September 19, 2024

ವಿಶ್ವಹಿಂದೂ ಪರಿಷತ್ ದತ್ತಪೀಠ ಹೊರಾಟ ಕೈಗೆತ್ತಿಕೊಂಡು ಮುಕ್ತಿಕಾಣಿಸಲಿದೆ

0
ದತ್ತ ಜಯಂತಿ ಉತ್ಸವ-೨೦೨೩ರ ಧಾರ್ಮಿಕ ಸಭೆ

ಚಿಕ್ಕಮಗಳೂರು:  ಅಯೋಧ್ಯೆಯ ಹೋರಾಟವನ್ನು ತಾರ್ಕಿಕ ಅಂತ್ಯಕಾಣಿಸಿ ರಾಮಮಂದಿರ ನಿರ್ಮಿಸಿದಂತೆ ವಿಶ್ವಹಿಂದೂ ಪರಿಷತ್ ದತ್ತಪೀಠ ಹೊರಾಟ ಕೈಗೆತ್ತಿಕೊಂಡು ಮುಕ್ತಿಕಾಣಿಸಲಿದೆ ಎಂದು ವಿಶ್ವ ಹಿಂದೂ ಪರಿಷತ್ ನ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಶಂಕರ್ ಗಾಯ್ಕರ್ ಹೇಳಿದರು.

ವಿಶ್ವ ಹಿಂದೂ ಪರಿಷದ್, ಭಜರಂಗದಳ ವತಿಯಿಂದ ಸೋಮವಾರ ಸಂಜೆ ನಡೆದ ದತ್ತ ಜಯಂತಿ ಉತ್ಸವ-೨೦೨೩ರ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು ಕಳೆದ ೩೦ ವರ್ಷಗಳ ಹಿಂದೆ ಆರಂಭಿಸಿದ ದತ್ತಪೀಠದ ಹೋರಾಟಕ್ಕೆ ದೊರೆತಿರುವ ಜಯಮೊದಲಮೆಟ್ಟಿಲಾಗಿದ್ದು ಈ ಗೌರವ ಸಮಸ್ತ ಹಿಂದೂ ಸಮಾಜಕ್ಕೆ ಸಲ್ಲಬೇಕೆಂದರು.

ಧಾರ್ಮಿಕ ಅಂಧಶ್ರದ್ದೆಯಿಂದ ಬಳಲುತ್ತಿರುವ ಹಿಂದೂ ಸಮಾಜದ ಯುವಕರನ್ನು ವಿಶ್ವಹಿಂದೂ ಪರಿಷತ್ ಜಾಗೃತಿಗೊಳಿಸಲು ಮುಂದಾಗಿದ್ದು, ಹಿಂದೂ ಯುವಕರು ಮುಂಬರುವ ದಿನಗಳಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಸನ್ನಧ್ದರಾಗಬೇಕೆಂದು ಕರೆನೀಡಿದರು.

ಬಜರಂಗದಳ ಪ್ರಾಂತಿಯ ಸಂಯೋಜಕ ಕೆ.ಆರ್ ಸುನೀಲ್ ಮಾತನಾಡಿ ದತ್ತಪೀಠ ಹೋರಾಟ ಸಾಮಾಜಿಕ ,ರಾಜಕೀಯ, ಧಾರ್ಮಿಕ ಕ್ರಾಂತಿ ಮಾಡಿದ ಸ್ವಾತಂತ್ರ್ಯನಂತರ ಬಹುದೊಡ್ಡ ಹೋರಾಟ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್ ನಿರಂತರ ಹೋರಾಟ, ಕರ ಸೇವೆಯ ಪ್ರತಿಫಲವಾಗಿ ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣೆಯನ್ನು ನಾವೆಲ್ಲಾ ನೋಡಲಿದ್ದೇವೆ. ರಾಮನ ಪ್ರತಿಷ್ಠಾಪನೆಯ ಕಾಲದಲ್ಲಿರುವ ನಾವೆಲ್ಲ ಪುಣ್ಯವಂತರು. ಅದೇ ರೀತಿಯಾಗಿ ದತ್ತ ಪೀಠಮುಕ್ತಿ ಆಂದೋಲನವನ್ನು ೨೫ ವರ್ಷದಿಂದ ಮಾಡುತ್ತಾ ಬಂದಿದ್ದೇವೆ. ಅದರ ಫಲವಾಗಿ ಹಿಂದೂ ಅರ್ಚಕರನೇಮಕ, ತ್ರಿಕಾಲ ಪೂಜೆ, ವ್ಯವಸ್ಥಾಪನಾಸಮಿತಿಯ ನೇಮಕವಾಗಿದೆ ಎಂದರು.

