September 16, 2024

ಪಿಂಚಣಿ ವಿಷಯದಲ್ಲಿ ಸತ್ಯ ಮುಚಿಟ್ಟು ಶಿಕ್ಷಕ ಸಮೂಹಕ್ಕೆ ದ್ರೋಹ

0
ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ನಿಯೋಜಿತ ಅಭ್ಯರ್ಥಿ ಕೆ.ಕೆ ಮಂಜುನಾಥ್ ಕುಮಾರ್ ಪತ್ರಿಕಾಗೋಷ್ಠಿ

ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ನಿಯೋಜಿತ ಅಭ್ಯರ್ಥಿ ಕೆ.ಕೆ ಮಂಜುನಾಥ್ ಕುಮಾರ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಹಿಂದೆ ಅಧಿಕಾರ ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ಪಿಂಚಣಿ ವಿ?ಯದಲ್ಲಿ ಸತ್ಯವನ್ನು ಮುಚ್ಚಿಟ್ಟು ಶಿಕ್ಷಕ ಸಮೂಹಕ್ಕೆ ದ್ರೋಹ ಮಾಡಿದ್ದು ಆ ಸತ್ಯವನ್ನು ತಿಳಿಸುವ ಮೂಲಕ ಶಿಕ್ಷಕ ಸಮೂಹದ ಹಿತ ಕಾಪಾಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ನಿಯೋಜಿತ ಅಭ್ಯರ್ಥಿ ಆಗಿರುವ ಕೆ.ಕೆ ಮಂಜುನಾಥ್ ಕುಮಾರ್ ತಿಳಿಸಿದರು.

ಇಂದು ನಗರಕ್ಕಾಗಮಿಸಿದ ಅವರು ಪ್ರಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಿಕ್ಷಕರಿಗೆ ಪಿಂಚಣಿ ವಿ?ಯದಲ್ಲಿ ಬಹಳ? ವ?ದಿಂದ ಸತ್ಯವನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದರು.

ಕೇಂದ್ರದಲ್ಲಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಪಿಂಚಣಿ ನೀತಿಯನ್ನು ಜಾರಿಗೊಳಿಸಲಾಯಿತು ಅದನ್ನು ರಾಜ್ಯಗಳು ಜಾರಿಗೊಳಿಸುವ ಅಗತ್ಯವಿರಲಿಲ್ಲ ಕೇಂದ್ರ ಸರ್ಕಾರದ ನೌಕರರಿಗೆ ಮಾತ್ರ ಅನ್ವಯವಾಗಲಿದ್ದು ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಅಧಿಕಾರದಲ್ಲಿದ್ದಾಗಕ್ಕೆ ಹೊಸ ಪಿಂಚಣಿ ನೀತಿಯನ್ನು ಅನು?ನಕ್ಕೆ ತಂದಿದ್ದಾರೆಂದು ಹೇಳಿದರು.

ಹೊಸ ಪಿಂಚಣಿ ನೀತಿಯ ಪರಿಣಾಮವಾಗಿ ೨೦೦೩ರಿಂದ ೨೦೧೯ರವರೆಗೆ ಶೇಕಡ ೪೦ರ? ಶಿಕ್ಷಕರಿಗೆ ಹೊಸ ಪಿಂಚಣಿ ನೀತಿಯಿಂದ ತೊಂದರೆಯಾಗಿತ್ತು ನಂತರ ಈವರೆಗೆ ಶೇಕಡ ೬೦ರ? ಪ್ರಮಾಣದಲ್ಲಿ ಶಿಕ್ಷಕರಿಗೆ ಹೊಸ ಪಿಂಚಣಿ ನೀತಿಯಿಂದ ಸೌಲಭ್ಯ ವಂಚನೆ ಆಗಲಿದೆ ಮುಂದಿನ ಪೀಳಿಗೆಗೆ ಪಿಂಚಣಿ ಸೌಲಭ್ಯವಿಲ್ಲದೆ ಶಿಕ್ಷಕ ಸಮೂಹ ಬೀದಿ ಪಾಲಾಗುವ ಸಂಭವವಿದೆ ಎಂದು ಹೆಚ್ಚರಿಸಿದರು.

ಈ ಸತ್ಯವನ್ನು ಬಿಜೆಪಿ ಮತ್ತು ಜೆಡಿಎಸ್ ಅಧಿಕಾರದ ಸಂದರ್ಭದಲ್ಲಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದವರು ಸತ್ಯವನ್ನು ಮುಚ್ಚಿಟ್ಟಿದ್ದರು ಈ ಬಾರಿಯ ಚುನಾವಣೆಗೆ ತಾವು ಸ್ಪರ್ಧಾಕಾಂಕ್ಷಿಯಾಗಿದ್ದು ಹಿಂದೆ ಮುಚ್ಚಿಟ್ಟಿದ್ದ ಸತ್ಯವನ್ನು ಶಿಕ್ಷಕರಿಗೆ ಮನವರಿಕೆ ಮಾಡುವ ಮೂಲಕ ಮತಯಾಚನೆ ಮಾಡುವುದಾಗಿ ತಿಳಿಸಿದರು.

