September 19, 2024

ಪೂರ್ವಜರ ಕಾಲದ ಕಥೆಗಳೇ ನಮ್ಮೆಲ್ಲರಿಗೂ ಪ್ರೇರಣೆ

0
Desi Storytelling Program at District Kasapa

Desi Storytelling Program at District Kasapa

ಚಿಕ್ಕಮಗಳೂರು:  ಪ್ರತಿಯೊಬ್ಬರಲ್ಲಿ ಕಥೆ, ಸಣ್ಣಕಥೆ ಹಾಗೂ ಕಾದಂಬರಿ ರಚಿಸುವ ಗುಣ ವಿದೆ. ಅವುಗಳನ್ನು ಸಾಹಿತ್ಯಾತ್ಮಕ ಬರವಣಿಗೆ ಮೂಲಕ ಹೇಳುವಂತಾದಾದರೆ ಮಾತ್ರ ಪರಿಪೂರ್ಣ ಕಥೆಗಳು ಅನಾವರಣಗೊಳ್ಳಲು ಸಾಧ್ಯ ಎಂದು ಸಾಹಿತಿ ಹಾಗೂ ರಂಗ ನಿರ್ದೇಶಕ ಡಾ.ರಾಜಪ್ಪ ದಳವಾಯಿ ಹೇಳಿದರು.

ನಗರದ ಕೆಂಪನಹಳ್ಳಿ ಸಮೀಪ ಕನ್ನಡ ಭವನದಲ್ಲಿ ವೀರಲೋಕ ಬುಕ್ಸ್, ಜಿಲ್ಲಾ ಕಸಾಪ ಹಾಗೂ ಚಿಕ್ಕಮಗ ಳೂರು ಸಂಸ್ಕೃತಿ ಪ್ರತಿಷ್ಟಾನ ಸಂಯುಕ್ತಾಶ್ರಯದಲ್ಲಿ ದೇಸಿ ಕಥಾಕಮ್ಮಟ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.

ಪೂರ್ವಜರ ಕಾಲದ ಕಥೆಗಳೇ ನಮ್ಮೆಲರಿಗೂ ಪ್ರೇರಣೆಯಾಗಿದೆ. ರಾಜಮಹಾರಾಜರ ಜೀವನ ಚರಿತ್ರೆ, ಗ್ರಾಮ ದಲ್ಲಿ ನಡೆದಿರುವ ಹಲವಾರು ಸನ್ನಿವೇಶನಗಳನ್ನು ಹಿರಿಯ ಅಜ್ಜ, ಅಜ್ಜಿಯರು ಹೇಳುವ ಕಥೆಗಳ ಮೂಲಕ ಉಳಿದುಕೊಂಡಿದೆ ಎಂದ ಅವರು ಇಂದಿನ ಕಾಲದಲ್ಲಿ ಯುವಕರು ಕಥೆ, ಕಾದಂಬರಿ ರಚಿಸುವ ಸಂಖ್ಯೆ ಕ್ಷೀಣಿಸು ತ್ತಿದ್ದು ಇವುಗಳನ್ನು ಪುನಶ್ಚೇತನಕ್ಕೆ ಕಸಾಪ ಮುಂದಾಗಿರುವುದು ಸ್ವಾಗತಾರ್ಹ ಎಂದರು.

ಕಥೆಗಳನ್ನು ರಚಿಸುವ ಆಸಕ್ತಿಯಿರುವವರು ಮೊದಲು ಹಿರಿಯ ಸಾಹಿತಿ ಹಾಗೂ ಸಾಧಕರ ಜೀವನ ಚರಿತ್ರೆ ಯನ್ನು ಮೊದಲು ಅಧ್ಯಯನ ನಡೆಸಿ ಪ್ರೇರಣೆ ಪಡೆದುಕೊಳ್ಳಬೇಕು. ಜೊತೆಗೆ ಕಥಾಕಮ್ಮ್ಮಟಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕೇಳಿಸಿಕೊಳ್ಳುವ ಗುಣ ಬೆಳೆಸಿಕೊಂಡರೆ ಮಾತ್ರ ಬರವಣಿಗೆ ಸಾಹಿತ್ಯಾತ್ಮಕವಾಗಿ ರೂಪುಗೊಳ್ಳಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಪ್ರತಿ ಮನುಷ್ಯನ ಜೀವನದಲ್ಲಿ ಹಸಿವು, ನೋವು ಅವಮಾನ ಸೇರಿದಂತೆ ನೂರೆಂಟು ಕಥೆಗಳು ಹೊಂದಿರು ತ್ತವೆ. ಕೆಲವರು ಅವುಗಳನ್ನೇ ಪ್ರೇರಿತರಾಗಿ ತೆಗೆದುಕೊಂಡು ಸಣ್ಣಕಥೆ, ಕಾದಂಬರಿ ಮೂಲಕ ಹೊರಸೂಸಿ ನಾಡಿನ ಸಾಹಿತಿಗಳ ಪಟ್ಟಿಯಲ್ಲಿ ಅಜಾರಾಮರಾಗಿ ಉಳಿದುಕೊಂಡು ಇತರರಿಗೆ ಮಾರ್ಗದರ್ಶನರಾಗಿರುವುದು ಕಾಣುತ್ತೇವೆ ಎಂದು ತಿಳಿಸಿದರು.

