September 19, 2024
ದಕ್ಷಿಣ ಭಾರತ ದಾಳಿಂಬೆ ಬೆಳಗಾರರ ರೈತೋತ್ಪಾಕ ಸಂಸ್ಥೆಯ ಪತ್ರಿಕಾಗೋಷ್ಠಿ

ದಕ್ಷಿಣ ಭಾರತ ದಾಳಿಂಬೆ ಬೆಳಗಾರರ ರೈತೋತ್ಪಾಕ ಸಂಸ್ಥೆಯ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು:  ದಕ್ಷಿಣ ಭಾರತ ದಾಳಿಂಬೆ ಬೆಳಗಾರರ ರೈತೋತ್ಪಾಕ ಸಂಸ್ಥೆಯ ಆಶ್ರಯದಲ್ಲಿ ಡಿ.೧೩ರಂದು ದಾಳಿಂಬೆ ತಾಂತ್ರಿಕ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ನಗರಕ್ಕೆ ಸಮೀಪದ ಅಲ್ಲಂಪುರ ಬಳಿ ಇರುವ ಬೈನರಿ ಎಕ್ಸೋಟಿಕ ರೆಸಾರ್ಟ್‌ನಲ್ಲಿ ಡಿ.೧೩ರ ಬೆಳಿಗ್ಗೆ ೧೦.೩೦ ರಿಂದ ಸಂಜೆ ೪:೩೦ರ ವರೆಗೆ ಈ ಕಾರ್ಯಾಗಾರ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ಯೋಗಿಶ್ವರ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ತಾಂತ್ರಿಕ ಕಾರ್ಯಗಾರದಲ್ಲಿ ತೋಟಗಾರಿಕೆ ಇಲಾಖೆಯ ಹನಿ ನೀರಾವರಿ ಮತ್ತು ತೋಟಗಾರಿಕೆ ಬೆಳೆಗಳ ವಿಭಾಗದ ಜಂಟಿ ನಿರ್ದೇಶಕ ಪ್ರಸಾದ್ ಬಿ.ಎನ್ ರವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದು, ಹಾಸನದ ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ರಾಜು ಸುಲೋಚನಾ ಈ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಶ್ರೀಮತಿ ಸುಜಾತ, ತೋಟಗಾರಿಕೆ ಉಪನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಹಾಗೂ ಕೃಷಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ|| ಬೋರಯ್ಯಾ ಭಾಗವಹಿಸಲಿದ್ದಾರೆ.

ಸೊಲ್ಲಾಪುರ ದಾಳಿಂಬೆ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಮಂಜುನಾಥ್ ಹಾಗೂ ತಳಿ ಸಂಶೋಧನಾ ವಿಭಾಗದ ಡಾ. ಶಿಲ್ಪ ಪರಶುರಾಮ್ ದಾಳಿಂಬೆ ಸಂಶೋಧನೆಯ ವಿಜ್ಞಾನಿ ಡಾ|| ಸೋಮನಾಥ್ ಸುರೇಶ್ ಪೊಕರೆ ಅವರು ತಾಂತ್ರಿಕ ಉಪನ್ಯಾಸ ನೀಡಲಿದ್ದು ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದು ದಾಳಿಂಬೆ ಬೆಳೆಗಾರರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಮಳೆ ಕಡಿಮೆ ಆಶ್ರಿತ ಪ್ರದೇಶದಲ್ಲಿ ಮಾತ್ರ ದಾಳಿಂಬೆ ಬೆಳೆಯಬಹುದಾಗಿದ್ದು ಜಿಲ್ಲೆಯ ಕಡೂರು ತಾಲೂಕಿನ ೫೦೦ ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ೩೦೦ ರಿಂದ ೪೦೦ ಬೆಳೆಗಾರರು ಈ ಕಾರ್ಯಗಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಯತೀಶ್ ಎಸ್.ಯತೀಶ್ ಜಿ.ಎಸ್.ಬೋರೇಗೌಡ ಉಪಸ್ಥಿತರಿದ್ದರು.

Pomegranate technical workshop on December 13

About Author

Leave a Reply

Your email address will not be published. Required fields are marked *

You may have missed