September 19, 2024

ಪೋಲೀಸ್ ಇಲಾಖೆ ಇನ್ನಷ್ಟು ಆಧುನೀಕರಣಗೊಳಿಸಲು ಸರ್ಕಾರ ಬದ್ಧ

0
೩೬ ಪೋಲೀಸ್ ವಸತಿಗೃಹಗಳ ವಸತಿ ಸಮುಚ್ಚಯ ಉದ್ಘಾಟನೆ

೩೬ ಪೋಲೀಸ್ ವಸತಿಗೃಹಗಳ ವಸತಿ ಸಮುಚ್ಚಯ ಉದ್ಘಾಟನೆ

ಚಿಕ್ಕಮಗಳೂರು: ಪೋಲೀಸ್ ವ್ಯವಸ್ಥೆ ಸರ್ಕಾರದ ಮುಖ ಇದ್ದಂತೆ. ಪೋಲೀಸ್ ವ್ಯವಸ್ಥೆ ಸರಿಯಾಗಿದ್ದರೆ ಕಾನೂನು ಸುವ್ಯವಸ್ಥೆ ಪಾಲನೆ ಶಾಂತಿ, ನೆಮ್ಮದಿ ಇದ್ದು, ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಅರ್ಥ. ಈ ಕಾರಣದಿಂದ ರಾಜ್ಯ ಪೋಲೀಸ್ ಇಲಾಖೆಯನ್ನು ಮತ್ತ? ಆಧುನೀಕರಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

ಅವರು ಇಂದು ನಗರದ ಬಾರ್‌ಲೈನ್ ರಸ್ತೆಯಲ್ಲಿ ನಿರ್ಮಾಣವಾಗಿರುವ ೩೬ ಪೋಲೀಸ್ ವಸತಿಗೃಹಗಳ ವಸತಿ ಸಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿದರು.

ಮಾತನಾಡುವ ಪ್ರಾರಂಭದಲ್ಲಿ ಜಿಲ್ಲೆಯ ಹಾಗೂ ರಾಜ್ಯದ ಹಿರಿಯ ರಾಜಕೀಯ ಮುತ್ಸುದ್ಧಿ ದಿ. ಡಿ.ಬಿ ಚಂದ್ರೇಗೌಡರನ್ನು ಸ್ಮರಿಸಿದ ಅವರು ಪೋಲೀಸ್ ಸಿಬ್ಬಂದಿಯವರು ಬೇರೆಯವರಲ್ಲಿ ಅವರೂ ಕೂಡ ನಮ್ಮವರೇ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಬೇಕು. ಈ ಹಿನ್ನಲೆಯಲ್ಲಿ ಪೋಲೀಸ್ ಸಿಬ್ಬಂದಿಗಳಿಗೆ ಉತ್ತಮವಾದ ವಸತಿ ಸೌಕರ್ಯ ಒದಗಿಸಲು ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ತಾವು ಈ ಹಿಂದೆ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯ ಎಲ್ಲಾ ಪೊಲೀಸ್ ಠಾಣೆಗಳನ್ನು ಆಧುನೀಕರಣಗೊಳಿಸಲಾಗಿತ್ತು, ಆ ಸಂದರ್ಭದಲ್ಲಿ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಪೋಲೀಸ್ ಸಿಬ್ಬಂದಿಯವರ ವಸತಿ ವ್ಯವಸ್ಥೆಯನ್ನು ಗಮನಿಸಿದಾಗ ಅತ್ಯಂತ ಹಳೆಯ ಮತ್ತು ವಾಸಮಾಡಲಾಗದ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ತಮ್ಮ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪೋಲೀಸರು ಅತ್ಯಂತ ಸಮರ್ಥವಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ವಸತಿ, ಶಿಕ್ಷಣ ಮತ್ತು ಆರೋಗ್ಯ ವೃದ್ಧಿಸುವ ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು ಎಂದು ಹೇಳಿದರು.