ಇತ್ತೀಚಿನ ಜೀವನಶೈಲಿಯಲ್ಲಿ ಪೋಷಕರು ಮಕ್ಕಳ ಬಾಲ್ಯದ ಕಥೆಗಳನ್ನು ಕಸಿದುಕೊಂಡು ಪಕ್ಕದ ಮನೆ ಮಕ್ಕ ಳಂತೆ ಜೀವನ ರೂಪಿಸಿಕೊಳ್ಳಲು ಒತ್ತಡ ಹೇರಲಾಗುತ್ತಿದೆ. ಇದರಿಂದ ಮಕ್ಕಳು ಕೇವಲ ಓದಿನ ದಾಸರಾಗುತ್ತಾರೆ ಯೇ ಹೊರತು ಬದುಕಿನಲ್ಲಿ ಸಂತೋಷ ಕಾಣಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಪೋಷಕರು ಮಕ್ಕಳ ಬಾಲ್ಯದ ಕನಸು ಗಳಿಗೆ ಕಡಿವಾಣ ಹಾಕದಿರಿ ಎಂದು ಸಲಹೆ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಕೃತಿ ಚಿಂತಕ ಡಾ|| ಜೆ.ಪಿ.ಕೃಷ್ಣೇಗೌಡ ಕಥೆ, ಕಾದಂಬರಿ ಪ್ರಾರಂಭಿಸುವುದು, ಅಂತ್ಯಗೊಳಿಸುವ ಪರಿಯನ್ನು ಶಿಬಿರಾರ್ಥಿಗಳು ತಿಳಿಸಿಕೊಡುವ ಮೂಲ ಉದ್ದೇಶವೇ ಕಥಾ ಕಮ್ಮಟದ ಮೂಲಧ್ಯೇಯವಾಗಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಕೂಡಾ ಕಥೆಗಳ ಮೂಲಕವೇ ಹೊರ ಹೊಮ್ಮಿ ಬೆಳಕಿಗೆ ಬಂದಿದೆ ಎಂದು ಹೇಳಿದರು.

ಸಣ್ಣಕಥೆ, ಕಾದಂಬರಿ, ಸಿನಿಮಾ ಕಥೆ ಸೇರಿದಂತೆ ರಚನೆಗೆ ಹಲವಾರು ವಿಧಗಳಿವೆ. ಪ್ರಾರಂಭಿಸುವ ಮುನ್ನುಡಿ, ಹಿನ್ನುಡಿ ಬರೆಯುವ ಮೂಲಕ ಕಥೆಗಳಿಗೆ ಪ್ರಾಧ್ಯಾನ್ಯತೆ ನೀಡಬೇಕು. ಇದರಿಂದ ಪರಿಪೂರ್ಣ ಕಥೆ ಸಿದ್ದವಾಗಲು ಸಾಧ್ಯ ಎಂದ ಅವರು ಒಂದೊಂದೇ ಅನುಭವಗಳಿಂದ ಕಥೆಗಾರರು ಅಭಿವೃದ್ದಿ ಹೊಂದಲು ಸಾಧ್ಯ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಯುವ ಪೀಳಿಗೆಗೆ ಕಥೆ, ಕಾದಂಬರಿ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವ ಉದ್ದೇಶದಿಂದ ಎರಡು ದಿನಗಳ ಕಾಲ ದೇಸಿ ಕಥಾ ಕಮ್ಮಟವನ್ನು ಆಯೋಜಿಸಿ ಹಿರಿಯ ಸಾಹಿತಿಗಳು, ರಂಗ ನಿರ್ದೇಶಕರ ಮೂಲಕ ತರಬೇತಿ ನೀಡಲಾಗುತ್ತಿದ್ದು ಇದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಸಾಹಿತ್ಯಾಸಕ್ತರು ಸಂಖ್ಯೆ ಸಾಮಾನ್ಯವಾಗಿದ್ದು ಹಿಂದಿನ ಕಾವ್ಯ ಕಮ್ಮಟ ಕಾರ್ಯಕ್ರಮಗಳಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಯಶಸ್ವಿಗೊಳಿಸಿದ್ದರು. ಅದೇ ರೀತಿಯಲ್ಲಿ ಕಥಾ ಕಮ್ಮಟ ಆಯೋ ಜಿಸಿ ಸ್ಥಳೀಯ ಪ್ರತಿಭೆಗಳನ್ನು ಹೊರತರುವ ಕೆಲಸ ಕಸಾಪದಿಂದ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸಾಹಿತಿ ಡಿ.ನಳೀನಾ, ಸಂಸ್ಕೃತಿ ಚಿಂತಕ ಬಿ.ಆರ್.ಜಗದೀಶ್, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಹಾಗೂ ವಿವಿದ ತಾಲ್ಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. ವೀಣಾ ಸಂಗಡಿಗರು ಪ್ರಾರ್ಥಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಸೋಮಶೇ ಖರ್ ಸ್ವಾಗತಿಸಿದರು. ಪೃಥ್ವಿಸೂರಿ ನಿರೂಪಿಸಿದರು. ಮೂಡಿಗೆರೆ ಕಸಾಪ ಅಧ್ಯಕ್ಷ ಶಾಂತಕುಮಾರ್ ವಂದಿ ಸಿದರು.

Desi Storytelling Program at District Kasapa

About Author

Leave a Reply

Your email address will not be published. Required fields are marked *

You may have missed