September 19, 2024

ಬರಪೀಡಿತ ಪ್ರದೇಶ ಎಂದು ಘೋಷಿಸಲು ಸಿ.ಎಂ ಬಳಿಗೆ ನಿಯೋಗ

0
ಕೆ.ಪಿ.ಸಿ.ಸಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭರತೇಶ್ ಟಿ.ಒ ಪತ್ರಿಕಾಗೋಷ್ಠಿ

ಕೆ.ಪಿ.ಸಿ.ಸಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭರತೇಶ್ ಟಿ.ಒ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕನ್ನು ಸಂಪೂರ್ಣ ಬರಪೀಡಿತ ಪ್ರದೇಶ ಎಂದು ಘೋಷಿಸಿ ಪರಿಹಾರ ಕಾರ್ಯವನ್ನು ಕೈಗೊಳ್ಳುವಂತೆ ಮುಂದಿನ ವಾರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ತೆರಳಿ ಮನವಿ ಮಾಡಲು ತೀರ್ಮಾನಿಸಲಾಗಿದೆ ಎಂದು ಕೆ.ಪಿ.ಸಿ.ಸಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭರತೇಶ್ ಟಿ.ಒ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ ಚಿಕ್ಕಮಗಳೂರು ತಾಲೂಕನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಹೆಚ್.ಡಿ ತಮ್ಮಯ್ಯ ಅವರು ವಿ?ಯ ಪ್ರಸ್ತಾಪಿಸಿ ಮನವಿ ಮಾಡಿರುವ ಬಗ್ಗೆ ಅಭಿನಂದಿಸುವುದಾಗಿ ಹೇಳಿದರು.

ಲಕ್ಯಾ ಹಾಗೂ ಸಕ್ರೆಪಟ್ಟಣ ಹೋಬಳಿಯಲ್ಲಿ ತೀವ್ರ ಬರಗಾಲ ಇರುವುದರಿಂದ ಕುಡಿಯುವ ನೀರಿನ ೫೦ ಶುದ್ದಗಂಗಾ ಘಟಕಗಳನ್ನು ಮಂಜೂರು ಮಾಡುವಂತೆ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಸ್ಥಾಪನೆ ಆನೆ ಮತ್ತು ಕಾಡಾನೆ ಹಾವಳಿ ನಿಯಂತ್ರಣದ ಬಗ್ಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಸದನದಲ್ಲಿ ಚರ್ಚಿಸಿರುವ ಶಾಸಕ ಹೆಚ್.ಡಿ ತಮ್ಮಯ್ಯ ಅವರನ್ನು ಅಭಿನಂದಿಸಿದರು.

ಜಿಲ್ಲೆಯ ಬಹುತೇಕ ರೈತರ ಜ್ವಲಂತ ಸಮಸ್ಯೆಯಾಗಿರುವ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿ ಪ್ರತ್ಯೇಕಿಸಲು ಜಂಟಿ ಸರ್ವೆ ಮಾಡಲು ಸರ್ವೇಯರ್ ಗಳ ನೇಮಕ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮರುಪಾವತಿ ಮಾಡಿದರೆ ಬಡ್ಡಿಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ಘೋ?ಣೆ ಮಾಡಿರುವುದನ್ನು ಸ್ವಾಗತಿಸಿದರು.

ಬಿಳೇಕಲ್ಲಳ್ಳಿ ಗ್ರಾ.ಪಂ ವ್ಯಾಪ್ತಿಯ ಎರಡಕ್ಕೆ ಬೈಲು ಪಾದಮನೆ ಸಕ್ರಪಟ್ಟಣ ಗ್ರಾ.ಪಂ.ನ ಕಾರ್ಖಾನೆ ಮೂಲೆ ಭಾಗದಲ್ಲಿ ಹಲವು ವ?ಗಳಿಂದ ಸಾಗುವಳಿ ಮಾಡಿರುವ ೨೫೦ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ರಾಜ್, ರಾಘವೇಂದ್ರ ಹಂಪಾಪುರ, ಸಂತೋ? ಲಕ್ಯಾ, ಚಂದು ಚಿಕ್ಕಗೌಜ, ಗಂಗೇಗೌಡ ಉಪಸ್ಥಿತರಿದ್ದರು

Delegation to CM to declare drought prone area

About Author

Leave a Reply

Your email address will not be published. Required fields are marked *

You may have missed