ಪೋಲೀಸ್ ಸಿಬ್ಬಂದಿಯವರಿಗೆ ಉತ್ತಮ ವಸತಿ ಸೌಲಭ್ಯ ಕಲ್ಪಿಸುವ ಸಲುವಾಗಿ ಸುಮಾರು ೨ ಸಾವಿರ ಕೋಟಿ ರೂ ವೆಚ್ಚದಲ್ಲಿ ವಸತಿಗಳನ್ನು ನಿರ್ಮಿಸಿಕೊಡಬೇಕೆಂಬ ೨೦೦೦-೨೦ ಯೋಜನೆಯನ್ನು ರೂಪಿಸಿಕೊಂಡು ಅತ್ಯಾಧುನಿಕ ಸೌಲಭ್ಯಗಳುಳ್ಳ ವಸತಿ ಸಮುಚ್ಚಯ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಪೋಲೀಸ್ ಸಿಬ್ಬಂದಿಯವರು ನೆಮ್ಮದಿಯಿಂದ ಸಮರ್ಥರಾಗಿ ಕೆಲಸ ಮಾಡಬೇಕಾದರೆ ಅವರ ಕುಟುಂಬದವರ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಗಮನಿಸುವುದು ಸರ್ಕಾರದ ಜವಾಬ್ದಾರಿ ಆಗಿರುವುದರಿಂದ ಸುಮಾರು ೧೦೦ ಕೋಟಿ ರೂ ವೆಚ್ಚದಲ್ಲಿ ೬೭ ಪೋಲೀಸ್ ಪಬ್ಲಿಕ್ ಶಾಲೆಗಳು ಮತ್ತು ಪೊಲೀಸ್ ಕುಟುಂಬದವರ ಆರೋಗ್ಯ ರಕ್ಷಣೆಗೆ ವೆಚ್ಚ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇರುವ ಎಲ್ಲಾ ಪೊಲೀಸ್ ಠಾಣೆಗಳ ಸಿಬ್ಬಂದಿಗಳಿಗೆ ವಸತಿ ನಿರ್ಮಿಸಲು ಉದ್ದೇಶಿಸಿದ್ದು, ಎಲ್ಲಾ ಸಿಬ್ಬಂದಿಗಳಿಗೂ ವಸತಿ ನಿರ್ಮಿಸಿಕೊಡುವವರೆಗೆ ಈ ಯೋಜನೆಯನ್ನು ಮುಂದುವರೆಸುವ ಸಲುವಾಗಿ ೨೦೨೦ ರ ಯೋಜನೆಯನ್ನು ೨೫ ಎಂದು ಬದಲಾಯಿಸಿದ್ದು ಈ ಯೋಜನೆಗೆ ೨ ಸಾವಿರ ಕೋಟಿ ರೂ ಹೆಚ್ಚುವರಿಯಾಗಿ ಅನುದಾನ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಇದಕ್ಕಾಗಿ ಗೃಹ ಇಲಾಖೆ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಪೊಲೀಸರ ನೇಮಕಾತಿಯಲ್ಲಿ ಸಾಕ? ಸುಧಾರಣೆ ತರಲಾಗಿದೆ. ಅಧುನಿಕ ಕಾಲದಲ್ಲಿ ಈಗಿನ ತಾಂತ್ರಿಕತೆಗೆ ತಕ್ಕಂತೆ ಅವರ ಕೌಶಲ್ಯ ಹೊಂದಿರುವ ಪದವೀಧರರನ್ನು ನೇಮಕ ಮಾಡಿಕೊಂಡು ಪೊಲೀಸ್ ಇಲಾಖೆ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಇದನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯದಲ್ಲಿ ೪೭ ಸೈಬರ್ ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ ಎಂದರು.

