September 16, 2024

ನಿಯಮಿತ ರಕ್ತದಾನದಿಂದ ಎಲ್ಲರ ಆರೋಗ್ಯ ಕಾಪಾಡಲು ಸಾಧ್ಯ

0
ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಚಿಕ್ಕಮಗಳೂರು:  ನಿಯಮಿತ ರಕ್ತದಾನದಿಂದ ಎಲ್ಲರ ಆರೋಗ್ಯವನ್ನು ಕಾಪಾಡಲು ಸಾಧ್ಯ ಎಂದು ಮಲ್ಲೇಗೌಡ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ|| ಮುರುಳೀಧರ್ ತಿಳಿಸಿದರು.

ಅವರು ಇಂದು ತಾಲೂಕಿನ ಸಖರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್ ಕ್ಲಬ್, ಮಲ್ಲೇಗೌಡ ಜಿಲ್ಲಾಸ್ಪತ್ರೆ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಏರ್ಪಪಡಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಏಡ್ಸ್ ರೋಗ ಎನ್ನುವುದು ಒಂದು ಕಾಲದಲ್ಲಿ ನಿಯಂತ್ರಿಸಲಾಗದ ಗುಣಮುಖವಾಗದ ಕಾಯಿಲೆ ಎಂಬಂತೆ ನೋಡಲಾಗುತ್ತಿತ್ತು ಅದರೆ ಇಂದು ಅದರ ಬಗ್ಗೆ ತಿಳಿವಳಿಕೆ ಹೆಚ್ಚಾಗಿದೆ. ಕೆಲವು ಮುಂಜಾಗ್ರತಾ ಸುರಕ್ಷಿತ ಲೈಂಗಿಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಏಡ್ಸ್ ನ್ನು ನಿಯಂತ್ರಣಕ್ಕೆ ತರಬಹುದಾಗಿದೆ ಎಂದರು.

ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ ಮಾತನಾಡಿ ಬದುಕಿನಲ್ಲಿ ಎಬಿಸಿ ಸೂತ್ರವನ್ನು ಅಳವಡಿಸಿಕೊಂಡರೆ ಎಲ್ಲಾ ರೋಗಗಳಿಂದ ಮುಕ್ತವಾಗಬಹುದು. ಎ ಫಾರ್ ಆಪಲ್, ಬಿ ಫಾರ್ ಬೀಟ್‌ರೋಟ್, ಸಿ ಫಾರ್ ಕ್ಯಾರೇಟ್ ಎಂದರು. ಉತ್ತಮ ಆಹಾರ ಪದ್ದತಿ, ಅತ್ಯುತ್ತಮ ಆರೋಗ್ಯದ ಮೂಲ ಎಂದು ಅವರು ಹೇಳಿದರು.

ವರದಿಗಾರ ಓಂಕಾರಮೂರ್ತಿ ಮಾತನಾಡಿ ಆನೆಗೆ ರಕ್ತ ಕೊಡುತ್ತೇನೆಂದು ಹೋಗುವ ಇರುವೆಯ ಕಥೆ ಹೇಳುತ್ತ ನಾವು ಮೊದಲು ಇರುವೆಯಂತೆ ಆತ್ಮವಿಶ್ವಾಸ ಹೊಂದಿರಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಒಳ್ಳೆಯ ಕೆಲಸಗಳನ್ನು ಮಾಡಲು ಮನಸ್ಸು ಮಾಡುವ ಅಗತ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಂ.ಆರ್ ಜ್ಯೋತಿ ಇವರು ರಕ್ತದಾನಿಗಳನ್ನು ಉದ್ದೇಶಿಸಿ ಮಾತನಾಡಿ ರಕ್ತದಾನ ಮಾಡಲು ಮುಂದೆಬಂದು ಮಾನವೀಯವಾಗಿ ಸ್ಪಂದಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯವಾದುದು ಎಂದರು.

ಸಮಾಜದ ಪ್ರತಿಯೊಬ್ಬರೂ ಇಂತಹ ಗುಣಗಳನ್ನು ಬೆಳಸಿಕೊಂಡಾಗ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಅಲ್ಲದೆ ಯುವ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿ ಇತ್ತೀಚೆಗೆ ಏಡ್ಸ್ ರೋಗಕ್ಕೆ ತುತ್ತಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ವೆಂಕಟೇಶ್ ಕಾರ್ಯಕ್ರಮವನ್ನು ನಿರೂಪಿಸಿದರು, ವಿದ್ಯಾರ್ಥಿನಿ ಹರ್ಷಿತ ಪ್ರಾರ್ಥಿಸಿ, ಕಡೂರು ತಾಲೂಕು ಆಸ್ಪತ್ರೆ ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕ ಚಂದ್ರಕುಮಾರ್ ಏಡ್ಸ್ ನಿಯಂತ್ರಣ ಸಂಕಲ್ಪದ ಪ್ರತಿಜ್ಷಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಸಖರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪವನ್, ಕಾಲೇಜಿನ ಸಿಬ್ಬಂದಿ ವರ್ಗದವರಾದ ಗಣೇಶ್.ವಿ, ಮಮತ, ಸಂತೋಷ್, ಚರಿತ, ವೇದಾನಂದ ಪ್ರಭು, ರಮೇಶ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ನೇಹಾ ಆತಾರ್, ಕವಿತಾ. ಎಸ್, ಸಹನಾ ಎಂ.ಬಿ, ಮಧುರಾಜ್‌ದೀಪಕ್ ಭಾಗವಹಿಸಿದ್ದರು.

Self motivated blood donation camp

About Author

Leave a Reply

Your email address will not be published. Required fields are marked *