September 16, 2024

ಪೊಲೀಸರ ಬಂದನಕ್ಕೆ ಆಗ್ರಹಿಸಿ ವಕೀಲ ಪತ್ರಿಭಟನೆ

0
ಪೊಲೀಸರ ಬಂದನಕ್ಕೆ ಆಗ್ರಹಿಸಿ ವಕೀಲ ಪತ್ರಿಭಟನೆ

ಪೊಲೀಸರ ಬಂದನಕ್ಕೆ ಆಗ್ರಹಿಸಿ ವಕೀಲ ಪತ್ರಿಭಟನೆ

ಚಿಕ್ಕಮಗಳೂರು: ನಗರದಲ್ಲಿ ವಕೀಲ ಪ್ರೀತಂರನ್ನು ಥಳಿಸಿದ ಪೊಲೀಸರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಶುಕ್ರವಾರ ವಕೀಲರುಗಳು ಕಲಾಪದಿಂದ ಹೊರಗುಳಿದು ಪ್ರತಿಭಟನಾ ಧರಣಿ ನಡೆಸಿದರು.

ನಗರದ ನ್ಯಾಯಾಲಯದ ಆವರಣದಿಂದ ಮೆರವಣಿಗೆ ಹೊರಟ ನ್ಯಾಯವಾದಿಗಳು ಐಜಿ ರಸ್ತೆಯಲ್ಲಿ ಸಾಗಿ ಹನುಮಂತಪ್ಪ ವೃತ್ತ ಬಳಸಿ,ಮಹಾತ್ಮಗಾಂಧಿರಸ್ತೆಯ ಮೂಲಕ ತೆರಳಿ ಆಜಾದ್ ವೃತ್ತ ತಲುಪಿದರು. ಅಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕೆಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳನ್ನು ಆಗ್ರಹಿಸಿದರು.

ಬೆಂಗಳೂರು, ಹಾಸನ, ಮೂಡಿಗೆರೆ, ಕಡೂರು ಮತ್ತು ತರೀಕೆರೆ ತಾಲೂಕುಗಳಿಂದ ನಗರಕ್ಕೆ ಆಗಮಿಸಿದ ವಕೀಲರುಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ವಕೀಲರುಗಳಿಗೆ ಬೆಂಬಲ ವ್ಯಕ್ತಪಡಿಸಿದರು. ನಿಜಕ್ಕೂ ಇದು ಒಳ್ಳೆಯ ಬೆಳವಣಿಗೆಯಲ್ಲ ವಕೀಲರ ಮೇಲೆ ಹೀಗೆ ಆದರೆ ಸಾಮಾನ್ಯ ಜನರ ಗತಿಏನು ಎಂದು ಪ್ರಶ್ನಿಸಿದರು. ವಕೀಲರ ಮೇಲಿನ ಹಲ್ಲೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದಿಲ್ಲವೆಂದು ಕೆಲವು ಹೇಳಿದರು.

ಕ್ಷುಲ್ಲಕ ಕಾರಣಕ್ಕೆ ಯುವ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸದಿರುವುದನ್ನು ಪ್ರಶ್ನಿಸಿ ಹೈ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿ ನ್ಯಾಯ ಕೋರಿದ್ದೇವೆ. ಈ ಕಾರಣಕ್ಕೆ ಕೂಡಲೇ ಜಾಗೃತರಾಗಿ ಆರೋಪಿತ ಸಿಬ್ಬಂಧಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಆಗ್ರಹಿಸಿದರು.

