September 16, 2024

ಡಿ.3 ಕುವೆಂಪು ಕಲಾಮಂದಿರದಲ್ಲಿ ’ಕರಿನೀರವೀರ’ ನಾಟಕ ಪ್ರದರ್ಶನ

0
ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಪತ್ರಿಕಾಗೋಷ್ಠಿ

ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ಸ್ವಾತಂತ್ರ್ಯ ಸೇನಾನಿ ವಿನಾಯಕ ದಾಮೋದರ ಸಾವರ್ಕರ್ ಜೀವನ ಹೋರಾಟ ಮತ್ತು ಬದುಕು ಆಧಾರಿತ ಕರಿ ನೀರ ವೀರ ನಾಟಕ ಪ್ರದರ್ಶನ ನಗರದ ಕುವೆಂಪು ಕಲಾಮಂದಿರದಲ್ಲಿ ಡಿ.೩ ರಂದು ಆಯೋಜಿಸಲಾಗಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಮೈಸೂರಿನ ಸಾವರ್ಕರ್ ಪ್ರತಿ?ನ, ಭಾರತೀ ಜಾಗೃತ ಪ್ರತಿ?ನ, ನಾದ ಚೈತನ್ಯ ಮತ್ತು ಸುಗಮ ಸಂಗೀತ ಗಂಗಾ ಸಹಯೋಗದಲ್ಲಿ ಡಿ.೩ ರಂದು ಭಾನುವಾರ ಸಂಜೆ ೬ ಗಂಟೆಗೆ ನಾಟಕ ಪ್ರದರ್ಶನ ಕಾಣಲಿದ್ದು, ಜಿಲ್ಲೆಯ ದೇಶಭಕ್ತರು ಇತಿಹಾಸ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಎಂದು ಮಾಹಿತಿ ನೀಡಿದರು.

ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚನೆ ಮತ್ತು ನಿರ್ದೇಶನದಲ್ಲಿ ದೇಶಭಕ್ತಿಯ ಸಾಕ್ಷಿ ಪ್ರಜ್ಞೆ ವೀರ ಸಾವರ್ಕರ್ ಹೋರಾಟ ಬದುಕಿನ ಕಥಾನಕ ಇದಾಗಿದ್ದು, ನುರಿತ ಕಲಾವಿದರು ಮೈಸೂರಿನ ಸಾವರ್ಕರ್ ಪ್ರತಿ?ನದ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಕಡೆಗಳಲ್ಲಿ ಪ್ರದರ್ಶನ ಕಂಡಿರುವ ಕರಿನೀರವೀರ ನಾಟಕ ಜನ-ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದರು.

ದೇಶಭಕ್ತ ಸಾವರ್ಕರ್ ಅವರು ಜೈಲುವಾಸದ ವೇಳೆ ಅನುಭವಿಸಿದ ದೈಹಿಕ ಮತ್ತು ಮಾನಸಿಕ ಚಿತ್ರಹಿಂಸೆ ಸ್ವಾತಂತ್ರ್ಯ ಭಾರತದಲ್ಲಿಯೂ ಅನುಭವಿಸಿದ ಕ?-ನ?ಗಳು ಸಮಾನತೆಗಾಗಿ ನಡೆಸಿದ ಹೋರಾಟಗಳನ್ನು ಕಥಾನಕ ಒಳಗೊಂಡಿದೆ ಎಂದು ಹೇಳಿದರು.

ದುರುದ್ದೇಶ ಪೂರಿತ ಹೇಳಿಕೆ ನೀಡುವವರು ಕರಿನೀರವೀರ ನಾಟಕ ಪ್ರದರ್ಶನ ವೀಕ್ಷಣೆ ಮಾಡುವ ಮೂಲಕ ನೈಜತೆಯನ್ನು ಅರ್ಥಮಾಡಿಕೊಳ್ಳಬೇಕು. ಜೊತೆಗೆ ಟೀಕೆ-ಟಿಪ್ಪಣಿಗಳು ಇದ್ದರೂ ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಇದೆ ಪ್ರತಿಯೊಬ್ಬ ದೇಶಭಕ್ತ ಮತ್ತು ವಿದ್ಯಾರ್ಥಿಗಳು ನೋಡಲೇಬೇಕಾದ ನಾಟಕ ಪ್ರದರ್ಶನ ಇದಾಗಿದೆ ಎಂದು ತಿಳಿಸಿದರು.

ಕಲಾವಿದರು ಮತ್ತು ಖರ್ಚು ವೆಚ್ಚಗಳಿಗಾಗಿ ಪ್ರದರ್ಶನಕ್ಕೆ ೧೦೦ರೂಗಳ ಟಿಕೆಟ್ ನಿಗದಿಸಲಾಗಿದ್ದು, ನಗರದ ಎಂ ಜಿ ರಸ್ತೆಯ ಶೃಂಗಾರ ಮೆಡಿಕಲ್ಸ್, ಬಸವನಹಳ್ಳಿ ಮುಖ್ಯ ರಸ್ತೆಯ ಕಾಮತ್ ಕಾಫಿ ವರ್ಕ್ಸ್, ವಿಜಯಪುರ ಮುಖ್ಯ ರಸ್ತೆಯ ವಿಜಯ ಭಾರತಿ ಫ್ರೂಟ್ಸ್ ಮತ್ತು ವೆಜಿಟೇಬಲ್ಸ್ ಇಲ್ಲಿ ಪಡೆದುಕೊಳ್ಳಬಹುದು. ಜೊತೆಗೆ ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಟಿಕೆಟ್ ಪಡೆದುಕೊಳ್ಳಬಹುದಾಗಿದೆ ಸಂಪರ್ಕ ಸಂಖ್ಯೆಗಳು ೯೪೪೯೪೪೫೨೩೮, ೯೪೮೩೪೭೩೩೧೧, ೯೮೪೪೩೬೯೫೬೯.

ನಾದ ಚೈತನ್ಯ ಮುಖ್ಯಸ್ಥ ಸಿ.ಆರ್ ಪ್ರೇಮ್‌ಕುಮಾರ್ ಮಾತನಾಡಿ ಮೈಸೂರಿನ ಸಾವರ್ಕರ್ ಪ್ರತಿ?ನದ ೪೦ ಕಲಾವಿದರು ೩ ತಿಂಗಳ ಕಾಲ ತಾಲೀಮು ನಡೆಸಿದ್ದು, ನಗರದಲ್ಲಿ ಅಂದು ನಡೆಯುತ್ತಿರುವುದು ೧೮ನೇ ಪ್ರದರ್ಶನ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್.ಎಸ್ ಪುಟ್ಟಸ್ವಾಮಿ, ಚಂದ್ರನಾರಾಯಣ ಭಟ್, ಪ್ರದೀಪ್ ಇದ್ದರು.

Kari Neera Veera drama performance

About Author

Leave a Reply

Your email address will not be published. Required fields are marked *