September 16, 2024

ಆರೋಗ್ಯವಂತ ಮಹಿಳೆಯರು ಜಗತ್ತನ್ನೆ ಗೆಲ್ಲಬಲ್ಲರು – ಡಾ. ರಮ್ಯ

0
ಮಹಿಳಾ ಸಂಘ ವತಿಯಿಂದ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ಸಭೆ

ಮಹಿಳಾ ಸಂಘ ವತಿಯಿಂದ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ಸಭೆ

ಚಿಕ್ಕಮಗಳೂರು: ಆರೋಗ್ಯವಂತ ಮಹಿಳೆಯರು ಜಗತ್ತನ್ನೇ ಗೆಲ್ಲಬಹುದು ಮಹಿಳೆಯರು ಸಂಘ ಸಂಸ್ಥೆಗಳ ಮುಖಾಂತರ ಉತ್ತಮ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಅಂಕೊಲಾಜಿ ಗೈನೆಕಾಲಜಿಕ್ ಡಾ. ಡಿ.ಆರ್.ರಮ್ಯ ತಿಳಿಸಿದರು.

ಮಂಗಳವಾರ ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ವತಿಯಿಂದ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ಸಭೆ ಮತ್ತು ವಾರ್ಷಿಕೋತ್ಸವ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಚಿಕ್ಕಮಗಳೂರಿನ ಮಹಿಳೆಯರು ಉತ್ತಮ ಸಂಸ್ಕೃತಿ ಸಂಸ್ಕಾರವನ್ನು ಆಧುನಿಕ ಯುಗದಲ್ಲೂ ಇಟ್ಟುಕೊಂಡು ರಾಜ್ಯಕ್ಕೆ ನಿಮ್ಮ ಮಹಿಳಾ ಸಂಘ ಮಾದರಿಯಾಗಿದೆ ಎಂದರು.

ಮಹಿಳೆಯರು ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು, ಯಾವುದೇ ಸಣ್ಣ ಸಮಸ್ಯೆ ಇದ್ದರು ವೈದ್ಯರನ್ನು ಕಂಡು ಸೂಕ್ತ ಪರಿಹಾರ ಕಂಡುಕೊಳ್ಳಬೇಕು, ಪ್ರತಿ ವರ್ಷ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗಲಿದೆ ಎಂದರು.

ಸಂಘದಿಂದ ಮಹಿಳೆಯರಿಗೆ ಹಲವು ರೀತಿಯ ಅವಕಾಶಗಳು ದೊರೆಯುವಂತೆ ಮಾಡುವುದರ ಜೊತೆಗೆ ಮಕ್ಕಳಿಗೆ ಪ್ರೋತ್ಸಾಹ, ನೀಡುತ್ತಿರುವುದು ಒಕ್ಕಲಿಗರ ಮಹಿಳಾ ಸಂಘ ಎಂದರು, ಶಾಲೆಗಳು ನಮ್ಮ ವ್ಯಕ್ತಿತ್ವವನ್ನು ಬದಲಾವಣೆ ಮಾಡುವಂತಹ ವಿದ್ಯಾಭ್ಯಾಸ ನಮಗೆ ಸಿಗುವಂತೆ ಇರಬೇಕು, ನಮ್ಮಲ್ಲಿ ಮನೋಸ್ಥೈರ್ಯವನ್ನು ತುಂಬುವಂತ ಶಿಕ್ಷಕರಿರಬೇಕು, ಪುಸ್ತಕದ ಜ್ಞಾನದ ಜೊತೆಯಲ್ಲಿ ಪ್ರಪಂಚ ಜ್ಞಾನವನ್ನು ಅರಿತಿರಬೇಕು, ಸಮಯ ಪ್ರಜ್ಞೆಯಿಂದ ಸಾಧನೆ ಮಾಡುವ ಅವಕಾಶ ಸಿಗುತ್ತದೆ, ೧೮ ವರ್ಷಗಳಿಂದ ಮಹಿಳೆಯರನ್ನು ಒಂದೆಡೆ ಒಗ್ಗೂಡಿಸಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ನೆಡೆಸಿಕೊಂಡು ಬಂದಿರುವುದಕ್ಕೆ ಮಹಿಳೆಯರಲ್ಲಿ ಇರುವ ತಾಳ್ಮೆ, ಜ್ಞಾನ ಮತ್ತು ಸಮಯ ಪ್ರಜ್ಞೆಯಿಂದ ಮಾತ್ರ ಸಾದ್ಯ ಎಂದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಟಿ.ರಾಜಶೇಖರ್ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ ನಮ್ಮ ಹಿರಿಯರು ಎಲ್ಲಾ ಮಹಿಳೆಯರನ್ನು ಒಂದೆಡೆ ಒಗ್ಗೂಡಿಸುವ ಸಲುವಾಗಿ ಅವರ ಮಾರ್ಗದರ್ಶನದಲ್ಲಿ ೧೮ ವರ್ಷಗಳಿಂದ ನೆಡೆಸಿಕೊಂಡು ಬಂದಿದ್ದು, ಇಂದು ಹಿಡೀ ರಾಜ್ಯದಲ್ಲಿಯೇ ಚಿಕ್ಕಮಗಳೂರು ಮಹಿಳಾ ಒಕ್ಕಲಿಗರ ಸಂಘವು ಹೆಸರಾಗಿದೆ ಎಂದರು.

