September 16, 2024

ಚಿಕ್ಕಮಗಳೂರು ತಾಲೂಕು ಸಂಪೂರ್ಣ ಬರ ಘೋಷಣೆಗೆ ಶಾಸಕ ಎಚ್.ಡಿ ತಮ್ಮಯ್ಯ ಆಗ್ರಹ

0
ಶಾಸಕ ಎಚ್.ಡಿ ತಮ್ಮಯ್ಯ

ಶಾಸಕ ಎಚ್.ಡಿ ತಮ್ಮಯ್ಯ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕನ್ನು ಸಂಪೂರ್ಣವಾಗಿ ಬರಗಾಲಪೀಡಿತ ಪ್ರದೇಶವೆಂದು ಘೋ?ಣೆ ಮಾಡುವಂತೆ ಶಾಸಕ ಎಚ್.ಡಿ ತಮ್ಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕಂದಾಯ ಸಚಿವ ಕೃ? ಬೈರೇಗೌಡ ಅವರಿಗೆ ಲಿಖಿತ ಮನವಿ ಪತ್ರ ಸಲ್ಲಿಸುವ ಮೂಲಕ ಅಧಿವೇಶನದಲ್ಲಿ ಈ ಬಗ್ಗೆ ಗಮನ ಸೆಳೆದಿದ್ದಾರೆ.

ಈ ಹಿಂದೆ ಬರಪೀಡಿತ ತಾಲೂಕುಗಳ ಘೋ?ಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಿಯಮನುಸಾರ ಲಕ್ಯಾ ಮತ್ತು ಸಕ್ರೆಪಟ್ಟಣ ಹೋಬಳಿ ಗಳನ್ನು ಮಾತ್ರ ಸೇರ್ಪಡೆ ಮಾಡಿದ್ದು ಇದರಿಂದ ಉಳಿದ ಭಾಗದ ರೈತರಿಗೆ ಅನ್ಯಾಯವಾಗಿದೆ ಎಂದು ಶಾಸಕರು ಗಮನ ಸೆಳೆದಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಅಂಬಳೆ ಮತ್ತು ಕಸಬಾ ಹೋಬಳಿಯಲ್ಲಿ ಬರಗಾಲದಿಂದ ರೈತರಿಗೆ ಸಂಕ? ಎದುರಾಗಿದ್ದು ಕುಡಿಯುವ ನೀರಿನ ಸಮಸ್ಯೆಗೂ ಕಾರಣವಾಗಿದೆ. ಆದ್ದರಿಂದ ಸಂಪೂರ್ಣ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕನಿ? ೫೦ ಲಕ್ಷರೂ ಅನುಧಾನ ನೀಡುವಂತೆ ಹಾಗೂ ಜಲಜೀವನ ಮಿಷನ್ ಯೋಜನೆಗೆ ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಸದನದಲ್ಲಿ ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನಲ್ಲಿ ೨೦೨೩-೨೪ ಸಾಲಿನಲ್ಲಿ ಅತೀ ಹೆಚ್ಚು ಬರ ತಾಂಡವವಾಡುತ್ತಿದ್ದರು ಸಹ ಚಿಕ್ಕಮಗಳೂರು ತಾಲ್ಲೂಕನ್ನು ಬರಪೀಡಿತ ಘೋಷಣೆ ಪಟ್ಟಿಯಿಂದ ಕೈ ಬಿಡಲಾಗಿದೆ ಈ ತಾಲ್ಲೂಕು ಮಲೆನಾಡು ಮತ್ತು ಬಯಲು ಸೀಮೆ ಈ ಎರಡನ್ನು ಒಳಗೊಂಡಿದ್ದು ಅವೈಜ್ಞಾನಿಕ ಮಾಪನಗಳಿಂದ ಚಿಕ್ಕಮಗಳೂರು ತಾಲ್ಲೂಕನ್ನು ಬರ ಪಟ್ಟಿಯಿಂದ ಹೊರಗೆ ಉಳಿದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಬಾರಿ ಮುಂಗಾರು ಮಳೆ ಅತ್ಯಂತ ಕಡಿಮೆ ದಾಖಲಾಗಿದ್ದು ಹಾಗೂ ಹಿಂಗಾರು ಮಳೆಯು ಸಂಪೂರ್ಣವಾಗಿ ಬರದೆ ಇರುವುದರಿಂದ ರೈತರ ಬೆಳೆ ಮತ್ತು ತೋಟಗಾರಿಕಾ ಉತ್ಪನ್ನಗಳು ಮಳೆ ಇಲ್ಲದೆ ನಾಶವಾಗಿದೆ. ಜನ ಜಾನುವಾರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದ್ದುರಾಗಿದ್ದು ಮುಂದಿನ ದಿನಗಳಲ್ಲಿ ಬೇಸಿಗೆ ಸಮೀಪಿಸುತ್ತಿರುವುದರಿಂದ ಬಹಳಷ್ಟು ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗಿದೆ ಎಂದು ಹೇಳಿದ್ದಾರೆ.

ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಚಿಕ್ಕಮಗಳೂರು ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರವನ್ನು ಮಂಜೂರು ಮಾಡುವಂತೆ ಈ ಮೂಲಕ ಸಚಿವರಿಗೆ ಹಾಗೂ ಸದನಕ್ಕೆ ವಿನಂತಿಸಿದರು.

ಶಾಸಕ ತಮ್ಮಯ್ಯ ಅವರ ಒತ್ತಾಯಕ್ಕೆ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರು ಧ್ವನಿಗೂಡಿಸಿ ಬೆಂಬಲಿಸಿ ಶಾಸಕ ತಮ್ಮಯ್ಯ ಅವರ ಒತ್ತಾಯಕ್ಕೆ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರು ಧ್ವನಿಗೂಡಿಸಿ ಬೆಂಬಲಿಸಿದರು.

Chikkamagaluru taluk MLA H.D. Tammayya demands complete drought declaration

About Author

Leave a Reply

Your email address will not be published. Required fields are marked *