September 16, 2024

ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ನಗರಸಭೆ ವಿಫಲ

0
ನಗರಸಭೆ ಜೆಡಿಎಸ್ ಸದಸ್ಯ ಎ.ಸಿ ಕುಮಾರ್‌ಗೌಡ ಪತ್ರಿಕಾಗೋಷ್ಠಿ

ನಗರಸಭೆ ಜೆಡಿಎಸ್ ಸದಸ್ಯ ಎ.ಸಿ ಕುಮಾರ್‌ಗೌಡ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸುಮಾರು ೧೨೨ ಕೋಟಿ ರೂ ವೆಚ್ಚದ ಅಮೃತ್ ಯೋಜನೆ ನಗರದ ೩೫ ವಾರ್ಡ್‌ಗಳಲ್ಲಿಯೂ ಅಪೂರ್ಣವಾಗಿದ್ದರೂ ನಗರಸಭೆ ಅಧ್ಯಕ್ಷರು, ಪೌರಾಯುಕ್ತರು ಗುತ್ತಿಗೆದಾರರಿಂದ ನಗರಸಭೆಗೆ ವರ್ಗಾವಣೆ ಮಾಡಿರುವುದೇ ಕುಡಿಯುವ ನೀರಿನ ಅಭಾವ ತಲೆದೋರಲು ಕಾರಣ ಎಂದು ನಗರಸಭೆ ಜೆಡಿಎಸ್ ಸದಸ್ಯ ಎ.ಸಿ ಕುಮಾರ್‌ಗೌಡ ಆರೋಪಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ ನಗರ ಸಭೆ ಸದಸ್ಯರುಗಳ ವಿರೋಧದ ನಡುವೆಯೂ ಗುಪ್ತವಾಗಿ ಅಮೃತ್‌ಯೋಜನೆ ಗುತ್ತಿಗೆದಾರರಿಂದ ಕಾಮಗಾರಿ ಪೂರ್ಣಗೊಳ್ಳುವ ಮುನ್ನ ನಗರ ಸಭೆಗೆ ಹಸ್ತಾಂತರಿಸಿಕೊಂಡಿರುವುದು ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಲು ಕಾರಣ ಎಂದು ದೂರಿದರು.

ನಗರದಲ್ಲಿ ಕಳೆದ ಆರು ದಿನಗಳಿಂದ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಜನರು ನೀರಿಗಾಗಿ ತತ್ತರಿಸುವ ಪರಿಸ್ಥಿತಿ ಉದ್ಭವಿಸಿದ್ದು, ಈ ವಿಚಾರವಾಗಿ ಪದೇ ಪದೇ ನಗರಕ್ಕೆ ನೀರಿನ ಸಮಸ್ಯೆ ಉಂಟಾಗುತ್ತಿದ್ದ ವಿಚಾರವನ್ನು ಅರಿತು ದಿನಾಂಕ ೩೧-೧೨-೨೦೨೨ ರಂದು ನಗರಕ್ಕೆ ನೀರು ಸರಬರಾಜು ಮಾಡುವ ಮುಗಳವಳ್ಳಿ ಮತ್ತು ಬೇಲೂರು ಪಂಪ್‌ಹೌಸ್‌ಗಳಿಗೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಆಗುತ್ತಿದ್ದ ಲೋಪದೋ?ಗಳನ್ನು ನಗರದ ಜನತೆಯ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಎಚ್ಚೆತ್ತುಕೊಂಡಿದ್ದರೆ ಈ ದಿನ ನೀರಿನ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ಹೇಳಿದರು.

