September 16, 2024

ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ನಿವೇಶನ ನೀಡಲು ಶಾಸಕ ಹೆಚ್.ಡಿ ತಮ್ಮಯ್ಯ ಮನವಿ

0
ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ನಿವೇಶನ ನೀಡಲು ಶಾಸಕರಿಗೆ ಮನವಿ

ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ನಿವೇಶನ ನೀಡಲು ಶಾಸಕರಿಗೆ ಮನವಿ

ಚಿಕ್ಕಮಗಳೂರು:  ನಗರದ ಬೋಳರಾಮೇಶ್ವರ ದೇವಸ್ಥಾನ ಆವರಣದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಿಸಲು ಅನುಮತಿ ನೀಡುವಂತೆ ಶಾಸಕ ಹೆಚ್.ಡಿ ತಮ್ಮಯ್ಯನವರಿಗೆ ಅಯ್ಯಪ್ಪಸ್ವ್ವಾಮಿ ಪೂಜಾ ಸಮಿತಿ ಬುಧವಾರ ಮನವಿ ನೀಡಿದರು

ಮನವಿ ನೀಡಿ ಮಾತನಾಡಿದ ಸಮಿತಿ ಅಧ್ಯಕ್ಷ ನಾರಾಯಣಗೌಡ ನಗರದಲ್ಲಿ ಅಯ್ಯಪ್ಪ ಸ್ವಾಮಿ ಪೂಜಾಸಮಿತಿ ಅಸ್ತಿತ್ವಕ್ಕೆ ಬಂದು ೫೦ ವ?ಗಳು ಕಳೆದಿದ್ದರೂ ದೇವಸ್ಥಾನ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಈ ಸಂಬಂಧ ಹಿಂದಿನ ಶಾಸಕರು ಹಾಗೂ ಹಿಂದಿನ ಮುಜರಾಯಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದು ಯಾವುದೇ ಪ್ರಯೋಜನ ವಾಗಿಲ್ಲ ಎಂದು ದೂರಿದ್ದಾರೆ.

ಈ ಹಿನ್ನಲೆಯಲ್ಲಿ ತಾವುಗಳು ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಲು ಅನುಮತಿ ನೀಡಬೇಕೆಂದು ಮನವಿ ನೀಡಿ ಆಗ್ರಹಿಸಿದ್ದಾರೆ.

೩೦x೩೦ ಅಳತೆಯ ನಿವೇಶನವನ್ನು ಇದೇ ಸ್ಥಳದಲ್ಲಿ ಕೊಡುವಂತೆ ಮನವಿ ಮಾಡಿದರು. ಸಿ.ಎ ನಿವೇಶನ ಹೋಂದಿದ್ದು, ಅದನ್ನಾದರೂ ಮಂಜೂರು ಮಾಡುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಹೆಚ್.ಡಿ ತಮ್ಮಯ್ಯ ಹಿಂದಿನಿಂದಲೂ ಅಯ್ಯಪ್ಪ ಸ್ವಾಮಿ ಪೂಜಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿದ್ದು ಮುಂದೆಯೂ ಶಾಸಕನಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈಗಾಗಲೇ ಅಯ್ಯಪ್ಪನಗರದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಾಣವಾಗಿದೆ. ಬೋಳರಾಮೇಶ್ವರ ದೇವಾಲಯ ಮುಜರಾಯಿ ದೇವಸ್ಥಾನವಾಗಿರುವುದರಿಂದ ತಾಂತ್ರಿಕ ತೊಡಕುಗಳಿವೆ. ಗಣಪತಿ ಸಮುದಾಯ ಭವನ ನಿರ್ಮಾಣವಾಗಿದೆ ಆದರೆ ಅದಕ್ಕೆ ದಾಖಲೆಗಳಿಲ್ಲ. ಅದೇ ಮಾದರಿಯಲ್ಲಿ ಮಾಡಲು ಕಾನೂನಿನಲ್ಲಿ ಅವಕಾಶವಿದ್ದರೆ ಪ್ರಯತ್ನಿಸುತ್ತೇನೆ ಆದರೆ ಅಧಿಕೃತ ದಾಖಲೆ ಇಲ್ಲ, ಪ್ರತಿ ವ?ದಂತೆ ಮೂರ್ತಿ ಸ್ಥಾಪನೆ ಮಾಡಿ ಉತ್ಸವ, ಪೂಜೆ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಸ್ಪ?ಪಡಿಸಿದರು.

ದೇವರ ಬಗ್ಗೆ ಜನರಲ್ಲಿ ಅಪಾರವಾದ ನಂಬಿಕೆ ಭಕ್ತಿ ಇದೆ. ೪೫ ದಿನಗಳ ಕಾಲ ಮಾಲೆ ಧರಿಸಿ ಅಯ್ಯಪ್ಪಸ್ವಾಮಿ ವೃತ ಮಾಡಿ ಶಬರಿಮಲೆಗೆ ಹೋಗಿ ವೈಯಕ್ತಿಕ ಸಂಕ?ಗಳ ನಿವಾರಣೆಗೆ ದರ್ಶನ ಮಾಡಿ ಮನಸ್ಸಿನ ನೆಮ್ಮದಿ ಕಾಣುತ್ತೇವೆ ಅಯ್ಯಪ್ಪಸ್ವಾಮಿ ಒಳ್ಳೆಯ ಮಳೆ-ಬೆಳೆಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ ಎಂದರು.

ಅಯ್ಯಪ್ಪ ಭಕ್ತರಿಗೆ ಅನುಕೂಲವಾಗುವಂತೆ ಸ್ನಾನಗೃಹ, ಶೌಚಾಲಯ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಸಿ.ಪಿ.ರವಿಶಂಕರ್, ಖಜಾಂಚಿ ಜೀವನ್.ಕೆ.ಶೆಟ್ಟಿ, ಉಪಾಧ್ಯಕ್ಷರುಗಳಾದ ಸಾರಥಿಮಂಜುನಾಥ್, ಟಿ.ವೆಂಕಟೇಶ್, ಅಣ್ಣಯ್ಯ, ಮಹಾದೇವ್, ಕಾರ್ಯದರ್ಶಿಗಳಾದ ಬಿ.ಉಮೇಶ್, ಲಕ್ಷ್ಮೀಕಾಂತ್, ನಟರಾಜ್‌ಕೋಟೆ, ದಿಲೀಪ್‌ರಾಜ್, ಹೆಚ್.ಎಸ್.ಸತೀಶ್, ಸಹ ಕಾರ್ಯದರ್ಶಿಗಳಾದ ಡಿ.ಚನ್ನಕೇಶವ, ಮನೋಹರ್, ಜವರಪ್ಪ, ಆರ್.ಯಶ್ವಂತ್ ರಾವ್, ಮುಕೇಶ್‌ಸಿಂಗ್, ಎಸ್.ಡಿ.ಎಂ ಮಂಜು, ರಾಜುಶೆಟ್ಟಿ, ಚೇತನ್‌ಬಳೆ, ರಂಗನಾಥ್, ಮಹಾದೇವ, ಕಿರಣ್‌ಬಂಡೇಗಾರ್ ಉಪಸ್ಥಿತರಿದ್ದರು

MLA H. D. Thammaiah’s request to provide land for the construction of Ayyappa Swamy temple

About Author

Leave a Reply

Your email address will not be published. Required fields are marked *