September 19, 2024

ದತ್ತಾತ್ರೇಯರ ಹೆಸರಲ್ಲಿ 1861 ಎಕರೆ ಜಮೀನು ಏನಾಯ್ತು

0
ದತ್ತಮಾಲೆ ಧರಿಸಿದ ದತ್ತಪೀಠ ಮುಕ್ತಿಯ ಮುಂಚೂಣಿ ಹೋರಾಟಗಾರ ಸಿ.ಟಿ.ರವಿ

ದತ್ತಮಾಲೆ ಧರಿಸಿದ ದತ್ತಪೀಠ ಮುಕ್ತಿಯ ಮುಂಚೂಣಿ ಹೋರಾಟಗಾರ ಸಿ.ಟಿ.ರವಿ

ಚಿಕ್ಕಮಗಳೂರು:  ಚಿಕ್ಕಮಗಳೂರು ತಾಲೂಕಿನ ದತ್ತಪೀಠದ ಉಮೇದುವಾರಿಕೆಗಾಗಿ ಮೂರ್ನಾಲ್ಕು ದಶಕಗಳಿಂದ ಹಿಂದೂ-ಮುಸ್ಲಿಮರು ಹೋರಾಡುತ್ತಲೇ ಇದ್ದಾರೆ. ಈ ಮಧ್ಯೆ ಮಾಜಿ ಸಚಿವ ಹಾಗೂ ದತ್ತಪೀಠ ಮುಕ್ತಿಯ ಮುಂಚೂಣಿ ಹೋರಾಟಗಾರ ಸಿ.ಟಿ.ರವಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ಇಂದು ದತ್ತಮಾಲೆ ಧರಿಸಿ ದತ್ತಪೀಠದ ಬಗ್ಗೆ ಮಾತನಾಡಿದ ಸಿ.ಟಿ.ರವಿ, ಟೆನೆಂಟ್ ಆಕ್ಟ್ ಬರುವ ಮೊದಲೇ ಮುಜರಾಯಿ ದಾಖಲೆಗಳ ಪ್ರಕಾರ ದತ್ತಾತ್ರೇಯರ ಹೆಸರಲ್ಲಿ 1861 ಎಕರೆ ಜಮೀನಿತ್ತು. ಈಗ ಆ ಜಮೀನು ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ದತ್ತಾತ್ರೇಯರ ಸ್ಥಿರಾಸ್ಥಿಯನ್ನ ಕಾಂಗ್ರೆಸ್ಸಿಗರು ಒತ್ತುವರಿ ಮಾಡಿಕೊಂಡಿದ್ದಾರೆ, ಚರಾಸ್ಥಿಯನ್ನ ಅಕ್ರಮ ಪರಭಾರೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ಇನ್ನು ಚುನಾವಣೆ ವೇಳೆ ಕಾಂಗ್ರೆಸ್ಸಿಗರು ನಾವು ಹಿಂದೂಗಳು, ನಾವು ದತ್ತಪೀಠಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದರು. ಆದರೆ, ಬಂದರಾ ಎಂದು ಪ್ರಶ್ನಿಸಿದ್ದಾರೆ. ದತ್ತಪೀಠದ ವಿಚಾರದಲ್ಲಿ ಕಾಂಗ್ರೆಸ್ಸಿಗರು ನಾಟಕ ಮಾಡುವ ಬದಲು ಸತ್ಯವನ್ನ ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಓಟಿನ ಆಸೆಗೆ ಸುಳ್ಳು ಹೇಳುವುದನ್ನ ಬಿಡಬೇಕು. ಹಿಂದಿನಿಂದಲೂ ಹೇಳುತ್ತಿದ್ದೇವೆ. ದತ್ತಪೀಠ-ದರ್ಗಾ ಬೇರೆ-ಬೇರೆ. ದರ್ಗಾ ಜಾಗರ ಹೋಬಳಿ ನಾಗೇನಹಳ್ಳಿಯ ಸರ್ವೇ ನಂಬರ್ 57ರಲ್ಲಿ ಇಂದಿಗೂ ಇದೆ. ಅದನ್ನ ಅವರು ಜನ್ನತ್ ನಗರ ಅಂತಾರೆ. ಬಾಬಾಬುಡನ್ ದರ್ಗಾ ಅಲ್ಲಿದೆ. ಬಾಬಾಬುಡನ್ ಅವರಿಗೆ ಸಂಬಂಧಿಸಿದ ಸಮಾದಿ ಅಲ್ಲಿದೆ ಅನ್ನೋದಕ್ಕೆ ಸರ್ಕಾರಿ ದಾಖಲೆ ಹೇಳುತ್ತೆ. ದತ್ತಪೀಠ ಇರೋದು ದತ್ತಪೀಠ ಗ್ರಾಮದ ಸರ್ಕಾರಿ ದಾಖಲೆ ಸರ್ವೇ ನಂಬರ್ 195ರಲ್ಲಿ ಇದೆ. ಅದು ಎಲ್ಲರಿಗೂ ಗೊತ್ತು. ಆದರೆ, ದತ್ತಪೀಠದ ಆಸ್ತಿ ಕಬಳಿಸಿರೋರು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ಸಿಗರು ದತ್ತಪೀಠದ ಬಗ್ಗೆ ಸುಳ್ಳು-ಅಪಪ್ರಚಾರ ಮಾಡುವ ಬದಲು ದಾಖಲೆಗಳನ್ನ ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಟಿಪ್ಪು ಹೆಸರಿಡುವುದಾದರೆ ಕಾಂಗ್ರೆಸ್ ಕಚೇರಿಗೆ ಇಟ್ಟುಕೊಳ್ಳಿ , ನಿಮ್ಮ ಮನೆಗೆ ಇಟ್ಟುಕೊಳ್ಳಿ ವಿಮಾನ ನಿಲ್ದಾಣಕ್ಕೆ ಅಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಬಗ್ಗೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಪ್ರಸ್ತಾಪಕ್ಕೆ ಮಾಜಿ ಶಾಸಕ ಸಿ.ಟಿ ರವಿ ತೀಕ್ಷ್ಣವಾಗಿ ಪ್ರತಿಕ್ರಯಿಸಿದ್ದಾರೆ. ಪ್ರಸಾದ್ ಅಬ್ಬಯ್ಯ ತಮ್ಮ ಮನೆಗೆ ಟಿಪ್ಪು ಹೆಸರಿಟ್ಟುಕೊಳ್ಳಲಿ ಕಾಂಗ್ರೆಸ್ ನವರಿಗೆ ಪ್ರೀತಿ ಇದ್ದರೆ ಕಾಂಗ್ರೆಸ್ ಕಚೇರಿಗಳಿಗೆ ಟಿಪ್ಪು ಹೆಸರಿಟ್ಟುಕೊಳ್ಳಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಬೇಡ ಎಂದರು.

ಮೈಸೂರು ಸಂಸ್ಥಾನಕ್ಕೆ ಅಪಾರ ಕೊಡುಗೆ ಕೊಟ್ಟಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಆಗ್ರಹಿಸಿರುವ ಸಿ.ಟಿ ರವಿ , ಟಿಪ್ಪು ಹಿಂದುಗಳ ಮಾರಣಹೋಮ ನಡೆಸಿ ಕ್ರೈಸ್ತರ ನೆತ್ತರ ಕೋಡಿ ಹರಿಸಿದ್ದವನು ದೇವಾಲಯ ದ್ವಂಸಗೊಳಿಸಿ ದೌರ್ಜನ್ಯ ಎಸಗಿದ್ದಾನೆ ಕನ್ನಡ ಬಿಟ್ಟು ಪಾರ್ಸಿ ಭಾಷೆ ಹೇರಲು ಹುನ್ನಾರ ನಡೆಸಿದ್ದವನು ಟಿಪ್ಪು ಎಂದು ಹೇಳಿದ್ದಾರೆ.

CT Ravi the frontline fighter for Dattapeeth Mukti wearing Dattamalae

About Author

Leave a Reply

Your email address will not be published. Required fields are marked *

You may have missed