September 16, 2024

ಸರ್ಕಾರಿ ಭೂಮಿ ಖಾಸಗಿಯವರಿಗೆ ಖಾತೆ ಮಾಡುವ ಯತ್ನ ವಿರೋಧಿಸಿ ಪ್ರತಿಭಟನೆ

0
ಸರ್ಕಾರಿ ಭೂಮಿ ಖಾಸಗಿಯವರಿಗೆ ಖಾತೆ ಮಾಡುವ ಯತ್ನ ವಿರೋಧಿಸಿ ಪ್ರತಿಭಟನೆ

ಸರ್ಕಾರಿ ಭೂಮಿ ಖಾಸಗಿಯವರಿಗೆ ಖಾತೆ ಮಾಡುವ ಯತ್ನ ವಿರೋಧಿಸಿ ಪ್ರತಿಭಟನೆ

ಚಿಕ್ಕಮಗಳೂರು:  ಎಸ್ಸಿ. ಎಸ್‌ಟಿ ಸಮುದಾಯದ ಉಪಯೋಗಕ್ಕಾಗಿ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಹೆಸರಿಗೆ ಮಂಜೂರು ಮಾಡಿಕೊಡುವಂತೆ ಕೇಳಿಕೊಂಡಿದ್ದ ಜಮೀನನ್ನು ಖಾಸಗಿಯ ವ್ಯಕ್ತಿಗಳಿಗೆ ಖಾತೆ ಮಾಡಿಕೊಡಲು ಪ್ರಯತ್ನಿಸಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳ ಮುಖಂಡರುಗಳು ಹಾಗೂ ಆಮ್‌ಅದ್ಮಿ ಪಕ್ಷದ ಪಾದಾಧಿಕಾರಿಗಳು ತಾಲೂಕು ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.

ಇಲ್ಲಿನ ಅಂಬೇಡ್ಕರ್ ವಾದದ ದಸಂಸ ಸಂಚಾಲಕ ಮರ್ಲೆ ಅಣ್ಣಯ್ಯ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರುಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಎ.ಎ.ಪಿ ರಾಜ್ಯ ಮಾಧ್ಯಮ ಪ್ರಮುಖ ಅನಿಲ್ ನಾಚಪ್ಪ ಜಿಲ್ಲಾಧ್ಯಕ್ಷ ಲಿಂಗಾರಾಧ್ಯ ಡಾ|| ಕೆ.ಸುಂದರಗೌಡ, ಎಂ.ಪಿ ಈರೇಗೌಡ ಇವರುಗಳು ಭಾಗವಹಿಸುವ ಮೂಲಕ ದಲಿತ ಸಂಘಟನೆಗಳ ಮುಖಂಡರ ಪ್ರತಿಭಟನೆಗೆ ಬೆಂಬಲ ನೀಡಿದರು.

ನಗರಕ್ಕೆ ಸಮೀಪದ ಗವನಹಳ್ಳಿ ಸರ್ವೆ ನಂಬರ್ ೯೩ ರಲ್ಲಿ ಖಾಲಿ ಇರುವ ಸರ್ಕಾರಿ ಜಮೀನನ್ನು ದಲಿತ ಸಮೂಹಗಳ ಬಳಕೆಗೆ ಮಂಜೂರು ಮಾಡಿಕೊಡುವಂತೆ. ಹಲವಾರು ಮನವಿಗಳನ್ನು ಸಲ್ಲಿಸಿದ್ದರು. ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು ಈ ಜಮೀನಿನ ಪಕ್ಕದಲ್ಲಿ ಇರುವ ಹಿಡುವಳಿ ಜಮೀನಿಗೆ ಪಹಣಿ ಬದಲಾವಣೆ ಮಾಡಿಕೊಂಡು ಖಾಸಗಿ ವ್ಯಕ್ತಿಗಳು ಸರ್ಕಾರಿ ಭೂಮಿ ಕಬಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಡಾ. ಸುಮಂತ್ ರಾಜ್ ಅವರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರಲ್ಲದೆ ಉದ್ದೇಶಿತ ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ಜಮೀನು ಮಂಜೂರು ಮಾಡಿಕೊಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವಿವಿಧ ಸಂಘಟನೆಗಳ ಮುಖಂಡರುಗಳಾದ ಹುಣಸೆಮಕ್ಕಿ ಲಕ್ಷ್ಮಣ, ಮಂಜುನಾಥ್ ನಂಬಿಯಾರ್, ಸಂವಿಧಾನ ರಕ್ಷಣಾ ವೇದಿಕೆಯ ಕೃ?ಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Protest against the attempt to transfer government land to private individuals

About Author

Leave a Reply

Your email address will not be published. Required fields are marked *