September 16, 2024

ಶಾಸಕ ಬಾಲಕೃಷ್ಣ ಸೈನಿಕರಿಗೆ ಅವಮಾನಿಸಿರುವುದನ್ನು ಖಂಡಿಸಿ ಎಸ್ಪಿಗೆ ದೂರು

0
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಸಿ ಕಲ್ಮರುಪ್ಪ ಪತ್ರಿಕಾಗೋಷ್ಠಿ

ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಸಿ ಕಲ್ಮರುಪ್ಪ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಪಕ್ಷಾಂತರ ಶಾಸಕ ಬಾಲಕೃಷ್ಣ ಪ್ರಧಾನಿ ನರೇಂದ್ರಮೋದಿಯವರಿಗೆ ಟೀಕಿಸುವ ಹೇಳಿಕೆ ಮೂಲಕ ದೇಶದ ರಕ್ಷಕರಾದ ಸೇನಾನಿಗಳಿಗೆ ಅವಮಾನಿಸಿರುವುದನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಸಿ ಕಲ್ಮರುಪ್ಪ ಖಂಡಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಸೈನಿಕರಿಗೆ ಅವಮಾನ ಮಾಡಿರುವುದನ್ನು ಖಂಡಿಸಿ ಇಂದು ಜಿಲ್ಲಾ ಪೊಲೀಸ್ ವರಿ?ಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದರು.

ಕಾಂಗ್ರೆಸ್‌ನ ಆಡಳಿತದಲ್ಲಿ ದೇಶದ ಇಬ್ಬರು ಪ್ರಧಾನಮಂತ್ರಿಗಳಾದ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರುಗಳನ್ನು ಕಳೆದುಕೊಳ್ಳಬೇಕಾಯಿತು. ಅವರ ಸಾವನ್ನೇ ಮುಂದಿಟ್ಟುಕೊಂಡು ಎರಡು ಬಾರಿ ಅಧಿಕಾರವನ್ನು ಪಡೆದುಕೊಂಡು ದೇಶವನ್ನು ಹವ್ಯಾಹತವಾಗಿ ಲೂಟಿ ಮಾಡಿದರು ಎಂದು ಆರೋಪಿಸಿದರು.

ಇಂದಿರಾಗಾಂಧಿಯವರು ಸೋಲುವ ಭೀತಿಯಿಂದಲೇ ತುರ್ತು ಪರಿಸ್ಥಿತಿಯನ್ನು ಹೇರಿದ್ದು, ಎರಡು ವ?ಗಳ ಕಾಲ ದೇಶದ ಜನರನ್ನು ನಲುಗಿಸಿದ ಸರ್ವಾಧಿಕಾರಿ ಧೋರಣೆಯ ಹಿನ್ನೆಲೆ ಹೊಂದಿರುವ ಪಕ್ಷ ಕಾಂಗ್ರೆಸ್. ಅಂತಹ ಪಕ್ಷದ ಶಾಸಕ ಬಾಲಕೃ? ಅವರು ಬಿಜೆಪಿ ಪಕ್ಷವನ್ನು ಬ್ರಿಟೀಷರಿಗೆ ಹೋಲಿಸಿರುವುದು ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಟೀಕಿಸಿದರು.

ಬ್ರಿಟಿಷ್ ಆಡಳಿತದ ಸೇಫ್ಟಿ ವಾಲ್ವ್‌ಆಗಿ ರೂಪುಗೊಂಡ ಕಾಂಗ್ರೆಸ್‌ನ ಹಿಂದಿನ ಚಾಳಿ ಶಾಸಕ ಬಾಲಕೃ?ರವರಿಗೂ ಹರಿದು ಬರುತ್ತಿದೆ. ದೇಶದ ಸುಭದ್ರತೆಗಾಗಿ ೨೦೧೪ ರ ಮೊದಲು ಇದ್ದ ರಕ್ಷಣಾ ಬಜೆಟ್‌ಕಿಂತ ೨೩ ಪಟ್ಟು ಹೆಚ್ಚು ಮೊತ್ತವನ್ನು ಈಗಿನ ಬಜೆಟ್‌ನಲ್ಲಿ ಸೇರಿಸಿರುವುದು ಈ ದೇಶದ ರಕ್ಷಣೆಗೆ ಮತ್ತು ದೇಶದ ಯೋಧರಿಗೆ ಆದ್ಯತೆ ಮೇರೆಗೆ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವಮಾನ ಮಾಡಿದ್ದಾರೆಂದು ಲೇವಡಿ ಮಾಡಿದರು.‌

ಪ್ರಧಾನ ಮಂತ್ರಿಮೋದಿಯವರ ಮುಂದೆ ಭಾರತೀಯ ಜನತಾ ಪಕ್ಷದ ಪರವಾಗಿ ೨೦೨೪ರ ಚುನಾವಣೆಗೆ ನೂರಾರು ಅಜೆಂಡಾಗಳು ಜನತೆಯ ಪರವಾಗಿ ಇವೆ. ಆದರೆ ಐಎನ್‌ಡಿಐಎ ಇದರ ಮೋದಿಯನ್ನು ಸೋಲಿಸುವುದು ಬಿಟ್ಟರೆ ದೇಶದ ಇನ್ನಾವುದೇ ಅಭಿವೃದ್ಧಿ ಅಜೆಂಡಾಗಳು ಇಲ್ಲ ಎಂದು ಹೇಳಿದರು.

೨೦೧೪ರ ಹಿಂದೆ ಈ ದೇಶದ ಸೈನಿಕರ ಮೇಲೆ ಶತ್ರುಗಳು ದಾಳಿ ನಡೆಸುತ್ತಿದ್ದರು ದೆಹಲಿಯ ಕಾಂಗ್ರೆಸ್ ನೇತಾರರ ಅಣತಿಯರಿಗೆ ಇಲ್ಲದೆ ಯಾವುದೇ ಪ್ರತಿರೋಧವನ್ನು ಒಡ್ಡುವಂತಿರಲಿಲ್ಲ. ಆದರೆ ನಮ್ಮ ಪ್ರಧಾನ ಮಂತ್ರಿ ಮೋದಿಯವರ ನೇತೃತ್ವದಲ್ಲಿ ಇಂದು ಸೈನಿಕರಿಗೆ ವಿವೇಚನಾ ಅಧಿಕಾರವನ್ನು ನೀಡಿ ರಕ್ಷಣಾ ವಲಯದಲ್ಲಿಯೇ ಒಂದು ದಿಟ್ಟ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇಂತಹ ಸೈನಿಕರ ಸಾವನ್ನೇ ಮುಂದಿಟ್ಟುಕೊಂಡು ರಾಜಕೀಯವನ್ನು ಮಾಡುತ್ತಿರುವ ಕಾಂಗ್ರೆಸ್ ಧೋರಣೆ ಒಂದು ನಾಚಿಕೆಗೇಡಿನ ಸಂಗತಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಟಿ.ರಾಜಶೇಖರ್, ಉಪಾಧ್ಯಕ್ಷರುಗಳಾದ ಸಿ.ಆರ್ ಪ್ರೇಮ್‌ಕುಮಾರ್, ನರೇಂದ್ರ ಹಾಗೂ ಮುಖಂಡ ಹೆಚ್.ಎಸ್ ಪುಟ್ಟಸ್ವಾಮಿ ಉಪಸ್ಥಿತರಿದ್ದರು.

District BJP president HC Kalmaruppa press conference

About Author

Leave a Reply

Your email address will not be published. Required fields are marked *