September 19, 2024

ಅರ್ಜುನ ಆನೆಯ ಸಾವಿನ ತನಿಖೆಗೆ ಕನ್ನಡಸೇನೆ ಒತ್ತಾಯ

0
ಅರ್ಜುನ ಆನೆಯ ಸಾವಿನ ತನಿಖೆಗೆ ಕನ್ನಡಸೇನೆ ಒತ್ತಾಯ

ಅರ್ಜುನ ಆನೆಯ ಸಾವಿನ ತನಿಖೆಗೆ ಕನ್ನಡಸೇನೆ ಒತ್ತಾಯ

ಚಿಕ್ಕಮಗಳೂರು: ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ನಾಡಿನ ಗಮನಸೆಳೆದಿದ್ದ ಅರ್ಜುನ ಆನೆ ಮೃತಪಟ್ಟಿದ್ದು, ಸಾವಿನ ಹಿಂದಿನ ರಹಸ್ಯವನ್ನು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಸೇನೆ ಮುಖಂಡರುಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ ಕನ್ನಡಸೇನೆ ಮುಖಂಡರುಗಳು ಗುಂಡೇಟಿನಿಂದ ಸಾವಪ್ಪಿರುವ ಅರ್ಜುನ ಆನೆಯ ಪ್ರಕರಣವನ್ನು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಬಳಿಕ ಮಾತನಾಡಿದ ಸೇನೆಯ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮೈಸೂರಿನ ಇತಿಹಾಸದಲ್ಲೇ ಸುಮಾರು ಎಂಟು ಬಾರಿ ಅಂಬಾರಿಹೊತ್ತು ದಾಖಲಿಸಿದ ಕೀರ್ತಿ ಅರ್ಜುನ ಆನೆಗೆ ಸಲ್ಲಲಿದೆ. ಆದರೆ ಕಾಡಾನೆ ಹಿಡಿಯುವ ಸಂದರ್ಭದಲ್ಲಿ ಅರ್ಜುನನ ಕಾಲಿಗೆ ಗುಂಡೇಟು ನೀಡಿ ಸಾವಿಗೆ ಕಾರಣರಾಗಿರುವ ಕಾರ್‍ಯಾಚರಣೆಯ ಪಡೆಯ ತಪ್ಪಿ ತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಅರ್ಜುನ ಆನೆಯ ಸಾವು ಇಡೀ ರಾಜ್ಯಾದ್ಯಂತ ಬಹಳಷ್ಟು ನೋವುಂಟು ಮಾಡಿರುವ ಜೊತೆಗೆ ತುಂಬಾನೇ ನಷ್ಟವಾಗಿದೆ ಎಂದ ಅವರು ಇದಕ್ಕೆಲ್ಲಾ ಮೂಲ ಕಾರಣರಾಗಿರುವ ಕಾರ್ಯಾಚರಣೆ ಪಡೆಯವರನ್ನು ಕೆಲಸದಿಂದ ವಜಾಗೊಳಿಸಿ ಘೋರ ಶಿಕ್ಷೆಗೆ ಗುರಿಪಡಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ಮೈಸೂರಿನ ದಸರಾ ಆನೆಗಳ ರಕ್ಷಣೆಗೆ ರಾಜ್ಯಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ಧೋರಣೆ ವಹಿಸಿದರೆ ಕನ್ನಡಸೇನೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಘಟಕದ ಅದ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿಗಳಾದ ಹರೀಶ್ ಶಂಕರ್, ಅಶೋಕ್, ಸಹ ಕಾರ್ಯದರ್ಶಿ ಪಾಲಾಕ್ಷಿ, ಮುಖಂಡರುಗಳಾದ ಜೆ.ಡಿ.ಲೋಕೇಶ್, ಶಾಕೀಬ್, ಶಿವಕು ಮಾರ್ ಮತ್ತಿತರರು ಹಾಜರಿದ್ದರು.

Kannada Sena insists on investigating the death of Arjuna’s elephant

About Author

Leave a Reply

Your email address will not be published. Required fields are marked *

You may have missed