ಹೆಲ್ಮೆಟ್ ಧರಿಸದ ವಿಚಾರಕ್ಕೆ ವಕೀಲ ಪ್ರೀತಂ ಅವರನ್ನು ಠಾಣೆಗೆ ಕರೆದೊಯ್ದು ಮನಸೋಇಚ್ಛೆ ಹಲ್ಲೆ ನಡೆಸಿ ಅಮಾನತುಗೊಂಡಿರುವ ನಗರ ಠಾಣೆ ಪಿಎಸ್‌ಐ ರಮೇಶ್ ಪೂಜಾರಿ ಸೇರಿ ೬ ಮಂದಿಯನ್ನು ಬಂಧಿಸಬೇಕೆಂದ ಆಗ್ರಹಿಸಿ ಶುಕ್ರವಾರ ಬೆಳಗ್ಗೆ ನಗರದಲ್ಲಿ ವಕೀಲರು ನಡೆಸಿದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

ನ್ಯಾಯ ಪರವಾಗಿ ನಿಲ್ಲಬೇಕಾದ ಪೊಲೀಸರು ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಅವಮಾನಕಾರಿ ಸಂಗತಿಯಾಗಿದೆ. ಇದೊಂದು ವಿಡಂಬನೆಯಾಗಿದೆ. ದಿನ ನಿತ್ಯ ಕಕ್ಷಿದಾರರ ಪರವಾಗಿ, ನ್ಯಾಯಕ್ಕಾಗಿ ನಾವು ವಕೀಲರು ಹೋರಾಡುತ್ತಾರೆ ಆದರೆ ಪೊಲೀಸರು ವಕೀಲರ ಮೇಲೆ ಘೋರ ಅಪರಾಧ ನಡೆಸಿರುವುದನ್ನು ನೋಡಿದರೆ ಈ ದೇಶದಲ್ಲಿ ನ್ಯಾಯ ಪರತೆ ಇದೆಯಾ ಎನ್ನುವ ಅನುಮಾನ ಉಂಟಾಗುತ್ತದೆ ಎಂದರು.

ಇದನ್ನು ಖಂಡಿಸಿ ಚಿಕ್ಕಮಗಳೂರು ವಕೀಲರ ಸಂಘದ ಎಲ್ಲ ಸದಸ್ಯರೂ ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.

ತಪ್ಪಿತಸ್ಥ ಪೊಲೀಸರ ಮೇಲೆ ಎಫ್‌ಐಆರ್ ಹಾಕಿದ ಮೇಲೆ ಮೊದಲು ಅವರನ್ನು ಬಂಧಿಸಬೇಕು. ನಂತರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿ ಕಾನೂನು ಕ್ರಮ ಜರುಗಿಸಬೇಕು ಆ ಕೆಲಸ ಆಗಲಿಲ್ಲ. ಎಸ್ಪಿ ಅವರು ಮೊದಲು ಈ ಕೆಲಸವನ್ನು ಮಾಡಬೇಕು ಎಂದು ಆಗ್ರಹಿಸಿದರು.

ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಸುಧಾಕರ್ ಮಾತನಾಡಿ, ವಕೀಲ ಪ್ರೀತಂ ಮೇಲೆ ಹಲ್ಲೆ ಮಾಡಿದ ಪೊಲೀಸರನ್ನು ಕೂಡಲೇ ಬಂಧಿಸಬೇಕು. ಇಂತಹ ಪ್ರಕರಣದಲ್ಲಿ ಸಾಮಾನ್ಯ ಜನರಿಗೆ ಅನ್ವಯಿಸುವ ಕ್ರಮವೇ ಪೊಲೀಸರಿಗೂ ಅನ್ವಯ ಆಗಬೇಕು. ರಾಜ್ಯಾದ್ಯಂತ ಎಲ್ಲಾ ವಕೀಲರು ಕಲಾಪ ಬಹಿಷ್ಕರಿಸಿ ಪ್ರತಿಭಟನೆಗೆ ಬೆಂಬಲಿಸಿದ್ದಾರೆ. ಹಲ್ಲೆ ನಡೆಸಿದ ಪೊಲೀಸರನ್ನು ಬಂಧಿಸದೇ ಇದ್ದಲ್ಲಿ ಸ್ಥಳ ಬಿಟ್ಟು ಕದಲುವುದಿಲ್ಲ ಎಂದರು.

Lawyer protest demanding arrest of police

 

About Author

Leave a Reply

Your email address will not be published. Required fields are marked *