September 19, 2024

ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಮುಖ್ಯಮಂತ್ರಿ ಬಳಿ ನಿಯೋಗ

0
ಕೆಪಿಸಿಸಿ ವಕ್ತಾರ ಹೆಚ್,ಹೆಚ್ ದೇವರಾಜ್ ಸುದ್ದಿಗೊಷ್ಠಿ

ಕೆಪಿಸಿಸಿ ವಕ್ತಾರ ಹೆಚ್,ಹೆಚ್ ದೇವರಾಜ್ ಸುದ್ದಿಗೊಷ್ಠಿ

ಚಿಕ್ಕಮಗಳೂರು:  ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮತ್ತು ಸ್ಥಳೀಯ ಶಾಸಕರನ್ನು ಒಳಗೊಂಡ ನಿಯೋಗ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಆಗ್ರಹಿಸಲಿದೆ ಮುಖ್ಯಮಂತ್ರಿಗಳನ್ನು ಒತ್ತಾ ಯಿಸಲಿದ್ದಾರೆ ಕೆಪಿಸಿಸಿ ವಕ್ತಾರ ಹೆಚ್,ಹೆಚ್ ದೇವರಾಜ್ ಹೇಳಿದರು.

ನಗರದಲ್ಲಿಂದು ಕರೆದಿದ್ದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಅದರೊಂದಿಗೆ ಸರ್ಫೇಸಿ ಕಾಯ್ದೆಯಿಂದ ತಮ್ಮ ಆಸ್ತಿಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದರೂ ಸಹ ಈ ಬಗ್ಗೆ ನಮ್ಮದೇ ಕ್ಷೇತ್ರದ ಸಂಸದರಾದ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಎಲ್ಲಿಯೂ ಪ್ರಸ್ತಾಪಿಸಿಲ್ಲ ಎಂದರು. ಸದನದಲ್ಲಿ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.

ಬಿಜೆಪಿಯ ಮುಖಂಡರುಗಳು ಶೀಘ್ರದಲ್ಲಿಯೇ ರಾಜ್ಯ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಮೇ ತಿಂಗಳ ನಂತರ ಪತನಗೊಳ್ಳುತ್ತದೆ ಎಂಬ ಹೇಳಿಕೆಗಳನ್ನು ನೀಡುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ವಿರೋಧ ಪಕ್ಷದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಆರ್ ಅಶೋಕ್ ಸಂಪೂರ್ಣ ವಿಫಲರಾಗಿದ್ದಾರೆ. ರಚನಾತ್ಮಕ ಟೀಕೆಗಳನ್ನು ಮಾಡುವ ಮೂಲಕ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯಬೇಕಾದ ಬಿಜೆಪಿ ರಾಜ್ಯಾಧ್ಯಕ್ಷರು ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಟೀಕಿಸಬೇಕೆಂಬ ಕಾರಣಕ್ಕೆ ಟೀಕಿಸುತ್ತಾ ಕಲಾಪವನ್ನು ಅಳುಗೆಡವುತ್ತಿದ್ದಾರೆ ಅವರೊಬ್ಬ ದುರ್ಬಲ ರಾಜ್ಯಾಧ್ಯಕ್ಷ ಎಂದು ಲೇವಡಿ ಮಾಡಿದರು.

ರಾಜ್ಯzಲ್ಲಿ ಬಿಜೆಪಿ ಪಕ್ಷ ಎಂಬುದು ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ, ಎಸ್‌ಆರ್ ಬೊಮ್ಮಾಯಿ, ಆರ್ ಅಶೋಕ್, ಬಸವರಾಜ್ ಯತ್ನಾಳ್, ಬಣ ರಾಜಕಾರಣದಲ್ಲಿ ತೊಡಗಿಕೊಂಡು ತಮ್ಮದೇ ಪಕ್ಷದ ವಿರುದ್ಧ ಕಠೋರ ಶಬ್ದಗಳಿಂದ ಟೀಕಿಸುತ್ತಿದ್ದಾರೆ.

