September 19, 2024
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್‌ದೊಡ್ಡಯ್ಯ ಪತ್ರಿಕಾಗೋಷ್ಠಿ

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್‌ದೊಡ್ಡಯ್ಯ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರ ಶಾಸಕಿ ನಯನಾಮೋಟಮ್ಮ ಅವರು ಜನರ ಸಮಸ್ಯೆ ಕೇಳಲು ಒಂದು ಕಚೇರಿ ತೆರೆದಿಲ್ಲ. ಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಸರಕಾರದ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್‌ದೊಡ್ಡಯ್ಯ ಆರೋಪಿಸಿದರು.

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕಿ ನಯನಾ ಮೋಟಮ್ಮ ಅವರು ಪಟ್ಟಣದಲ್ಲಿ ಅಕೃತವಾಗಿ ಕಚೇರಿ ತೆರೆಯದೆ ಸಾರ್ವಜನಿಕರು ತಮ್ಮ ಆಹವಾಲು ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಸರಕಾರಕ್ಕೆ ಕ್ಷೇತ್ರದ ಸಮಸ್ಯೆಗಳನ್ನು ಅರ್ಥಮಾಡಿಸುವಲ್ಲಿ ಅವರು ವಿಫಲರಾಗಿದ್ದಾರೆ. ಕ್ಷೇತ್ರದಾದ್ಯಂತ ರಸ್ತೆಗಳು ಗುಂಡಿ ಬಿದ್ದಿವೆ. ಅವುಗಳನ್ನು ಮುಚ್ಚುವ ಕೆಲಸ ನಡೆಯುತ್ತಿಲ್ಲ. ಸಂಚಾರವೇ ದುಸ್ತರವಾಗಿದೆ ಎಂದು ದೂರಿದರು.

ಮೂಡಿಗೆರೆ ಕ್ಷೇತ್ರದ ಹೆಡದಾಳು ಗ್ರಾಮದಲ್ಲಿ ಮೀನ ಎಂಬ ಮಹಿಳೆ ಕಾಡಾನೆ ದಾಳಿಗೆ ಬಲಿಯಾದಾಗ ಅಂದು ಮೂಡಿಗೆರೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿಯಲ್ಲಿ ತಮ್ಮೊಂದಿಗೆ ಮಾತನಾಡಿ ದೀಪಾವಳಿ ನಂತರ ಅರಣ್ಯ ಸಚಿವರನ್ನು ಕ್ಷೇತ್ರಕ್ಕೆ ಕಳುಹಿಸಿ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಅರಣ್ಯ ಸಚಿವರೂ ಬರಲಿಲ್ಲ. ಕಾಡಾನೆಗಳು ಕಾಡಿಗಟ್ಟಲಿಲ್ಲ. ಸಿಎಂ ಹೇಳಿದ್ದ ಮಾತು ಉಳಿಸಿಕೊಳ್ಳಲಿಲ್ಲ ಎಂದರು.

ಸರಕಾರ ಐದೂ ಗ್ಯಾರಂಟಿಗಳನ್ನು ಜಾರಿಮಾಡುವಲ್ಲಿ ವಿಫಲವಾಗಿದೆ. ಮಹಿಳಾ ಉಚಿತ ಬಸ್ ಪ್ರಯಾಣದಿಂದ ಶಾಲಾ ಮಕ್ಕಳು, ಪುರುಷರಿಗೆ ತೊಂದರೆಯಾಗಿದೆ. ಎಷ್ಟೋ ಮಕ್ಕಳು ಶಾಲೆ ತೊರೆದಿದ್ದಾರೆ. ನಿರುದ್ಯೋಗಿಗಳಿಗೆ ನೀಡುವ ಭತ್ಯೆ ಈವರೆಗೂ ನೀಡಿಲ್ಲ. ಮಹಿಳೆಯರಿಗೆ ನೀಡುವ ೨ ಸಾವಿರ ರೂ.ಅನೇಕರಿಗೆ ಬಂದಿಲ್ಲ. ಆಗಿರುವ ಲೋಪ ಸರಿಪಡಿಸುವ ಕೆಲಸವನ್ನು ಸರಕಾರ ಮಾಡಿಲ್ಲ ಎಂದು ದೂರಿದರು. ಮೂಡಿಗೆರೆ ಆಸ್ಪತ್ರೆಯಲ್ಲಿನ ವೈದ್ಯರನ್ನು ಬೇರೆಡೆಗೆ ವರ್ಗಾಹಿಸಲಾಗುತ್ತಿದೆ. ಹೀಗಾಗಿ ಅಲ್ಲಿ ವೈದ್ಯರ ಕೊರತೆ ಉಂಟಾಗಿದೆ ಎಂದರು.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಬಹುಮತ ಪಡೆದು ಅಕಾರಕ್ಕೆ ಬಂದಿದ್ದು ಇದರಿಂದ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಮೂಡಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೊಟ್ಯಾನ್, ಆಲ್ದೂರು ಮಂಡಲ ಅಧ್ಯಕ್ಷ ದಿನೇಶ್, ಯುವ ಮೋರ್ಚಾ ಉಪಾಧ್ಯಕ್ಷ ಸ್ವರೂಪ್ ಕಬ್ಬಿಣಸೇತುವೆ ಉಪಸ್ಥಿತರಿದ್ದರು.

BJP District Vice President Deepak Doddaiah press conference

About Author

Leave a Reply

Your email address will not be published. Required fields are marked *

You may have missed