September 19, 2024

ಬ್ಲೂಮ್ ಬಯೋಟೇಕ್ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ

0
ಬ್ಲೂಮ್ ಬಯೋಟೇಕ್ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ

ಬ್ಲೂಮ್ ಬಯೋಟೇಕ್ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿಯ ಗರಿ

ಚಿಕ್ಕಮಗಳೂರು: ನಗರದ ಹಂಪಾಪುರದಲ್ಲಿರುವ ಬ್ಲೂಮ್ ಬಯೋಟೇಕ್ ಸಂಸ್ಥೆಗೆ ಸಿಓಎಸ್‌ಐಡಿಐಸಿಐ (ಕೌನ್ಸಿಲ್ ಆಫ್ ಸ್ಟೇಟ್ ಇಂಡಸ್ಟ್ರೀಯಲ್ ಡಿವೆಲಪ್‌ಮೆಂಟ್ ಆಂಡ್ ಇನ್‌ವೆಸ್ಟ್‌ಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ) ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ ಎಂದು ಬ್ಲೂಮ್ ಬಯೋಟೇಕ್ ಸಂಸ್ಥೆಯ ಮುಖ್ಯಸ್ಥರಾದ ಸುಹಾಸ್ ಮೋಹನ್ ಅವರು ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಕೊಯಮತ್ತೂರಿನಲ್ಲಿ ಡಿಸೆಂಬರ್ ೧೫ ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದರು. ಹಂಪಾಪುರ ಬಳಿ ಬಯೋ ಕಂಟ್ರೋಲ್ ಪ್ರಾಡೆಕ್ಟ್ ಲ್ಯಾಬ್ (ಜೈವಿಕ ನಿಯಂತ್ರಕಗಳ ಉತ್ಪಾಧನ ಪ್ರಯೋಗಾಲಯ)ವನ್ನು ೨೦೧೩ ರಲ್ಲಿ ಸ್ಥಾಪನೆ ಮಾಡಲಾಗಿದ್ದು,

ಇದರ ಮೂಲ ಉದ್ದೇಶ ಕೃಷಿಯಲ್ಲಿ ಕಂಡು ಬರುವ ಜೈವಿಕ ಪೀಡೆ ನಾಶಕ ತಯಾರು ಮಾಡುವುದು, ಇದೊಂದು ಜೈವಿಕ ಗೊಬ್ಬರ ತಯಾರಿಕಾ ಘಟಕ. ಇಲ್ಲಿ ಟೈಕೊಡರ್ಮ ಹಾರ್ಜಿಯಾನಂ, ಸುಡೋ ಮೋನಾಸ್, ಪಿಎಸ್‌ಬಿ, ಆಝಟೋಬ್ಲಾಕ್ಟರ್, ಅಜೋಸೈಂಲಂ ಮತ್ತಿತರ ಜೈವಿಕ ಗೊಬ್ಬರ ಉತ್ಪಾಧಿಸಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಚಿಕ್ಕಮಗಳೂರಿನ ಎಜಿಎಂ ಬಾಲಸುಬ್ರಹ್ಮಣ್ಯ ಮಾತನಾಡಿ, ಈ ಸಂಸ್ಥೆಯ ಸ್ಥಾಪನೆಗೆ ಕೆಎಸ್‌ಎಫ್‌ಯಿಂದ ೨೦೧೩ರಲ್ಲಿ ಆರ್ಥಿಕ ನೆರವು ನೀಡಲಾಗಿದ್ದು, ಸಂಸ್ಥೆ ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿದೆ. ಕೆಎಸ್‌ಎಫ್‌ಸಿ ಮೈಸೂರು ವಿಭಾಗದಲ್ಲಿನ ೮ ಜಿಲ್ಲೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯೂ ಕೂಡ ಒಂದು. ಈ ಬಾರಿ ಬ್ಲೂಮ್ ಬಯೋಟೇಕ್ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿ ಬಂದಿರುವುದು ನಮ್ಮ ಸಂಸ್ಥೆಯ ವಿಭಾಗಕ್ಕೆ ಮಾತ್ರವಲ್ಲ, ಚಿಕ್ಕಮಗಳೂರು ಜಿಲ್ಲೆಗೂ ಹೆಮ್ಮೆಯ ವಿಷಯ ಎಂದರು.

ಜೈವಿಕ ಗೊಬ್ಬರ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಈ ಸಂಸ್ಥೆಯಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ರೈತರಿಗೂ ಅನುಕೂಲವಾಗಿದೆ. ಅದ್ದರಿಂದ ನಮ್ಮ ವಲಯದಿಂದ ಬ್ಲೂಮ್ ಬಯೋಟೇಕ್ ಸಂಸ್ಥೆಯ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು ಎಂದು ಹೇಳಿದರು.

Feather of National Award for Bloom Biotech Institute

About Author

Leave a Reply

Your email address will not be published. Required fields are marked *

You may have missed