ಆದರೂ ಸೈಬರ್ ಅಪರಾಧಗಳ ಸಂಖ್ಯೆಯು ಹೆಚ್ಚಾಗುತ್ತಿದೆ ಇವುಗಳನ್ನು ನಿಭಾಯಿಸುವಲ್ಲಿ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿ ಇದ್ದು ಮಾದರಿಯಾಗಿದೆ. ಆದರೂ ಕೆಲವರು ಬೊಬ್ಬೆ ಹೊಡೆಯುತ್ತಾರೆ ಅವರ ಕಾಲದಲ್ಲಿ ಪ್ರಕರಣಗಳ ನೊಂದಣಿಯೇ ಕಡಿಮೆ ಇತ್ತು ಈಗ ಸೈಬರ್ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವುದು ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ ಎಂದು ಪರೋಕ್ಷವಾಗಿ ವಿಪಕ್ಷಗಳನ್ನು ಕುಟುಕಿದರು.

ಜನಪರವಾದ ಆಡಳಿತ ತರಬೇಕೆಂಬ ಉದ್ದೇಶದಿಂದ ತಮ್ಮ ನೇತೃತ್ವದಲ್ಲಿ ಪ್ರಣಾಳಿಕೆ ಸಿದ್ಧಪಡಿಸಿ ಅದರಂತೆ ಸರ್ಕಾರ ಜನಪರವಾದ ಆಡಳಿತ ನಡೆಸುತ್ತಿದೆ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರು ಮತ್ತು ಸಾಮಾನ್ಯ ಜನರ ಆರ್ಥಿಕ ಮಟ್ಟ ಸುಧಾರಣೆಯಾಗಿದೆ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಒಂದು ಕುಟುಂಬಕ್ಕೆ ಎಲ್ಲ ಯೋಜನೆಗಳಿಂದ ವ?ಕ್ಕೆ ಸರಾಸರಿ ೫೨ ಸಾವಿರ ರೂ ದೊರೆಯುತ್ತದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಹಣ ಹೊಂದಾಣಿಕೆ ಮಾಡುವ ವಿ?ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳನ್ನು ಹೊರತುಪಡಿಸಿದರೆ ಯಾವುದೇ ರೀತಿಯಿಂದಲೂ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸುವುದಿಲ್ಲ ಎಂದ ಅವರು ಪೊಲೀಸ್ ಇಲಾಖೆಯು ಸೇರಿದಂತೆ ತಾಲೂಕು ಕಚೇರಿಗಳಲ್ಲಿ ತಮ್ಮ ಸಮಸ್ಯೆಗಳನ್ನು ತರುವ ಜನರಿಗೆ ಒಳ್ಳೆ ರೀತಿಯಿಂದ ಸ್ಪಂದಿಸಿ ಜನಸ್ನೇಹಿ ಆಡಳಿತ ನಡೆಸುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕವಾಗಿ ಮಾತನಾಡಿದ ಡಿಜಿಪಿ ಹಾಗೂ ಪೋಲೀಸ್ ವಸತಿ ನಿಗಮದ ಅಧ್ಯಕ್ಷ ಡಾ. ಕೆ.ರಾಮಚಂದ್ರರಾವ್ ಮಾತನಾಡಿ ತಾವು ಈ ಜಿಲ್ಲೆಯಲ್ಲಿ ಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದನ್ನು ಮೆಲುಕು ಹಾಕಿದರಲ್ಲದೆ ಜಿ.ಪರಮೇಶ್ವರ್ ಅವರು ಹಿಂದಿನ ಹಾಗೂ ಪ್ರಸ್ತುತ ಅವಧಿಯಲ್ಲಿ ಗೃಹ ಸಚಿವರಾಗಿದ್ದಾಗ ಪೋಲೀಸ್ ಸಿಬ್ಬಂದಿಗೆ ವಸತಿ, ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ರಾಜ್ಯದ ಒಟ್ಟು ಸಿಬ್ಬಂದಿಯಲ್ಲಿ ಶೇಕಡ ೩೦ ರ? ಮಂದಿಗೆ ಅತ್ಯಾಧುನಿಕ ವಸತಿ ಸಮುಚ್ಚಯ ನಿರ್ಮಿಸಿ ಕ್ವಾರ್ಟಸ್ ನೀಡಲಾಗಿದೆ ಎಂದರು.

