September 16, 2024
ಸ್ಕೌಟ್ ಮತ್ತು ಗೈಡ್ಸ್ ಮೂಲ ತರಬೇತಿ ಶಿಬಿರದ ಕಾರ್ಯ ಕ್ರಮ

ಸ್ಕೌಟ್ ಮತ್ತು ಗೈಡ್ಸ್ ಮೂಲ ತರಬೇತಿ ಶಿಬಿರದ ಕಾರ್ಯ ಕ್ರಮ

ಚಿಕ್ಕಮಗಳೂರು: ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರಗತಿಯತ್ತ ಕೊಂಡೊಯ್ಯುವ ಮಹ ತ್ತರ ಜವಾಬ್ದಾರಿ ಶಿಕ್ಷಕರ ಮೇಲಿದ್ದು ಪಠ್ಯೇತರ ಚಟುವಟಿಕೆ ಜೊತೆಗೆ ಸ್ಕೌಟ್ಸ್-ಗೈಡ್ಸ್‌ನ ತರಬೇತಿ ನೀಡುವ ಮೂಲಕ ಆತ್ಮಸ್ಥೈರ್ಯ ತುಂಬುವ ಶಿಕ್ಷಣ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

ನಗರದ ಸ್ಕೌಟ್ಸ್ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಘಟಕ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ಕೌಟ್ ಮತ್ತು ಗೈಡ್ಸ್ ಮೂಲ ತರಬೇತಿ ಶಿಬಿರದ ಕಾರ್ಯ ಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಪುಸ್ತಕದ ಜೊತೆಗೆ ಶಿಸ್ತು, ಸಂಯಮ ಹಾಗೂ ಸಮಾಜದಲ್ಲಿ ಹಲವಾರು ತೊಡಕುಗಳು ಎದುರಾ ದಾಗ ಸ್ವಯಂಪ್ರೇರಿತರಾಗಿ ಆತ್ಮಸ್ಥೈರ್ಯ ತುಂಬುವ ಕೆಲಸ ಸ್ಕೌಟ್ಸ್ & ಗೈಡ್ಸ್ ಸಂಸ್ಥೆ ಮಾಡುತ್ತಿದೆ. ಇದನ್ನು ಕೂಡಾ ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಕರು ಮನದಟ್ಟು ಮಾಡಿದರೆ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬೆಳೆಯಲು ಸಹಕಾರಿ ಎಂದು ಹೇಳಿದರು.

ಚಿಕ್ಕಮಗಳೂರು ಪರಿಸರಕ್ಕೆ ಪೂರಕವಾಗಿರುವ ಜಿಲ್ಲೆಯಾಗಿದೆ. ಇಂತಹ ಸಮೃದ್ದ ವಾತಾವರಣದಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಬೇಕು. ಶಿಬಿರದಲ್ಲಿ ಪಡೆದುಕೊಂಡಂತಹ ಅನುಭವವನ್ನು ಮಕ್ಕಳಿಗೆ ಬೋಧಿಸುವ ಜೊತೆಗೆ ಶಿಕ್ಷಕರು ಅಳವಡಿಸಿಕೊಂಡು ಮುನ್ನೆಡೆಯಬೇಕು ಎಂದು ತಿಳಿಸಿದರು.