ಭಯೋತ್ಪಾದನೆ, ಲವ್ ಜಿಹಾದ್, ಮತಾಂತರದ ವಿರುದ್ಧ ವಿಶ್ವ ಹಿಂದೂ ಪರಿಷದ್ ನಿರಂತರವಾಗಿ ಹೋರಾಡುತ್ತಾ ಬಂದಿದೆ. ಜಗತ್ತಿನಲ್ಲಿ ಹಿಂದೂಗಳಿಗಿರುವುದು ಒಂದೇ ಭಾರತ ಅದಕ್ಕಾಗಿನಾವೆಲ್ಲಾ ಸ್ವಾಭಿಮಾನಿಗಳಾಗಿ ಸಂಘಟಿತರಾಗಬೇಕಾಗಿದೆ ಎಂದರು.

ಇಡೀ ದತ್ತ ಪೀಠದ ಹೋರಾಟಕ್ಕೆ ಕೇಶವ ರಾವ್ ಹೆಗಡೆಯವರ ಮಾರ್ಗದರ್ಶನ ಬಹಳ ಪ್ರಮುಖವಾದದ್ದು ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುತ್ತಿರುವುದು ಅನುಕರಣೀಯ ಎಂದು ಹೇಳೀದ ಅವರು

ಗಣೇಶನ ಹಬ್ಬ , ದತ್ತ ಜಯಂತಿ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೂ ಅನುಮತಿ ಪಡೆಯಬೇಕಾದ ದುಸ್ಥಿತಿಯಲ್ಲಿ ನಾವಿದ್ದೆವೆ ಎಂದು ವಿಷಾಧಿಸಿದರು.

ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಕಾರ್ಯದರ್ಶಿ ರಂಗನಾಥ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾತಂತ್ರ್ಯಪೂರ್ವದಲ್ಲಿ ಅಂದಿನ ಮೈಸೂರು ಮಹಾರಾಜರು ದತ್ತಾತ್ರೇಯರ ಪವಿತ್ರ ಗುಹೆಯ ಕಾವಲುಗಾರನ್ನಾಗಿ ಬಾಬಾಬುಡೆನ್ ಎಂಬ ಫಕೀರನನ್ನು ನೇಮಿಸಿತ್ತು,
ಸ್ವಾತಂತ್ರ್ಯತಂದುಕೊಟ್ಟೆವು ಎಂದು ಹೇಳಿಕೊಳ್ಳು ಪಕ್ಷದ ಹಿಂದೂ ವಿರೋಧಿ ನೀತಿಯ ಫಲವಾಗಿ ಚಂದ್ರದ್ರೋಣ ಪರ್ವತ ಬಾಬಾಬುಡನ್ ಗಿರಿಯಾಗಿ ಪರಿವರ್ತನೆಯಾಯಿತು ಎಂದು ಕಿಡಿಕಾರಿದರು.

ಈ ವೇದಿಕೆಯಲ್ಲಿ ದತ್ತಪೀಠ ಮುಕ್ತಿಗಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ವಕೀಲ ಜಗದೀಶ್ ಬಾಳಿಗಾರವರನ್ನು ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಶಂಕರದೇವರ ಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಧಾರ್ಮಿಕ ಪರಿಷತ್‌ನ ದ್ವಾರಕನಾಥ ಗುರೂಜಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ ಪೈ, ಜಿಲ್ಲಾ ಸಹಕಾರ್ಯದರ್ಶಿ ಅಮಿತ್, ಭಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ, ಭಜರಂಗದಳ ವಿಭಾಗೀಯ ಸಂಚಾಲಕ ಶಶಾಂಕ್, ಮಹಿಪಾಲ್, ಶಶಾಂಕ್ ಇದ್ದರು

The Vishwa Hindu Parishad will take up the Dattapeeth campaign and make it free

About Author

Leave a Reply

Your email address will not be published. Required fields are marked *

You may have missed