September 19, 2024

ವೀರಶೈವ ಲಿಂಗಾಯಿತರ ಬೇಡಿಕೆ ಈಡೇರಿಸಲು ಕೈಜೋಡಿಸಿ

0
ಅಖಿಲ ಭಾರತ ಲಿಂಗಾಯಿತ ಮಹಾಸಭಾದ ೨೪ನೇ ಮಹಾ ಅಧಿವೇಶನ ನೋಂದಣಿ ಕಾರ್ಯಕ್ರಮ

ಅಖಿಲ ಭಾರತ ಲಿಂಗಾಯಿತ ಮಹಾಸಭಾದ ೨೪ನೇ ಮಹಾ ಅಧಿವೇಶನ ನೋಂದಣಿ ಕಾರ್ಯಕ್ರಮ

ಚಿಕ್ಕಮಗಳೂರು: ವೀರಶೈವ ಲಿಂಗಾಯಿತ ಸಮಾಜವನ್ನು ಓಬಿಸಿ ಪಟ್ಟಿಗೆ ಸೇರಿಸುವ ಸಲು ವಾಗಿ ದಾವಣಗೆರೆಯಲ್ಲಿ ಅಖಿಲ ಭಾರತ ಲಿಂಗಾಯಿತ ಮಹಾಸಭಾದ ೨೪ನೇ ಮಹಾ ಅಧಿವೇಶನಕ್ಕೆ ಜಿಲ್ಲೆಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೇಡಿಕೆ ಈಡೇರಿಸಲು ಕೈಜೋಡಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೇಶ್ ಆಗ್ರಹಿಸಿದರು.

ನಗರದ ರೇಣುಕಾಚಾರ್ಯ ಕಲ್ಯಾಣ ಮಂಟಪದ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ದಾವಣಗೆರೆಯ ಎಂಬಿಎ ಕಾಲೇಜಿನಲ್ಲಿ ಡಿ.೨೩ ಮತ್ತು ೨೪ ರಂದು ಎರಡು ದಿನಗಳ ನಡೆ ಯುವ ಅಧಿವೇಶನದಲ್ಲಿ ಜನಾಂಗದ ಮೂಲ ಬೇಡಿಕೆಗಳಾದ ಓಬಿಸಿ ಪಟ್ಟಿಗೆ ಸೇರ್ಪಡೆ ಹಾಗೂ ಜಾತಿ ಸಮೀಕ್ಷೆ ಅವ್ಶೆಜ್ಞಾನಿಕವಾಗಿರುವ ಬಗ್ಗೆ ಹಕ್ಕೋತ್ತಾಯಿಸಲು ಧಾರ್ಮಿಕ-ಸಾಮಾಜಿಕ, ಶೈಕ್ಷಣಿಕವಾಗಿ ಸಂಘಟಿಸುವ ಉದ್ದೇ ಶದಿಂದ ಅಧಿವೇಶನ ನಡೆಯ ಲಿದೆ ಎಂದು ತಿಳಿಸಿದರು.

ಈ ಮಹಾಅಧಿವೇಶನದಲ್ಲಿ ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ, ಹಾವೇರಿ ಸೇರಿದಂತೆ ಹಲವಾರು ಜಿಲ್ಲೆ ಗಳಿಂದ ಜನಾಂಗದವರು ಭಾಗವಹಿಸಲಿದ್ದಾರೆ. ಜೊತೆಗೆ ನಾಡಿನ ಹಿರಿಯ ಮಠಾಧೀಶರು, ರಾಜಕೀಯ ಮುಖಂ ಡರು, ಸಮಾಜದ ಗಣ್ಯರು, ಸಾಹಿತಿಗಳು, ಕಲಾವಿದರು ಆಗಮಿಸಲಿದ್ದಾರೆ ಎಂದರು.

ಎರಡು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಸಾಂಸ್ಕೃತಿಕ ಪರಂಪರೆಗಳ ಗೋಷ್ಟಿ, ಮಹಾಸಭೆ ಯ ಇತಿಹಾಸ, ಕಾರ್ಯಚಟುವಟಿಕೆಗಳನ್ನು ಪರಿಚಯಿಸುವ ವಸ್ತು ಮತ್ತು ಪುಸ್ತಕ ಪ್ರದರ್ಶನ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ, ಕೃಷಿ ಸಂಬಂಧಿತ ಪ್ರದರ್ಶನವಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕಮಗಳೂರು ವೀರಶೈವ-ಲಿಂಗಾಯಿತ ಬಂಧುಗಳು ಪ್ರತಿನಿಧಿಗಳಾಗಿ ಭಾಗವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪಿ.ಚಂದ್ರಮೌಳಿ, ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಓಂಕಾರ, ವೀರಶೈವ ಲಿಂಗಾಯಿತ ಸಮಾಜದ ಮುಖಂಡರಾದ ಹೆಚ್.ಎಂ.ರೇಣುಕಾರಾಧ್ಯ, ಪೂಣೇಶ್, ಜಿ.ವೀರೇಶ್, ಪ್ರಸಾದ್ ಸಿರಿಮನೆ, ಜಯಪ್ರಕಾಶ್, ಅಶೋಕ್‌ಕುಮಾರ್, ಮಂಜುನಾಥಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

24th General Session Registration Program of All India Lingayat Mahasabha

About Author

Leave a Reply

Your email address will not be published. Required fields are marked *

You may have missed