಿದೆ. ೧೯೪೯ರ ನವೆಂಬರ್ ೨೬ ರಂದು ಸಂವಿಧಾ ನವನ್ನು ಅಳವಡಿಸಿಕೊಳ್ಳಲಾಯಿತು. ಇದರ ಅಂಗವಾಗಿಯೇ ನಾವು ಸಂವಿಧಾನ ದಿನವನ್ನು ಆಚರಣೆ ಮಾಡು ತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಕಾನೂನು ಅಭಿರಕ್ಷಕ ನಟರಾಜ್, ಸಹಾಯಕ ಕಾನೂನು ಅಭಿರಕ್ಷಕ ಯೋಗೀಶ್ ಹಾಗೂ ಕಾರಾಗೃಹ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Constitution Day celebrations organized in the District Jail

About Author

Leave a Reply

Your email address will not be published. Required fields are marked *