ಟೆಂಡರ್ ಕರೆಯದೆ ೨೪ ಲಕ್ಷ ರೂ ಬಿಲ್ ಮಾಡಲಾಗಿದೆ. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು ನಗರಸಭೆಗೆ ಅಮೃತ್‌ಯೋಜನೆ ಹಸ್ತಾಂತರಿಸಿಕೊಂಡಿರುವುದರಿಂದ ಪಂಪ್‌ಹೌಸ್‌ನ ನಿರ್ವಹಣೆ ನಗರಸಭೆಯೇ ವಹಿಸಿಕೊಳ್ಳಬೇಕು. ಆದರೆ ನಗರಸಭೆಯ ಅಧಿಕಾರಿಗಳಿಗೆ ಇದರ ಪಂಪ್‌ಗಳ ನಿರ್ವಹಣೆಯ ಕುರಿತು ಯಾವುದೇ ಮಾಹಿತಿ ಇಲ್ಲದಿರುವುದು ದುರಂತ, ಪೂರ್ಣವಾಗದ ಅಮೃತ್‌ಯೋಜನೆಯನ್ನು ಹಸ್ತಾಂತರಿಸಿಕೊಳ್ಳದಿದ್ದರೆ ಪಂಪ್‌ಹೌಸ್ ನಿರ್ವಹಣೆ ಅಮೃತ್‌ಯೋಜನೆಯ ಗುತ್ತಿಗೆದಾರರ ಮೇಲೆ ಇರುತ್ತಿತ್ತು ಎಂದು ಟೀಕಿಸಿದರು.

ಪಂಪ್‌ಹೌಸ್ ನಿರ್ವಹಣೆ ಕುರಿತು ಕಳೆದ ವ?ವೇ ನೀರು ಸರಬರಾಜು ಮತ್ತು ಒಳಚರಂಡಿ ನಿಗಮ ಮಂಡಳಿಗೆ ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿ ಮಲ್ಲೇಶ್‌ನಾಯಕ್ ಪ್ರತಿನಿತ್ಯ ಪಂಪ್‌ಹೌಸ್‌ಗೆ ಭೇಟಿ ನೀಡುತ್ತಿರುವುದು ಸರ್ಕಾರಿ ವಾಹನದ ದುರುಪಯೋಗಪಡಿಸಿಕೊಂಡಿರುವುದರೊಂದಿಗೆ ನಗರಕ್ಕೆ ನೀರು ಸರಬರಾಜಿನ ಅಡಚಣೆಗೆ ನೇರವಾಗಿ ಕಾರಣಕರ್ತರಾಗಿದ್ದಾರೆ ಎಂದರು.

ಪದೇ ಪದೇ ನಗರಸಭೆ ಅಧ್ಯಕ್ಷರಿಂದ ಸರ್ಕಾರಿ ವಾಹನ ದುರ್ಬಳಕೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದರು ಜಿಲ್ಲಾಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರು ನಗರಸಭೆ ವಾಹನ ದುರ್ಬಳಕೆ ಮಾಡಿರುವ ಬಗ್ಗೆ ದಾಖಲೆ ಸಹಿತವಾಗಿ ಹಲವರು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.

ಆದರೂ ಸಹ ನಗರಸಭಾಧ್ಯಕ್ಷರು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಆನೆ ನಡೆದಿದ್ದೇ ದಾರಿ ಎಂಬಂತೆ ಕಳೆದ ಕೆಲ ದಿನಗಳ ಹಿಂದೆ ಶಿವಮೊಗ್ಗದ ವಿನೋಬಾ ನಗರದಲ್ಲಿರುವ ತಮಿಳ್‌ತಾಯ್ ಭವನ್‌ಗೆ ಮದುವೆ ಸಮಾರಂಭಕ್ಕೆ ತಮ್ಮ ಕುಟುಂಬದೊಂದಿಗೆ ತೆರಳಲು ನಗರಸಭೆ ವಾಹನವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಅಮೃತೇಶ್, ಸದಸ್ಯ ಗೋಪಿ, ಶಿವಕುಮಾರ್ ಇದ್ದರು.

Municipality fails to supply adequate drinking water

About Author

Leave a Reply

Your email address will not be published. Required fields are marked *