ಶಿಕ್ಷಕರು ತರಬೇತಿ ಶಿಬಿರದಲ್ಲಿ ಸಂಪೂರ್ಣ ಕಲಿಕೆಯೊಂದಿಗೆ ಅಧ್ಯಯನ ನಡೆಸಬೇಕು. ಸಿಕ್ಕಂತಹ ಅವಕಾಶ ವನ್ನು ಸದ್ಬಳಕೆ ಮಾಡಿಕೊಂಡು ಸಮಾಜಕ್ಕೆ ಮಾದರಿ ಎನಿಸುವಂತಹ ಮಕ್ಕಳ ಬೆಳವಣಿಗೆಗೆ ಸಹಕರಿಸಬೇಕು. ಮುಂ ದಿನ ಪೀಳಿಗೆಗೆ ಸದೃಢ ಮಕ್ಕಳನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರಿಗೆ ಇರು ವುದರಿಂದ ಹೆಚ್ಚು ಶಿಬಿರದಲ್ಲಿ ಪಾಲ್ಗೊ ಳ್ಳಬೇಕು ಎಂದು ಹೇಳಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಗುಣಮಟ್ಟ ಹಾಗೂ ಸಮಾಜದಲ್ಲಿ ಧೈರ್ಯ ತುಂಬುವ ಬಹುದೊಡ್ಡ ಶಿಕ್ಷಣ ಒದಗಿಸುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದ ಅವರು ಸ್ಕೌಟ್ಸ್ & ಗೈಡ್ಸ್ ಸಂಸ್ಥೆ ಮಕ್ಕಳಿಗೆ ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಆಯಾ ಶಾಲಾ ಶಿಕ್ಷಕರಿಗೆ ಸಂ ಪೂರ್ಣ ತರಬೇತಿ ನೀಡಿ ಬೋಧಿಸಲಾಗುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳನ್ನು ಸನ್ನಡತೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಸಂಸ್ಥೆಯು ಕೇವಲ ಹತ್ತು ಮಂದಿ ಯುವ ಕರಿಂದ ಪ್ರಾರಂಭವಾಗಿ ಇದೀಗ ೨೧೪ ದೇಶಗಳಲ್ಲಿ ಹರಡಿಕೊಂಡು ೬೦ ಮಿಲಿಯನ್‌ನಷ್ಟು ಮಂದಿ ಸಂಸ್ಥೆಯ ಒಂದು ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಸಂಸ್ಥೆಯು ಆಂದೋಲನದ ಮೂಲಕ ಸಮಾಜ ಪರಿವರ್ತನೆ, ವ್ಯಕ್ತಿತ್ವ ವಿಕಾಸಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದಲ್ಲದೇ ಸಂಸ್ಥೆಗೆ ದೇಶ ಹಾಗೂ ರಾಜ್ಯದಲ್ಲಿ ವಿಶೇಷ ಇತಿಹಾಸವಿದ್ದು, ಮೊದಲ ಬಾರಿಗೆ ರಾಜ್ಯ ದಲ್ಲಿ ಜಯಚಾಮರಾಜ ಒಡೆಯರ್ ಅವರು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ಪಿಜಿಆರ್ ಸಿಂಧ್ಯಾ ನೇತೃತ್ವದಲ್ಲಿ ರಾಜ್ಯದಾದ್ಯಂತ ಸಂಸ್ಥೆ ಇದೀಗ ಕಾರ್ಯನಿರ್ವಹಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಜಿಲ್ಲಾ ಆಯುಕ್ತ ಎಂ.ಎನ್.ಷಡಕ್ಷರಿ ಏಳು ದಿನಗಳ ಕಾಲ ನಡೆಯಲಿರುವ ತರಬೇತಿಯಲ್ಲಿ ಶಿಕ್ಷಕರು ಅಸಡ್ಡೆವಹಿಸದೇ ಶಿಬಿರದ ಸಂಪೂರ್ಣ ಮಾಹಿತಿ ಅರಿತು ಕೊಂಡು ತಮ್ಮ ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಬೋಧಿಸುವ ಮೂಲಕ ಪ್ರತಿ ಶಾಲೆಗಳಲ್ಲಿ ಒಂದೊಂದು ಸ್ಕೌಟ್ಸ್ & ಗೈಡ್ಸ್ ತಂಡ ರಚಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಜಿಲ್ಲಾ ಆಯುಕ್ತೆ ಮಮತ, ತರಬೇತಿ ಆಯುಕ್ತೆ ಸಂಧ್ಯಾರಾಣಿ, ಸಂಘಟನಾ ಆಯುಕ್ತ ಕಿರಣ್‌ಕುಮಾರ್, ಜಂಟಿ ಕಾರ್ಯದರ್ಶಿ ಪ್ರತಿಮಾ, ಸಹಾಯಕ ಕಾರ್ಯದರ್ಶಿ ನೀಲಕಂಠಚಾರ್, ಗೈಡ್ಸ್ ತರಬೇತಿ ನಾಯಕ ಡಾ|| ಇಂಚರ ನಾರಾಯಣಸ್ವಾಮಿ, ಗೈಡ್ಸ್ ತರಬೇತಿ ನಾಯಕಿ ಮಮತ ಮತ್ತಿತರರು ಉಪಸ್ಥಿ ತರಿದ್ದರು.

Scout and Guides Basic Training Camp Procedure

About Author

Leave a Reply

Your email address will not be published. Required fields are marked *