ಬಿಜೆಪಿ ನಾಯಕರ ಆಣತಿಯನ್ನು ಯಾವ ಶಾಸಕರು ಪಾಲಿಸುತ್ತಿಲ್ಲ ತಮ್ಮ ಪಕ್ಷದ ನಿರ್ಧಾರಗಳಿಗೆ ಬಸವರಾಜ್ ಯತ್ನಾಳ್‌ಅಪಸ್ವರ ಎತ್ತುತ್ತಿದ್ದಾರೆ. ಪಕ್ಷದ ಎಲ್ಲರನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋಗುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಹೇಳಿದರು.

ಉದ್ಯಮಿಗಳಾದ ಅದಾನಿ,ಅಂಬಾನಿ ಯವರಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಮನ್ನಾ ಮಾಡಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಸಂಕಷ್ಟದಲ್ಲಿರುವ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ ರಾಜ್ಯದಿಂದ ಆಯ್ಕೆಗೊಂಡಿರುವ ಅಷ್ಟು ಸಂಸದರು ಮೌನ ವಹಿಸಿದ್ದಾರೆ ಎಂದು ಹೇಳಿದರು

ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರ ಸ್ಥಾಪಿಸಲು ಸಂಪೂರ್ಣ ಬಹುಮತ ನೀಡಿದ್ದು ಸರ್ಕಾರ ಪತನಗೊಳ್ಳುವ ಹೇಳಿಕೆ ನೀಡುತ್ತಿರುವ ಬಿಜೆಪಿ ಮುಖಂಡರು ತಮ್ಮ ಪಕ್ಷದ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿರುವ ಬಸವನಗೌಡ ಪಾಟೀಲ್ ಯತ್ನಾಳ್‌ರನ್ನು ಮೊದಲು ರಿಪೇರಿ ಮಾಡಿಕೊಳ್ಳಲಿ ಎಂದು ಕುಟುಕಿದರೂ.

ಮಾಜಿ ಶಾಸಕ ಸಿ ಟಿ ರವಿ ಒಂದು ಸೋಲಿನಿಂದ ಹತಾಶರಾಗಿ ದಿಗ್ಬ್ರಾಂತರಾಗಿದ್ದಾರೆ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ರೂಪದಲ್ಲಿ ನೀಡುತ್ತಿರುವ ನೆರವನ್ನು ಭಿಕ್ಷೆ ಎಂದು ಟೀಕಿಸುತ್ತಿದ್ದಾರೆ.ಮೂಲತಃ ಕೃಷಿಯಲ್ಲಿ ತೊಡಗಿಕೊಂಡಿರುವ ಮಾಜಿ ಶಾಸಕ ಸಿಟಿ ರವಿ,ತಂದೆ ಮತ್ತು ಅವರ ಸಹೋದರ ಭಿಕ್ಷುಕರೇ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಿಟಿ ರವಿಯನ್ನು ಬಿಜೆಪಿ ರಾಷ್ಟ್ರೀಯ ಮುಖಂಡರು ಕಡೆಗಣಿಸಿದ್ದಾರೆ ಯಾವುದೇ ಮುಖ್ಯ ನಿರ್ಣಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಇವರನ್ನು ವಿಶ್ವಾಸಕ್ಕೆ ಪಡೆಯದೆ ಕಡೆಗಣಿಸಿದ್ದಾರೆ ಎಂದು ಕುಹಕವಾಡಿದರು. ಮುಂಬರುವ ದತ್ತ ಜಯಂತಿ ಕಾರ್ಯ ಕ್ರಮದಲ್ಲಿ ಜಿಲ್ಲಾಡಳಿತ ನ್ಯಾಯಾಲಯದ ಆದೇಶವನ್ನು ಪಾಲಿಸುವುದರೊಂದಿಗೆ ಯಾವುದೇ ಹೊಸ ಆಚರಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಈ ಗೋಷ್ಠಿಯಲ್ಲಿ ಸೇವಾದಳದ ಮಾಜಿ ಅಧ್ಯಕ್ಷ ಆನಂದ್, ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂಡಿರಮೇಶ್, ಮುಖಂಡರಾದ ಬಾಬು, ಶಾಂತಕುಮಾರ್, ಹಿರೇಮಗಳೂರು ರಾಮಚಂದ್ರ ಇದ್ದರು.

Delegation to Chief Minister to declare drought affected area

About Author

Leave a Reply

Your email address will not be published. Required fields are marked *

You may have missed