ಈ ಜಿಲ್ಲೆಯಲ್ಲಿ ಸಾವು ಸೇವೆ ಸಲ್ಲಿಸಿದ ಸಂದರ್ಭದಲ್ಲೇ ಯೋಜನೆ ರೂಪಿಸಿದಂತೆ ಬಾಳೆಹೊನ್ನೂರಿನಲ್ಲಿ ೩೬ ನಗರದಲ್ಲಿ ೩೬ ವಸತಿ ಸಂಸ್ಥೆಗಳನ್ನು ನಿರ್ಮಾಣ ಮಾಡಿದ್ದು, ೨ ಬೆಡ್ರೂಮ್‌ಗಳುಳ್ಳ ಅಟ್ಯಾಚ್ ಬಾತ್‌ರೂಮ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ನಿವಾಸಗಳನ್ನು ನಿರ್ಮಿಸಿ ಕೊಡಲಾಗಿದೆ. ಈ ಎಲ್ಲಾ ನಿವಾಸಗಳಿಗೆ ಪೈಪ್ಲೈನ್ ಮೂಲಕ ಅಡಿಗೆ ಅನಿಲ ಸಂಪರ್ಕ ಕಲ್ಪಿಸುವ ಯೋಜನೆಯನ್ನು ರೂಪಿಸುವಂತೆ ಗೃಹ ಸಚಿವರು ನಿರ್ದೇಶನ ನೀಡಿದ್ದು, ಮುಂದೆ ಅದೇ ರೀತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ ತಮ್ಮಯ್ಯ ಮಾತನಾಡಿ ಕರಾವಳಿ ಭಾಗಕ್ಕೆ ಸೇರ್ಪಡೆ ಆಗುವ ಪಶ್ಚಿಮ ವಲಯದಿಂದ ಈ ಜಿಲ್ಲೆಯನ್ನು ಬೇರ್ಪಡಿಸುವಂತೆ ಹಾಗೂ ಪೊಲೀಸ್ ಸಿಬ್ಬಂದಿಯವರ ಮುಂಬಡ್ತಿ ವಿ?ಯದಲ್ಲಿ ಉಂಟಾಗಿರುವ ತೊಡಕುಗಳನ್ನು ಸರಿಪಡಿಸುವ ಸಲುವಾಗಿ ಔರಾದ್‌ಕರ್ ವರದಿಯನ್ನು ಸಂಪೂರ್ಣ ಅನು?ನಗೊಳಿಸುವಂತೆ ಗೃಹ ಸಚಿವರಿಗೆ ಮನವಿ ಮಾಡಿದರು.

sವೇದಿಕೆಯಲ್ಲಿ ಶಾಸಕರಾದ ಟಿ.ಡಿ ರಾಜೇಗೌಡ, ನಯನಮೋಟಮ್ಮ, ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ, ಪಶ್ಚಿಮ ವಲಯ ಉಪ ಮಹಾನಿರೀಕ್ಷಕ ಡಾ. ಚಂದ್ರಗುಪ್ತ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಮಂಜುನಾಥ್, ಚನ್ನಬಸಪ್ಪ, ಶೀಲಾದಿನೇಶ್, ಗಾಯತ್ರಿ ಶಾಂತೇಗೌಡ, ಎಎಸ್ಪಿ ಕೃ?ಮೂರ್ತಿ ಉಪಸ್ಥಿತರಿದ್ದರು.

Inauguration of residential complex of 36 police quarters

About Author

Leave a Reply

Your email address will not be published. Required fields are marked *

You may have missed