September 19, 2024
ಜಿಲ್ಲಾ ಮಾಜಿ ಸೈನಿಕರ ಸಂಘ ವತಿಯಿಂದ ಏರ್ಪಡಿಸಿದ್ದ ೧೯೭೧ರ ಯುದ್ಧದ ೫೩ನೇ ವಿಜಯೋತ್ಸವ ಕಾರ್ಯಕ್ರಮ

ಜಿಲ್ಲಾ ಮಾಜಿ ಸೈನಿಕರ ಸಂಘ ವತಿಯಿಂದ ಏರ್ಪಡಿಸಿದ್ದ ೧೯೭೧ರ ಯುದ್ಧದ ೫೩ನೇ ವಿಜಯೋತ್ಸವ ಕಾರ್ಯಕ್ರಮ

ಚಿಕ್ಕಮಗಳೂರು: ಯುದ್ಧಭೂಮಿಯಲ್ಲಿ ಪ್ರಾಣದಹಂಗು ತೊರೆದು ದೇಶವನ್ನು ಕಾಯುತ್ತಿ ರುವ ಸೈನಿಕರ ಸೇವೆ ಅಸ್ಮರಣೀಯ. ಇವರ ತ್ಯಾಗ, ಬಲಿದಾನದಿಂದ ದೇಶದ ಜನತೆ ಪ್ರತಿನಿತ್ಯವು ನೆಮ್ಮದಿಯಿಂದ ಜೀವನ ಸಾಗಿಸಲು ಕಾರಣ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘ ವತಿಯಿಂದ ಏರ್ಪಡಿಸಿದ್ದ ೧೯೭೧ರ ಯುದ್ಧದ ೫೩ನೇ ವಿಜಯೋತ್ಸವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಇತಿಹಾಸದಲ್ಲಿ ಇಂಡೋ ಪಾಕಿಸ್ತಾನ ಯುದ್ಧ, ಭಾರತ, ಪಾಕಿಸ್ತಾನ ಯುದ್ಧ ಹಾಗೂ ಈಚೆಗೆ ನಡೆದ ೨೦೧೯ರಲ್ಲಿ ನಡೆದ ಪುಲ್‌ವಾಮಾ ದಾಳಿ ದೇಶ ಪ್ರಜೆಗಳು ಎಂದಿಗೂ ಮರೆಯುವಂತಿಲ್ಲ ಎಂದ ಅವರು ಇಷ್ಟೆಲ್ಲಾ ಸಾಧನೆ ಮಾಡಿರುವ ಭಾರತೀಯ ಸೇನಪಡೆಗಳು ನಮ್ಮೆಲ್ಲರಿಗೂ ಕಿರೀಟವಿದ್ದಂತೆ ಎಂದು ಹೇಳಿದರು.

ಹುತಾತ್ಮಕ ಸೈನಿಕರ ತ್ಯಾಗ, ಶೌರ್ಯ ಹಾಗೂ ಬಲಿದಾನದಿಂದ ದೇಶ ನೆಮ್ಮದಿ ಜೀವನಕ್ಕೆ ದಾರಿ ಮಾಡಿ ಕೊಟ್ಟಿದೆ. ಅಂತಹ ಮಹಾನ್ ಯೋಧರನ್ನು ದೇಶದ ಪ್ರತಿಪ್ರಜೆಯು ಸ್ಮರಿಸಬೇಕು. ಜೊತೆಗೆ ನಿವೃತ್ತಿಗೊಂಡ ಬಂದಂ ತಹ ಸೈನಿಕರಿಗೆ ಗೌರವ ಸೂಚಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಯಾವುದೇ ಫಲಾಪೇಕ್ಷೆ ಇಲ್ಲದೇ ತನ್ನ ಇಡೀ ಕುಟುಂಬವನ್ನೇ ತೊರೆದು ದೇಶದ ಹಿತ ಕಾಪಾಡುವಲ್ಲಿ ತೆರ ಳುವ ಸೈನಿಕರು ನಮಗೆಲ್ಲಾ ಸ್ಪೂರ್ತಿಯಾಗಿರಬೇಕು. ವಿದ್ಯಾರ್ಥಿಗಳು ಕೂಡಾ ಮುಂದಿನ ಭವಿಷ್ಯದಲ್ಲಿ ಸೈನಿಕರಾಗ ಬೇಕೆಂಬ ಕನಸು ಕಂಡು ಮುನ್ನೆಡೆದರೆ ಅದಕ್ಕಿಂತ ದೊಡ್ಡಭಾಗ್ಯ ಬೇರೊಂದಿಲ್ಲ ಎಂದು ಹೇಳಿದರು.

ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಪಿ.ಎನ್.ನಾಗರಾಜ್ ಮಾತನಾಡಿ ನಿವೃತ್ತ ಸೈನಿಕರು ಸಣ್ಣಪುಟ್ಟ ಸಭೆ ಅಥವಾ ಇನ್ನಿತರೆ ಕಾರ್ಯಚಟುವಟಿಕೆ ರೂಪಿಸಲು ಕಚೇರಿಯ ಸಮಸ್ಯೆಯಾಗಿದೆ. ಆ ನಿಟ್ಟಿನಲ್ಲಿ ಬೇಲೂರು ರಸ್ತೆ ಸಮೀಪವಿರುವ ಹಳೇ ತಾಲ್ಲೂಕು ಕಚೇರಿಯನ್ನು ಸಂಘಕ್ಕೆ ನೀಡಿದರೆ ಬಹಳಷ್ಟು ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ ಮಾತನಾಡಿ ೧೯೭೧ರ ಭಾರತ-ಪಾಕಿಸ್ತಾನ ಯುದ್ಧವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಒಂದು ಪ್ರಮುಖ ಸೈನಿಕ ಸಂಘ?ವಾಗಿದೆ. ಈ ಯುದ್ಧವು ಬಾಂಗ್ಲಾ ವಿಮೋಚನೆಗೆ ಸಂಬಂಧಿಸಿದ್ದು ಅದನ್ನು ಕೆಲವು ಸಲ ಪಾಕಿಸ್ತಾನದ ಆಂತರಿಕ ಯುದ್ಧವಾಗಿತ್ತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ, ಸಹ ಕಾರ್ಯದರ್ಶಿ ರಾಜೇಗೌಡ, ಖಜಾಂಚಿ ಎಸ್.ಪಾಯಿಸ್, ನಿರ್ದೇಶಕ ಕೃಷ್ಣೇಗೌಡ, ಸದಸ್ಯರಾದ ಕುಮಾರಸ್ವಾಮಿ, ರೇವಣ್ಣ, ಮಂಜುನಾಥಸ್ವಾಮಿ, ರಾಮಚಂದ್ರ, ಫರ್ನಾಂಡೀಸ್, ಸುರೇಶ್ ಮತ್ತಿತರರಿದ್ದರು.

53rd Victory Day program of 1971 War organized by District Ex-Servicemen’s Association

About Author

Leave a Reply

Your email address will not be published. Required fields are marked *

You may have missed