September 16, 2024

ಮಲ್ಲಂದೂರಿನಲ್ಲಿ ಶಾಸಕರಿಂದ ಸಂತೆ ಮಾರುಕಟ್ಟೆ ಉದ್ಘಾಟನೆ

0
Santa market inaugurated by MLA in Mallandur

Santa market inaugurated by MLA in Mallandur

ಚಿಕ್ಕಮಗಳೂರು:  ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ದೊಂದಿಗೆ ಚರ್ಚಿಸಿ ಸಮರ್ಪಕ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು.

ತಾಲ್ಲೂಕಿನ ಬ್ಯಾರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಂದೂರು ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟೀ ಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ೨೪ ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಹಳ್ಳಿಸಂತೆ ಮಾರುಕಟ್ಟೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ನೂತನ ಹಳ್ಳಿಸಂತೆ ಮಾರುಕಟ್ಟೆಯಿಂದ ಸುತ್ತಮುತ್ತಲಿನ ೨೫ಕ್ಕೂ ಹೆಚ್ಚು ಗ್ರಾಮಗಳ ವ್ಯಾಪಾಸ್ಥರಿಗೆ ಹಾಗೂ ಖರೀದಿದಾರರಿಗೆ ಬಹಳಷ್ಟು ಅನುಕೂಲವಾಗಿದೆ. ಈ ಹಿಂದೆ ಸಮರ್ಪಕ ಸೌಲಭ್ಯವಿಲ್ಲದೇ ಸಂತೆ ನಡೆಸಲು ಅನಾನುಕೂಲ ವ್ಯವಸ್ಥಿಯಿದ್ದ ಹಿನ್ನೆಲೆಯಲ್ಲಿ ನೂತನ ಮಾರುಕಟ್ಟೆ ಸ್ಥಾಪಿಸಲಾಗಿದೆ ಎಂದು ಹೇಳಿದರು.

ನೂತನ ಮಾರುಕಟ್ಟೆಯಲ್ಲಿ ೧೦೦ ಮಂದಿ ವ್ಯಾಪಾರ ನಡೆಸಬಹುದಾಗಿದ್ದು ಗುಣಮಟ್ಟದ ಕಾಂಕ್ರೀಟ್ ರಸ್ತೆ, ಶೌಚಾಲಯ ಹಾಗೂ ಶೆಡ್ಡಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಮಲ್ಲಂದೂರಿನ ನವಗ್ರಾಮದಲ್ಲಿ ನೂತನವಾಗಿ ಮಂಜೂರಾಗಿರುವ ಅಂಗವನಾಡಿ ಕೇಂದ್ರವನ್ನು ಉದ್ಘಾಟಿಸಲಾಗಿದ್ದು ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡಕ್ಕೆ ನಿರ್ಮಾಣಕ್ಕೆ ಮುಂದಾಲಾಗುವುದು ಎಂದರು.

ಗ್ರಾ.ಪಂ. ಅಧ್ಯಕ್ಷ ಎಂ.ಜೆ.ಸಂದೀಪ್ ಮಾತನಾಡಿ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳು ಗುಡ್ಡ ಗಾಡು ಪ್ರದೇಶದಿಂದ ಆವರಿಸಿಕೊಂಡಿರುವ ಹಿನ್ನೆಲೆಯಲ್ಲಿ ಚರಂಡಿ, ರಸ್ತೆ ಸೇರಿದಂತೆ ಮೂಲಸೌಕರ್ಯ ಸಮಸ್ಯೆ ಯಿದ್ದು ಅನುದಾನ ಬಿಡುಗಡೆಗೊಳಿಸಿ ಗ್ರಾಮಗಳ ಅಭಿವೃದ್ದಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಿಡಿಪಿಓ ಚರಣ್‌ರಾಜ್, ಗ್ರಾ.ಪಂ. ಉಪಾಧ್ಯಕ್ಷೆ ನೀಲಾವತಿ, ಸದಸ್ಯರಾದ ಸಿ.ಸಿ. ಪುಟ್ಟೇಗೌಡ, ಎಂ.ಆರ್.ಮಂಜುನಾಥ್, ಉಮಾಮಂಜುನಾಥ್, ಇಂದ್ರ, ಪುಷ್ಪ, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಸಿದ್ದಾಂತ್, ಪಿಡಿಓ ಎನ್.ಎಸ್.ಜಗನ್ನಾಥ್, ಕಾರ್ಯದರ್ಶಿ ಬೋರಣ್ಣಗೌಡ ಹಾಗೂ ಗ್ರಾಮಸ್ಥರು ಹಾಜರಿದ್ದರು.

Santa market inaugurated by MLA in Mallandur

About Author

Leave a Reply

Your email address will not be published. Required fields are marked *