ಹೊಸ ಪಿಂಚಣಿ ನೀತಿಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಪದ್ಧತಿಯನ್ನು ಮರು ಜಾರಿಗೆ ತರುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿಯೇ ಪ್ರಕಟಿಸಿದ್ದು ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಳೆ ಪಿಂಚಣಿ ನೀತಿಯನ್ನು ಮರು ಜಾರಿಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಿದರು.

ಈಗಾಗಲೇ ಕುಮಾರನಾಯಕ್ ವರದಿ ಅನು?ನಗೊಳಿಸುವ ಮೂಲಕ ಪದವಿಪೂರ್ವ ಶಿಕ್ಷಕರ ಸಮಸ್ಯೆ ಬಗೆಹರಿಸಲಾಗಿದೆ ಆರನೇ ವೇತನ ಆಯೋಗದ ವರದಿಯನ್ನು ಅನು?ನಕ್ಕೆ ತರುವ ಮೂಲಕ ಶೇಕಡ ೩೦ರ? ವೇತನ ಭತ್ಯೆ ಹೆಚ್ಚಿಸಲಾಗಿದ್ದು ಶಿಕ್ಷಕ ಸಮೂಹದ ಹಿತ ಕಾಯಲು ತಮ್ಮ ಸರ್ಕಾರ ಬದ್ಧವಾಗಿದೆ ಈ ಹಿನ್ನಲೆಯಲ್ಲಿ ಶಿಕ್ಷಕರು ಆಸೆ ಆಮೀ?ಗಳಿಗೆ ಬಲಿಯಾಗದೆ ಕಾಂಗ್ರೆಸ್ ಪಕ್ಷದ ಪರವಾಗಿ ಬೆಂಬಲಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಮೂಲತಹ ಶಿಕ್ಷಕರಾಗಿದ್ದ ತಾವು ಹಿಂದೆ ಎರಡು ಬಾರಿ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿ ಬೇರೆ ಸರ್ಕಾರ ಅಧಿಕಾರದಲ್ಲಿದ್ದ ಕಾರಣ ಅತ್ಯಂತ ಕಡಿಮೆ ಮತಗಳಿಂದ ಪರಾಭವಗೊಂಡಿದ್ದು ಈ ಬಾರಿ ಶಿಕ್ಷಕರು ಕೈಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ ನಂಜೇಶ್ ಬೆಣ್ಣೂರು ಅವರು ಸ್ಪರ್ಧಾಕಾಂಕ್ಷಿ ಎಂದು ಹೇಳಿಕೊಂಡು ಮತದಾರರ ನೋಂದಣಿ ಮಾಡಿದ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಸಿದ ಅವರು ಯಾವುದೇ ಸ್ಪರ್ಧಾಕಾಂಕ್ಷಿಗಳು ನೋಂದಾವಣೆ ಮಾಡಿದ ಪಟ್ಟಿಯನ್ನು ಚುನಾವಣಾ ಆಯೋಗ ಪರಿಗಣಿಸದೆ ತಿರಸ್ಕರಿಸಿದೆ ಆ ರೀತಿ ಮಾಡಿದ ಪ್ರಯತ್ನ ವ್ಯರ್ಥವಾಗಿದೆ ಚುನಾವಣಾ ಆಯೋಗ ಸಿದ್ದಪಡಿಸಿರುವ ಪಟ್ಟಿ ಆಧಾರದಲ್ಲಿ ಚುನಾವಣೆ ನಡೆಯಲಿದೆ ಎಂದು ಸ್ಪ?ಪಡಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆ.ಪಿ.ಸಿ.ಸಿ ವಕ್ತಾರ ಲಕ್ಷ್ಮಣ ಮಾತನಾಡಿ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಆಯ್ಕೆಯಾಗಿರುವ ವಿಧಾನ ಪರಿ?ತ್ ಸದಸ್ಯ ಎಸ್.ಎಲ್.ಬೋಜೇಗೌಡರು ಶಿಕ್ಷಕರಿಗಾಗಿ ಏನನ್ನು ಮಾಡಿಲ್ಲ ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿಗೆ ಹತ್ತಿರವಾಗಿದ್ದು ಪ್ರಭಾವ ವ್ಯಕ್ತಿ ಆಗಿದ್ದರು ಶಿಕ್ಷಕರ ಸಮಸ್ಯೆ ಪರಿಹರಿಸುವ ಯಾವುದೇ ಪ್ರಯತ್ನ ಮಾಡದೇ ದ್ರೋಹವೆಸಗಿದ್ದಾರೆ ಈ ಬಾರಿ ಮತ್ತೆ ಅವರನ್ನು ಆಯ್ಕೆ ಮಾಡಿದರೆ ಶಿಕ್ಷಕರು ಮತ್ತೊಮ್ಮೆ ಮೋಸ ಹೋಗುತ್ತಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎಚ್.ಪಿ ಮಂಜೇಗೌಡ, ಡಿ.ಸಿ ಪುಟ್ಟೇಗೌಡ, ಜಿ.ಬಿ ಪವನ್, ಭರತೇಶ್, ಮಹಡಿ ಮನೆ ಸತೀಶ್ ಉಪಸ್ಥಿತರಿದ್ದರು.

Betrayal to teachers group by concealing the truth in the matter of pension

About Author

Leave a Reply

Your email address will not be published. Required fields are marked *