ಸೇವಾ ಮನೋಭಾವನೆಯಿಂದ ಸಂಘ ಸಂಸ್ಥೆಗಳನ್ನು ಕಟ್ಟುವುದು ಸುಲಬದ ಮಾತಲ್ಲ, ನಮ್ಮ ಜಿಲ್ಲೆಯ ಮಹಿಳಾ ಸಂಘವು ಅತ್ಯತ್ತಮವಾಗಿ ಸಮಾಜಸೇವೆ ಮಾಡುವುದರ ಜೊತೆಗೆ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ, ಸಂಘ ಒಡೆಯುವ ಕೆಲಸವನ್ನು ಯಾರು ಮಾಡಬಾರದು ಎಂದರು.

ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಸವಿತಾರಮೇಶ್ ಮಾತನಾಡಿ ಮಹಿಳಾ ಸಂಘದಿಂದ ನಮ್ಮ ಅವದಿಯಲ್ಲಿ ರಾಜ್ಯ ಮಟ್ಟದ ಥ್ರೋಬಾಲ್ ಸ್ವರ್ಧೇ, ಫ್ಯಾಷನ್ ಷೋ ಮತ್ತು ಸತ್ಸಂಗ ಕಾರ್ಯಕ್ರಮವನ್ನು ಮಾಡುವುದರ ಜೊತೆಗೆ ಪ್ರತಿ ತಿಂಗಳ ಮೊದಲನೆಯ ಮಂಗಳವಾರ ಸದಸ್ಯರಿಗೆ ಸಾಂಸ್ಕೃತಿಕ ಮತ್ತು ಇತರೆ ಕಾರ್ಯಕ್ರಮಗಳನ್ನು ನೆಡೆಸಲಾಗಿದೆ ಎಂದರು.

ಮಹಿಳಾ ಸಂಘಕ್ಕೆ ಈಗಾಗಲೇ ಸ್ವಂತ ಜಾಗವಿದ್ದು ಮುಂದಿನ ದಿನಗಳಲ್ಲಿ ಸಮುದಾಯ ಭವನ ಕಟ್ಟುವ ಕೆಲಸಕ್ಕೆ ಚರ್ಚಿಸಲಾಗಿದೆ, ಎಲ್ಲಾ ಸದಸ್ಯರು ಸರ್ವ ಸದಸ್ಯರ ಸಭೆಗೆ ಆಗಮಿಸಿ ತಮ್ಮ ಅಮೂಲ್ಯ ಸಲಹೆ ಸಹಕಾರ ನೀಡಿ ಜನಾಂಗ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎನ್.ಲಕ್ಷ್ಮಣ್‌ಗೌಡ, ಮಹಿಳಾ ಸಂಘದ ಉಪಾಧ್ಯಕ್ಷೆ ಸ್ಮಿತಾಸುರೇಶ್, ಗೌರವ ಕಾರ್ಯದರ್ಶಿ ಜಾಹ್ನವಿಜಯರಾಮ್, ಸಹಕಾರ್ಯದರ್ಶಿ ಶಿಲ್ಪಾವಿಜಯ್, ನಿರ್ದೇಶಕರುಗಳಾದ ಸುಭದ್ರನಾರಾಯಣ್, ಶಾಲಿನಿಸುಬ್ರಹ್ಮಣ್ಯ, ನಾಗರತ್ನಜಗಧೀಶ್, ಮಂಜುಮಂಜುನಾಥ್ ಗೌಡ, ಕೃಷ್ಣವೇಣಿರಮೇಶ್, ಭಾಗ್ಯಮಹೇಂದ್ರ, ಅಂಜನಾರವಿ, ವೇದಶ್ರೀಸತೀಶ್, ಚಂಪಾಸುದರ್ಶನ್, ಸಂದ್ಯಾನಾಗೇಶ್, ಅನ್ವಿತಚರಣ್ ಉಪಸ್ಥಿತರಿದ್ದರು.

A meeting of all members of women’s association

About Author

Leave a Reply

Your email address will not be published. Required fields are marked *