September 16, 2024

ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ

0
ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ

ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ

ಚಿಕ್ಕಮಗಳೂರು:  ಕಡೂರು ತಾಲೂಕಿನ ಯಗಟಿಯಲ್ಲಿ ನಡೆಯಲಿರುವ ತಾಲೂಕು ದ್ವಿತೀಯ ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಕುಂಕನಾಡು ಓಂಕಾರ ಮೂರ್ತಿ ಅವರಿಗೆ ಕರ್ನಾಟಕ ಜಾನಪದ ಪರಿಷತ್ ಸೋಮವಾರ ಅಧಿಕೃತ ಆಹ್ವಾನ ನೀಡಿತು

ಕುಂಕನಾಡು ಗ್ರಾಮದ ಓಂಕಾರ ಮೂರ್ತಿ ಅವರ ಮನೆಗೆ ಬೆಳಿಗ್ಗೆ ತೆರಳಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಮನವಿ ಮಾಡಿದರು

ಈ ವೇಳೆ ಮಾತನಾಡಿದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ ಬಿ ಸುರೇಶ್ ಕಡೂರು ತಾಲೂಕು ಮಟ್ಟದ ದ್ವಿತೀಯ ಜಾನಪದ ಸಮ್ಮೇಳನ ಜನವರಿ ೧೬ರಂದು ಯಗಟಿಯಲ್ಲಿ ನಡೆಯಲಿದ್ದು ಜಾನಪದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹಲವು ದಶಕಗಳಿಂದ ಶ್ರಮಪಟ್ಟು ಉಳಿಸಿ ಬೆಳೆಸುತ್ತಿರುವ ಓಂಕಾರ ಮೂರ್ತಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದು ತಮಗೆ ಅತ್ಯಂತ ಹೆಮ್ಮೆ ಮತ್ತು ತೃಪ್ತಿ ತಂದಿದೆ ಎಂದರು

ಮೂಲತಃ ಶಿಲ್ಪಿಯಾಗಿರುವ ಓಂಕಾರ ಮೂರ್ತಿಯವರು ರಾಜ್ಯದ ವಿವಿದೆಡೆ ಹಲವಾರು ದೇವಸ್ಥಾನಗಳಿಗೆ ಗೋಪುರಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು

ಕಡೂರು ತಾಲೂಕು ಅಧ್ಯಕ್ಷ ಜಗದೀಶ್ವರಾ ಚಾರ್ ಮಾತನಾಡಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ವಿವಿಧ ಜಾನಪದ ಕಲಾತಂಡಗಳ ನಡುವೆ ವೈಭವದಿಂದ ನಡೆಸಲಾಗುವುದು ಎಂದು ತಿಳಿಸಿದರು

ಸಮ್ಮೇಳನದಲ್ಲಿ ವಿವಿಧ ಜಾನಪದ ಗೋಷ್ಠಿಗಳು ಜಾನಪದ ಗೀತೆಗಳ ಗಾಯನ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿಧೆ ಶಾಸಕರು ಸೇರಿದಂತೆ ಹಿರಿಯ ಜಾನಪದ ತಜ್ಞರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು

ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಂಕನಾಡು ಓಂಕಾರ ಮೂರ್ತಿ ಸಮ್ಮೇಳನ ಅಧ್ಯಕ್ಷರನ್ನಾಗಿ ತಮ್ಮನ್ನು ಆಯ್ಕೆ ಮಾಡಿರುವುದು ತಮಗೆ ಅತ್ಯಂತ ಸಂತಸ ಮತ್ತು ಹೆಮ್ಮೆ ತಂದಿದೆ ಎಂದರು

ಕರ್ನಾಟಕ ಜಾನಪದ ಪರಿಷತ್ತಿನ ಕಡೂರು ತಾಲೂಕು ಕಾರ್ಯದರ್ಶಿ ಕುಂಕನಾಡು ನಾಗರಾಜ್ ಹಿರಿಯ ವೀರಗಾಸೆ ಕಲಾವಿದ ಡಾ ಮಾಳೇನಹಳ್ಳಿ ಬಸಪ್ಪ ಜಿಲ್ಲಾ ಉಪಾಧ್ಯಕ್ಷ ಜಿಎಸ್ ತಿಪ್ಪೇಶ್ ಸಂಘಟನಾಕಾರ್ಯದರ್ಶಿ ಚಿಕ್ಕನಲ್ಲೂರು ಜಯಣ್ಣ ಪರಮೇಶ್ವರಪ್ಪ ಶಂಕರ್ ಮಲ್ಯಪ್ಪ ಹಾಜರಿದ್ದರು

Official invitation to the Conference President of the Folk Conference

About Author

Leave a Reply

Your email address will not be published. Required fields are marked *