September 16, 2024

ಪೊಲೀಸ್ ಸಂಘದ ಸುದ್ದಿಗೋಷ್ಠಿಗೆ ಪೊಲೀಸ್ ಇಲಾಖೆ ತಡೆ

0
ಕೊಡಗಿನ ಅಣ್ಣಯ್ಯ

ಕೊಡಗಿನ ಅಣ್ಣಯ್ಯ

ಚಿಕ್ಕಮಗಳೂರು: ಕಾಫಿನಾಡಲ್ಲಿ ವಕೀಲರು ಹಾಗೂ ಪೊಲೀಸರ ಗಲಾಟೆ ಪ್ರಕರಣ ಕುರಿತು ಸುದ್ದಿಗೋಷ್ಠಿ ನಡೆಸಲು ಆಗಮಿಸಿದ್ದ ಮಾಜಿ ಪೊಲೀಸ್ ಸಿಬ್ಬಂದಿ ಅಣ್ಣಯ್ಯ ಸುದ್ದಿಗೋಷ್ಠಿ ನಡೆಸದಂತೆ ತಡೆಯಲಾಗಿದೆ.

ವಕೀಲರು ಹಾಗೂ ಪೊಲೀಸರ ನಡುವಿನ ಸಂಘರ್ಷ ದಿನೆ ದಿನೇ ತಾರಕಕ್ಕೇರುತ್ತಿದೆ. ಸೋಮವಾರ ಕೊಡಗಿನ ಅಣ್ಣಯ್ಯ ಎಂಬ ನಿವೃತ್ತ ಪೊಲೀಸ್ ಸಿಬ್ಬಂದಿ ಹಾಗೂ ಪೊಲೀಸ್ ಸಂಘದ ಉಪಾಧ್ಯಕ್ಷರನ್ನು ಪತ್ರಿಕಾಗೋಷ್ಠಿ ನಡೆಸದಂತೆ ಅಧಿಕಾರಿಗಳು ತಡೆಯೊಡ್ಡಿದ್ದಾರೆ.

ಇದಕ್ಕೆ ಅಣ್ಣಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದರು, ಸುದ್ದಿಗೋಷ್ಟಿ ಮಾಡದಂತೆ ನನ್ನನ್ನ ತಡೆದಿದ್ದಾರೆ ಈ ಮೂಲಕ ಹೋರಾಟವನ್ನ ಹತ್ತಿಕ್ಕಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ, ನಮ್ಮ ಪೊಲೀಸರಿಗೆ ಯಾರಿಗೆ ತೊಂದರೆಯಾದರೆ ಇಡೀ ರಾಜ್ಯಾದ್ಯಂತ ಹೋರಾಟ ನಡೆಯಲಿದೆ ಎಂದು ಅಣ್ಣಯ್ಯ ಎಚ್ಚರಿಸಿದರು.

ಎಫ್.ಐ.ಆರ್. ಹರಿದು ಬಿಸಾಡಿದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಾ ಎಂದು ಅವರು ಎಸ್ಪಿಯವರನ್ನು ಪ್ರಶ್ನಿಸಿದರು. ಪೊಲೀಸರು ಸ್ವಾಭಿಮಾನ ಉಳ್ಳವರು ಅವರಿಗೆ ಅನ್ಯಾಯ ಆಗಲು ಬಿಡಲ್ಲ ಪೊಲೀಸರಿಗೆ ಅನ್ಯಾಯವಾದರೆ ಪೊಲೀಸ್ ಕುಟುಂಬಗಳ ಜೊತೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ನೇರೆ ಎಚ್ಚರಿಕೆ ಕೊಟ್ಟರು,

ಆದರೆ ಈ ನಡುವೆ ತಮ್ಮ ಪರ ಪತ್ರಿಕಾಗೋಷ್ಠಿ ನಡೆಸಲು ಆಗಮಿಸಿದ ಅಣ್ಣಯ್ಯರನ್ನು ಪೊಲೀಸರೇ ಅಡ್ಡಿಪಡಿಸಿದ್ದು ಮಾತ್ರ ವಿಪರ್ಯಾಸವಾಗಿತ್ತು.

The police department blocked the press conference of the police association

About Author

Leave a Reply

Your email address will not be published. Required fields are marked *